ಬಹು ನಿರೀಕ್ಷೆ ಮೂಡಿಸಿರುವ ಉಪನಾಯಕನ ಪಟ್ಟದಿಂದ ರೋಹಿತ್ ಔಟ್, ಯಾರಾಗಬಹುದು ಗೊತ್ತೇ??
ಬಹು ನಿರೀಕ್ಷೆ ಮೂಡಿಸಿರುವ ಉಪನಾಯಕನ ಪಟ್ಟದಿಂದ ರೋಹಿತ್ ಔಟ್, ಯಾರಾಗಬಹುದು ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತ ತಂಡದ ನಾಯಕತ್ವದಲ್ಲಿ ಬದಲಾವಣೆಯ ಗಾಳಿ ಕೇಳಲಾರಂಭಿಸಿವೆ. ನಾಯಕ ವಿರಾಟ್ ಕೊಹ್ಲಿ ಟಿ 20 ವಿಶ್ವಕಪ್ ಮುಗಿದ ನಂತರ ನಾಯಕತ್ವ ಸ್ಥಾನದಿಂದ ಇಳಿಯುತ್ತೇವೆ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ ಮುಂದಿನ ಭಾರತ ತಂಡದ ಟಿ 20 ನಾಯಕತ್ವವನ್ನು ರೋಹಿತ್ ಶರ್ಮಾ ಪಡೆಯುವುದು ಬಹುತೇಖ ಖಚಿತ ಎಂದು ಹೇಳಲಾಗುತ್ತಿದೆ. ಹಾಗಾಗಿ ಸದ್ಯ ಭಾರತ ತಂಡದ ಮುಂದಿನ ಉಪನಾಯಕ ಯಾರಾಗಬಹುದೆಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಸದ್ಯ ಉಪನಾಯಕನ ಸ್ಥಾನಕ್ಕೆ ಮೂರು ಹೆಸರುಗಳು ಕೇಳಿ ಬರುತ್ತಿವೆ. ಬನ್ನಿ ಅವರಾರು ಎಂದು ತಿಳಿಯೋಣ.
ಮೊದಲನೆಯದಾಗಿ ಕೆ.ಎಲ್.ರಾಹುಲ್ – ಸದ್ಯ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿರುವ ಕೆ.ಎಲ್.ರಾಹುಲ್ , ನಾಯಕನಾಗಿ ಕೆಲವು ಭಾರಿ ಟೀಂ ಇಂಡಿಯಾದ ಜವಾಬ್ದಾರಿಯನ್ನು ಸಹ ನಿರ್ವಹಿಸಿದ್ದಾರೆ. ಇನ್ನು ಯಾವ ಬ್ಯಾಟಿಂಗ್ ಕ್ರಮಾಂಕದಲ್ಲಾದರೂ, ತಂಡಕ್ಕೆ ಉತ್ತಮ ರೀತಿಯಲ್ಲಿ ನೆರವಾಗುವ ರಾಹುಲ್, ಭವಿಷ್ಯದ ದೃಷ್ಠಿಯಿಂದ ರಾಹುಲ್ ಗೆ ನಾಯಕತ್ವ ವಹಿಸುವುದು ಉತ್ತಮ ಎಂದು ಹೇಳಲಾಗಿದೆ.
ಎರಡನೆಯದಾಗಿ ರಿಷಭ್ ಪಂತ್ – ಸದ್ಯ 23 ವರ್ಷ ತುಂಬಿರುವ ರಿಷಭ್ ಪಂತ್ ಗೆ ಭವಿಷ್ಯದ ದೃಷ್ಠಿಯಿಂದ ಪಟ್ಟ ಕಟ್ಟುವ ಸಾಧ್ಯತೆ ಇದೆ. ಸದ್ಯ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಬ್ಯಾಟಿಂಗ್ ಹಾಗೂ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಪಂತ್ ಗೆ ಸಹ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ.
ಮೂರನೆಯದಾಗಿ ಜಸ್ಪ್ರಿತ್ ಬುಮ್ರಾ – ಉಪ ನಾಯಕತ್ವದ ರೇಸ್ ನಲ್ಲಿ ಡಾರ್ಕ್ ಹಾರ್ಸ್ ಎಂದೇ ಬಿಂಬಿತರಾಗಿರುವರು ಎಂದರೇ ಜಸ್ಪ್ರಿತ್ ಬುಮ್ರಾ. ಮೂರು ಮಾದರಿಯ ಕ್ರಿಕೇಟ್ ನಲ್ಲಿ ತಂಡದ ಖಾಯಂ ಸದಸ್ಯರಾಗಿರುವ ಬುಮ್ರಾಗೆ ಉಪ ನಾಯಕನ ಸ್ಥಾನ ನೀಡಬೇಕೆಂಬುದು ಕೆಲವರ ಅಂಬೋಣ. ಬಹಳ ವರ್ಷಗಳ ನಂತರ ವೇಗದ ಬೌಲರ್ ಗೆ ಉಪನಾಯಕತ್ವ ಸ್ಥಾನ ನೀಡಿದಂತಾಗುತ್ತದೆ.
ಆದರೇ ಸದ್ಯದ ರೇಸ್ ಪ್ರಕಾರ ಕೆ.ಎಲ್.ರಾಹುಲ್ ಗೆ ಉಪನಾಯಕತ್ವ ಪಟ್ಟ ಒಲಿಯುವ ಸಾಧ್ಯತೆ ದಟ್ಟವಾಗಿದೆ. ಏಕದಿನ ನಾಯಕತ್ವವನ್ನು ಸಹ ರಾಹುಲ್ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನು ನಾಯಕ ಕೊಹ್ಲಿ ಪಂದ್ಯದ ಬಳಿಕ ತಂಡದ ಆಟಗಾರರಿಗೆ ಸಮಯ ನೀಡುವುದಿಲ್ಲ, ಆದರೇ ಧೋನಿ ತಂಡದ ಆಟಗಾರರಿಗೆ ಸದಾ ಬಾಗಿಲನ್ನ ತೆರೆದಿಡುತ್ತಿದ್ದರು. ಅದು ಅವರ ನಾಯಕತ್ವ ಯಶಸ್ವಿಯಾಗಲು ಸಾಧ್ಯವಾಗಿತ್ತು ಎಂಬ ಅಭಿಪ್ರಾಯವನ್ನು ಹೆಸರು ಹೇಳಲಿಚ್ಚಿಸದ ಭಾರತ ತಂಡದ ಮಾಜಿ ನಾಯಕರೊಬ್ಬರು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.