ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಯಾರೇ ಬಂದರೂ, ಎಷ್ಟೇ ಜನ ಬಂದು ಹೋದರೂ ಕನ್ನಡ ಚಿತ್ರರಂಗಕ್ಕೆ ಇವರೇ ನಿಜವಾದ ದೊಡ್ಡ ಯಜಮಾನ.

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಸೆಪ್ಟೆಂಬರ್ 18 ಎಂದಾಗ ನಮಗೆ ನೆನಪಾಗುವುದು ಒಂದೇ ದಿನ ಅದು ಕನ್ನಡ ಚಿತ್ರರಂಗ ಕಂಡಂತಹ ಮೇರುನಟ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್ ರವರ ಜನ್ಮ ದಿನ. ಹೌದು ಸ್ನೇಹಿತರೆ ಮೈಸೂರಿನಲ್ಲಿ ಸಂಪತ್ಕುಮಾರ್ ಆಗಿ ಜನಿಸಿ ನಂತರ ಕನ್ನಡದ ಚಿತ್ರರಂಗದ ಚಿತ್ರ ಬ್ರಹ್ಮ ಎಂದು ಖ್ಯಾತರಾಗಿರುವ ಪುಟ್ಟಣ್ಣ ಕಣಗಾಲ್ ರವರ ನಾಗರಹಾವು ಚಿತ್ರದ ಮೂಲಕ ರಾಮಾಚಾರಿಯ ಪಾತ್ರದಲ್ಲಿ ಮಿಂಚಿ ವಿಷ್ಣುವರ್ಧನ ಆಗಿರುವ ಇವರು ಕೇವಲ ತೆರೆಯ ಮೇಲಿನ ವ್ಯಕ್ತಿತ್ವದಿಂದ ಮಾತ್ರವಲ್ಲದೆ ತೆರೆಯ ಹಿಂದಿನ ವ್ಯಕ್ತಿತ್ವದಿಂದಲೂ ಕೂಡ ಎಲ್ಲರ ಮನಗೆದ್ದಿದ್ದಾರೆ.

ಇನ್ನ ಅಂದಿನ ಕಾಲದಲ್ಲಿ ಪಂಚ ಭಾಷೆಗಳಲ್ಲಿ ಕೂಡ ನಟಿಸಿ ಭಾರತೀಯ ಚಿತ್ರರಂಗದ ಫೀನಿಕ್ಸ್ ಎಂಬ ಖ್ಯಾತಿಗೆ ಒಳಗಾಗಿದ್ದಾರೆ. ಇನ್ನು ಸಾಹಸಸಿಂಹ ವಿಷ್ಣುವರ್ಧನ್ ರವರು 19 ಬಾರಿ ದ್ವಿ ಪಾತ್ರಗಳನ್ನು ಮಾಡುವ ಮೂಲಕ ಅತ್ಯಂತ ಹೆಚ್ಚು ದ್ವಿಪಾತ್ರದಲ್ಲಿ ನಟಿಸಿದ ಅಂತಹ ನಟ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇಂದಿಗೂ ಕೂಡ ಕನ್ನಡಚಿತ್ರರಂಗದಲ್ಲಿ ಅದೆಷ್ಟು ಜನ ಸ್ಟಾರ್ ನಟರಿಗೆ ವಿಷ್ಣುವರ್ಧನ್ ರವರು ಫೇವರಿಟ್ ನಟ ಆಗಿ ಹಾಗೂ ಸ್ಪೂರ್ತಿಯಾಗಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಒಟ್ಟಾರೆಯಾಗಿ ಇನ್ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಾಯಕ ನಟನಾಗಿ ವಿಷ್ಣುವರ್ಧನ್ ಅವರು ಕಾಣಿಸಿಕೊಂಡಿದ್ದಾರೆ. ಇನ್ನು ಸಾಹಸಸಿಂಹ ವಿಷ್ಣುವರ್ಧನ್ ರವರು ನಮ್ಮನ್ನೆಲ್ಲ 2009 ರ ಡಿಸೆಂಬರ್ 30ರಂದು ಆಗಲಿದ್ದಾರೆ. ದೈಹಿಕವಾಗಿ ನಮ್ಮನ್ನೆಲ್ಲಾ ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿರಬಹುದು ಆದರೆ ಮಾನಸಿಕವಾಗಿ ಇಂದಿಗೂ ಕೂಡ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತೆ ಅಜರಾಮರರಾಗಿದ್ದಾರೆ, ಇಂದು ಅವರ ಜನುಮ ಜಯಂತಿಯಂದು ಅವರನ್ನು ಸ್ಮರಿಸೋಣ ಸ್ನೇಹಿತರೆ. ಇದೇ ಸಮಯದಲ್ಲಿ ಇವರು ಮತ್ತೆ ಕನ್ನಡದ ಈ ಪುಣ್ಯ ಭೂಮಿಯಲ್ಲಿ ಹುಟ್ಟಿ ಬರಲಿ ಎಂದು ಇದೇ ಸಮಯದಲ್ಲಿ ಬೇಡಿಕೊಳ್ಳೋಣ.

Get real time updates directly on you device, subscribe now.