ಸೈಮಾ ಅವಾರ್ಡ್ಸ್ ನಲ್ಲಿ ದಾಖಲೆ ಬರೆದ ಚಾಲೆಂಜಿಂಗ್ ಸ್ಟಾರ್ ನಟನೆಯ ಯಜಮಾನ ಚಿತ್ರ, ಬಾಚಿಕೊಂಡ ಪ್ರಶಸ್ತಿಗಳೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಒಬ್ಬ ನಟನಿಗೆ ಹಾಗೂ ಒಂದು ಚಿತ್ರಕ್ಕೆ ಕೊಡಬಹುದಾದ ಅತ್ಯುನ್ನತ ಗೌರವವೆಂದರೆ ಖಂಡಿತವಾಗಿಯೂ ಅವಾರ್ಡ್ಗಳು ಎಂದು ಹೇಳಬಹುದಾಗಿದೆ. ಇನ್ನು ದಕ್ಷಿಣಭಾರತದ ಅತ್ಯಂತ ಪ್ರತಿಷ್ಠಿತ ಅವಾರ್ಡ್ ಗಳಲ್ಲಿ ಸೈಮಾ ಅವಾರ್ಡ್ಸ್ ಕೂಡ ಒಂದು. ಹೌದು ಗೆಳೆಯರೇ ಈ ಬಾರಿಯ ಸೈಮಾ ಅವಾರ್ಡ್ಸ್ 2021 ಈಗಾಗಲೇ ನಡೆಯುತ್ತಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸೂಪರ್ ಹಿಟ್ ಚಿತ್ರ ಯಜಮಾನ ಈಗಾಗಲೇ ಬರೋಬ್ಬರಿ ಎಂಟು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಹೌದು ಸ್ನೇಹಿತರೆ ನಿರ್ದೇಶನದಲ್ಲಿ ಹಾಗೂ ಶೈಲಜಾ ನಾಗ್ ಮತ್ತು ಬಿ ಸುರೇಶ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಶ್ಮಿಕ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟನೆ ಮಾಡಿರುವ ಯಜಮಾನ ಚಿತ್ರದ ಯಶಸ್ಸನ್ನು ನೀವು ಈಗಾಗಲೇ ಈ ಹಿಂದೆ ಬಾಕ್ಸಾಫೀಸ್ ನಲ್ಲಿ ಕೂಡ ನೋಡಿದ್ದೀರಿ. ಈಗ ಈ ಚಿತ್ರ ಎರಡು ವರ್ಷಗಳ ನಂತರ ಪ್ರಶಸ್ತಿ ಬಾಚುವುದುರಲ್ಲೂ ಕೂಡ ಅದೇ ಮಟ್ಟದ ಯಶಸ್ಸನ್ನು ಪಡೆದುಕೊಂಡಿದೆ. ಹೌದು ಸ್ನೇಹಿತರೆ ಈ ಬಾರಿಯ ಸೈಮಾ ಅವಾರ್ಡ್ಸ್ ಅಲ್ಲಿ ಯಜಮಾನ ಚಿತ್ರ ಬರೋಬ್ಬರಿ ಎಂಟು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು ಅವುಗಳು ಯಾವುವು ಎಂಬುದನ್ನು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ.

ಹೌದು ಸ್ನೇಹಿತರೆ ಯಜಮಾನ 8 ವಿಭಾಗದಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಮೊದಲನೆಯದಾಗಿ ಅತ್ಯುತ್ತಮ ನಾಯಕನಟನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಎರಡನೆಯದಾಗಿ ವಿಮರ್ಶಕರ ಪ್ರಕಾರ ಅತ್ಯುತ್ತಮ ನಾಯಕ ನಟಿಯಾಗಿ ರಶ್ಮಿಕ ಮಂದಣ್ಣ ರವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಯಜಮಾನ ಅತ್ಯಂತ ಉತ್ತಮ ಮೂವಿ ಎಂಬ ಪ್ರಶಸ್ತಿ ಪಡೆದುಕೊಂಡಿದೆ. ವಿ ಹರಿಕೃಷ್ಣ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಮತ್ತೊಮ್ಮೆ ವಿ ಹರಿಕೃಷ್ಣ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ದೇವರಾಜ್ ಅವರು ಪೋಷಕ ಪಾತ್ರಕ್ಕಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸಾಧುಕೋಕಿಲ ಅತ್ಯುತ್ತಮ ಹಾಸ್ಯನಟ ಪಾತ್ರಕ್ಕಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಕೂಡ ಯಜಮಾನ ಚಿತ್ರಕ್ಕೆ ಸಿಕ್ಕಿದೆ.

Post Author: Ravi Yadav