ಇಡೀ ಐಪಿಎಲ್ ನಲ್ಲಿ ಬುಮ್ರಾ ಎದುರಿಸುವ ತಾಕತ್ತು ಇರುವುದು ಆರ್ಸಿಬಿಯ ಈ ಆಟಗಾರನಿಗೆ ಮಾತ್ರ ಎಂದ ಗಂಭೀರ್, ಯಾರು ಗೊತ್ತಾ ಆ ಆಟಗಾರ??

ನಮಸ್ಕಾರ ಸ್ನೇಹಿತರೇ ಐಪಿಎಲ್ ನ ದ್ವೀತಿಯಾರ್ಧ ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ಮಧ್ಯೆ ಆಟಗಾರರು ಹಾಗೂ ನಿವೃತ್ತ ಆಟಗಾರರ ಮಧ್ಯೆ ಮಾತಿನ ಸಮರ ಜೋರಾಗಿದೆ. ಇನ್ನು ಈ ಸಾಲಿಗೆ ಸೇರಿರುವ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸಮನ್ ಗೌತಮ್ ಗಂಭೀರ್ ಸಹ ಈಗ ಮಾತನಾಡಿದ್ದಾರೆ‌. ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ನ ಹಿಂದಿ ಕಾಮೆಂಟರಿ ವಿಭಾಗದಲ್ಲಿ ಗುರುತಿಸಿಕೊಂಡಿರುವ ಗೌತಮ್ ಗಂಭೀರ್, ಯೂಟ್ಯೂಬ್ ಚಾನೆಲ್ ವೊಂದರಕ್ಕೆ ನೀಡಿದ ಸಂದರ್ಶನದಲ್ಲಿ ಐಪಿಎಲ್-2 ಬಗ್ಗೆ ಮಾತನಾಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಬಗ್ಗೆ ಮಾತನಾಡಿರುವ ಗಂಭೀರ್, ಅವರೊಬ್ಬ ಅತ್ಯುತ್ತಮ ವೇಗದ ಬೌಲರ್. ಕ್ರಿಕೇಟ್ ನ ಯಾವುದೇ ಮಾದರಿಯಿರಲಿ, ಅದರಲ್ಲಿ ಅತ್ಯುತ್ತಮ ಬೌಲಿಂಗ್ ಮಾಡುತ್ತಾರೆ. ಆ ಮಟ್ಟಿಗೆ ಉತ್ತಮ ಫಿಟ್ನೆಸ್ ಸಹ ಕಾಯ್ದುಕೊಂಡಿದ್ದಾರೆ. ಇನ್ನು ತಮ್ಮ ವಿಲಕ್ಷಣ ಶೈಲಿಯ ಬೌಲಿಂಗ್ ಹಾಗೂ ರನ್ ಅಪ್ ನಿಂದ ಜಗತ್ತಿನ ಹಲವಾರು ಖ್ಯಾತ ಬ್ಯಾಟ್ಸಮನ್ ಗಳಿಗೆ ಕಾಟ ಕೊಟ್ಟಿದ್ದಾರೆ. ಆದರೇ ಸದ್ಯ ಬುಮ್ರಾರಂತಹ ವಿಶ್ವ ಶ್ರೇಷ್ಠ ಬೌಲರ್ ರನ್ನ ಎದುರಿಸುವಂತಹ ಬ್ಯಾಟ್ಸಮನ್ ಈಗ ಆರ್ಸಿಬಿ ತಂಡದಲ್ಲಿ ಮಾತ್ರ ಇದ್ದಾರೆ ಎಂದು ಗಂಭೀರ್ ಹೇಳಿದರು.

ಹೌದು ಜಸ್ಪ್ರಿತ್ ಬುಮ್ರಾರಂತಹ ವಿಶ್ವ ಶ್ರೇಷ್ಠ ಬೌಲರ್ ರನ್ನ ಸಮರ್ಥವಾಗಿ ಎದುರಿಸುವ ಆರ್ಸಿಬಿಯ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಎಂದು ನೀವು ಅಂದುಕೊಂಡರೇ, ನಿಮ್ಮ ಊಹೆ ತಪ್ಪು. ಆ ಬ್ಯಾಟ್ಸಮನ್ ಬೇರಾರೂ ಅಲ್ಲ, ಅದು ಮಿಸ್ಟರ್ 360, ಎಬಿ ಡಿ ವಿಲಿಯರ್ಸ್. ಹೌದು ಎಬಿ ಡಿ ವಿಲಿಯರ್ಸ್ ಮಾತ್ರ ಬುಮ್ರಾ ಬೌಲಿಂಗ್ ಗೆ ತಕ್ಕ ಉತ್ತರ ನೀಡುತ್ತಾರೆ. ಅವರ 360 ಡಿಗ್ರಿ ಬ್ಯಾಟಿಂಗ್ ನಿಂದ , ಮೈದಾನದ ಮೂಲೆ ಮೂಲೆಗೂ ಚೆಂಡನ್ನ ಬಾರಿಸುತ್ತಾರೆ ಎಂದು ಹೇಳಿದರು. ಈ ಭಾರಿಯ ಐಪಿಎಲ್ ನಲ್ಲಿ ದೆಹಲಿ,ಮುಂಬೈ,ಚೆನ್ನೈ ಹಾಗೂ ಬೆಂಗಳೂರು ತಂಡಗಳಿಗೆ ಪ್ರಶಸ್ತಿ ಗೆಲ್ಲುವ ಹೆಚ್ಚಿನ ಅವಕಾಶಗಳಿವೆ. ಚೆನ್ನೈ ಮತ್ತು ಮುಂಬೈ ತಂಡಗಳು ಫೈನಲ್ ಪ್ರವೇಶಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav