ದ್ರಾವಿಡ್ ಒಪ್ಪಲಿಲ್ಲ ಎಂದರೇನು, ಭಾರತ ಕ್ರಿಕೆಟ್ ತಂಡಕ್ಕೆ ಬಲಿಷ್ಠ ಕೋಚ್ ಅನ್ನು ತರಲು ಮುಂದಾದ ಗಂಗೂಲಿ, ಆ ಟಾಪ್ ಕ್ರಿಕೆಟಿಗ ಯಾರು ಗೊತ್ತೇ??
ದ್ರಾವಿಡ್ ಒಪ್ಪಲಿಲ್ಲ ಎಂದರೇನು, ಭಾರತ ಕ್ರಿಕೆಟ್ ತಂಡಕ್ಕೆ ಬಲಿಷ್ಠ ಕೋಚ್ ಅನ್ನು ತರಲು ಮುಂದಾದ ಗಂಗೂಲಿ, ಆ ಟಾಪ್ ಕ್ರಿಕೆಟಿಗ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇನ್ನೇರೆಡು ತಿಂಗಳು ಭಾರತೀಯ ಕ್ರಿಕೇಟ್ ಗೆ ಮಹತ್ವದ ದಿನಗಳು. ಐಪಿಎಲ್ ಮುಗಿದ ಬೆನ್ನಲ್ಲೇ ಟಿ 20 ವಿಶ್ವಕಪ್ ನಡೆಯಲಿದೆ. ಅದಾದ ಬಳಿಕ ನಾಯಕ ವಿರಾಟ್ ಕೊಹ್ಲಿ ಟಿ 20 ನಾಯಕತ್ವವನ್ನು ತ್ಯಜಿಸುತ್ತಾರೆ. ನಂತರ ಮುಖ್ಯ ಕೋಚ್ ರವಿಶಾಸ್ತ್ರಿ ಸಹ ಜವಾಬ್ದಾರಿಯಿಂದ ಕೆಳಗಿಳಿಯಲಿದ್ದಾರೆ. ಭಾರತ ತಂಡಕ್ಕೆ ಹೊಸ ನಾಯಕ ಹಾಗೂ ಉಪನಾಯಕರ ಘೋಷಣೆಯಾಗುವುದಲ್ಲದೇ, ಹೊಸ ಕೋಚ್ ಸಹ ಬರಲಿದ್ದಾರೆ.
ಇತ್ತಿಚೆಗಷ್ಟೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಎನ್.ಸಿ.ಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಭಾರತ ತಂಡದ ಹಂಗಾಮಿ ಕೋಚ್ ಆಗಿ ಮಾತ್ರ ಮುಂದುವರೆಯುತ್ತಾರೆ ಹೊರತು , ಸಂಪೂರ್ಣ ತಂಡದ ಕೋಚ್ ಆಗಿ ಮುಂದುವರೆಯುವುದಿಲ್ಲ, ಅವರು ಎನ್.ಸಿ.ಎ ಮುಖ್ಯಸ್ಥರಾಗಿಯೇ ಮುಂದುವರೆಯುತ್ತಾರೆ ಎಂದು ಹೇಳಿದ್ದರು. ಹಾಗಾಗಿ ರವಿಶಾಸ್ತ್ರಿ ನಂತರ ಒಬ್ಬ ಸಮರ್ಥ ಕೋಚ್ ಗಾಗಿ ಭಾರತ ತಂಡ ಹುಡುಕಾಟ ನಡೆಸುತ್ತಿದೆ.
ಈ ಮಧ್ಯೆ ರಾಹುಲ್ ದ್ರಾವಿಡ್ ಬದಲು ಮತ್ತೊಬ್ಬ ಕನ್ನಡಿಗ ಅನಿಲ್ ಕುಂಬ್ಳೆಯವರನ್ನ ಮುಖ್ಯ ಕೋಚ್ ಆಗಿ ನೇಮಿಸಬೇಕೆಂಬುದು ಬಿಸಿಸಿಐ ಮುಂದುವರೆಸುವ ಇರಾದೆಯಾಗಿದೆ. ಆದರೇ ಜಂಬೋ ಈ ಹಿಂದೆ ಕೋಚ್ ಆದಾಗ ಭಾರತ ತಂಡ ಉತ್ತಮ ಪ್ರದರ್ಶನ ತೋರಿತ್ತು. ಆಡಿದ್ದ 19 ಟೆಸ್ಟ್ ಗಳನ್ನು ಗೆದ್ದಿತ್ತು. ಅದಲ್ಲದೇ 2017 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿತ್ತು. ಆದರೇ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ಅನಿಲ್ ಕುಂಬ್ಳೆ ನಡುವೆ ಸಮನ್ವಯತೆ ಇಲ್ಲದ ಕಾರಣ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದರು. ನಂತರ ಆ ಸ್ಥಾನವನ್ನು ರವಿಶಾಸ್ತ್ರಿ ತುಂಬಿದ್ದರು. ಈಗ ಭಾರತ ತಂಡ ಒಬ್ಬ ಉತ್ತಮ ಕೋಚ್ ಹುಡುಕುತ್ತಿದ್ದು, ಆತ ಬಲಿಷ್ಠನಾಗಿರಬೇಕು, ತಂಡದ ನಾಯಕನಿಗೆ ಇಷ್ಟವಾಗಲಿ, ಆಗದೇ ಇರಲಿ, ಆತ ತಂಡದ ಯಶಸ್ಸಿಗೆ ದುಡಿಯಬೇಕು ಎಂದು ಬಯಸುತ್ತಿದ್ದಾರೆ. ಹಾಗಾಗಿ ಸದ್ಯ ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿರುವ ಅನಿಲ್ ಕುಂಬ್ಳೆಗೆ ಮತ್ತೆ ಮಣೆ ಹಾಕುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.