ಉತ್ತರ ಕೊರಿಯಾದ ವಿಚಿತ್ರ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪತ್ನಿಗೆ ಇರುವ ರೂಲ್ ಗಳು ಏನೇನು ಗೊತ್ತೇ?? ಇವುಗಳನ್ನು ಪಾಲಿಸದಿದ್ದರೆ ನೇರ ಟಿಕೆಟ್.

ನಮಸ್ಕಾರ ಸ್ನೇಹಿತರೇ ನಮ್ಮ ಪ್ರಪಂಚದಲ್ಲಿ ಹಲವಾರು ಜನ ಇಲ್ಲಿಯವರೆಗೆ ಸರ್ವಾಧಿಕಾರಿಗಳು ಬಂದು ಹೋಗಿದ್ದಾರೆ. ಉದಾಹರಣೆಗೆ ಜರ್ಮನಿ ಹಿಟ್ಲರ್ ಫ್ರಾನ್ಸಿನ ನೆಪೋಲಿಯನ್ ಬೋನಾಪಾರ್ಟೆ ಹೀಗೆ ಹಲವಾರು ಜನರ ಹೆಸರನ್ನು ಹೇಳಬಹುದು. ಆದರೆ ಅವರು ಈಗ ಗತಕಾಲ ರಾಗಿ ಕೇವಲ ಇತಿಹಾಸದ ಪುಟಗಳಲ್ಲಿ ಮಾತ್ರ ಕಾಣಸಿಗುತ್ತಾರೆ. ಆದರೆ ಇಂದು ನಾವು ಹೇಳಹೊರಟಿರುವ ವ್ಯಕ್ತಿ ಇಂದಿಗೂ ಕೂಡ ಸರ್ವಾಧಿಕಾರಿಯಾಗಿ ಜೀವಂತವಾಗಿದ್ದಾನೆ.

ಇನ್ನು ಇತರ ವಿಚಿತ್ರ ರೂಲ್ಸ್ ಗಳು ಇಂದು ಕೂಡ ಆ ಪ್ರಪಂಚದಲ್ಲಿ ಸಾಕಷ್ಟು ಬಾರಿ ಸುದ್ದಿಗೆ ಒಳಗಾಗಿವೆ. ಹೌದು ಸ್ನೇಹಿತರೆ ನಾವು ಮಾತನಾಡುತ್ತಿರುವುದು ಇನ್ಯಾರ ಬಗ್ಗೆ ಅಲ್ಲ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನವರ ಕುರಿತಂತೆ. ಹೌದು ಸ್ನೇಹಿತರೆ ಇವತ್ತು ನಾವು ಮಾತನಾಡಲು ಹೊರಟಿರುವುದು ಕೇವಲ ಕಿಮ್ ಜಾಂಗ್-ಉನ್ ಕುರಿತಂತೆ ಮಾತ್ರವಲ್ಲದೆ ಆತನ ಪತ್ನಿಯ ಕುರಿತಂತೆ ಮುಖ್ಯವಾಗಿ.

ಹೌದು ಸ್ನೇಹಿತರೆ ಕಿಮ್ ಜಾಂಗ್ ಪತ್ನಿಯ ಕುರಿತಂತೆ ವಿಧಿಸಿರುವ ಹಲವಾರು ನಿಯಮಗಳ ಹಾಗೂ ವಿಚಿತ್ರ ನಿಯಮಗಳ ಕುರಿತು ಹೇಳಲು ಹೊರಟಿದ್ದೇವೆ. ಕಿಮ್ ಜಾಂಗ್-ಉನ್ ಪತ್ನಿ ಹೆಸರು ರಿಸೂಲ್ ಜು ಎಂದು. ಇದು ಆಕೆ ನಿಜವಾದ ಹೆಸರು ಅಲ್ಲ ಯಾಕೆಂದರೆ ಆಕೆ ಚಿಯರ್ ಲೀಡರ್ ಆಗಿದ್ದವಳು. ಇನ್ನು ಒಂದು ಕಾರ್ಯಕ್ರಮದಲ್ಲಿ ಕಿಮ್ ಜಾಂಗ್-ಉನ್ ಆಕೆಯನ್ನು ನೋಡಿ ಪ್ರೀತಿ ಮಾಡಿ ಅವಳನ್ನು ಮದುವೆಯಾಗುತ್ತಾನೆ. ಇನ್ನು ತನ್ನ ಅಧಿಕಾರಿಗಳಿಗೆ ಹೇಳಿ ಅವಳ ಹಿಂದಿನ ಎಲ್ಲಾ ಬಯೋಡಾಟ ವನ್ನು ಡಿಲೀಟ್ ಮಾಡಿಸುತ್ತಾನೆ ಮಾತ್ರವಲ್ಲದೆ ಆಕೆ ಜೊತೆ ಇದ್ದ ಹಲವಾರು ಸಹೋದ್ಯೋಗಿಗಳನ್ನು ಅಮಾನುಷವಾಗಿ ಮುಗಿಸುತ್ತಾನೆ.

ಇನ್ನು ಕಿಮ್ ಜಾಂಗ್-ಉನ್ ತನ್ನ ಪತ್ನಿ ತನ್ನೊಂದಿಗೆ ಯಾವಾಗ ಇರಬೇಕು ಯಾವಾಗ ಇರಬಾರದು ಎಂಬುದನ್ನು ಕೂಡ ಅವನೇ ನಿರ್ಧರಿಸುತ್ತಾನೆ. ಇನ್ನು ರಿಸುಲ್ ಜೂ ಗರ್ಭವತಿಯಾಗಿದ್ದು ಹಲವಾರು ಬಾರಿ ಮಗು ತೆಗೆಸಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ ಮಾತ್ರವಲ್ಲದೆ ಇವರಿಗೆ ಮೂರು ಜನ ಮಕ್ಕಳಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇನ್ನು ಇವರಿಬ್ಬರಿಗೆ ಮದುವೆಯಾಗಿ 12 ವರ್ಷಗಳು ಕಳೆದಿದ್ದರೂ ಕೂಡ ಇದುವರೆಗೂ ಕೂಡ ರಿಸೂಲ್ ಜೂ ಗೆ ಅವಳ ಮನೆಯವರೊಂದಿಗೆ ಮಾತನಾಡುವ ಆಗಿಲ್ಲ.

ರಿಸೂಲ್ ಜೂ ಯಾವ ರೀತಿಯ ಹೇರ್ ಸ್ಟೈಲ್ ಫ್ಯಾಷನ್ ಮಾಡಿಕೊಳ್ಳಬೇಕೆಂಬುದನ್ನು ಕೂಡ ಕಿಮ್ ಜಾಂಗ್-ಉನ್ ನಿರ್ಧರಿಸುತ್ತಾನೆ. ಇನ್ನು ರಿಸೂಲ್ ಜೂ ಗೆ ಸ್ವತಂತ್ರವಾಗಿ ಓಡಾಡುವ ಅವಕಾಶವೂ ಕೂಡ ಇಲ್ಲ ಹಾಗೂ ಯಾವುದೇ ಕಾರ್ಯಕ್ರಮಕ್ಕೆ ಭಾಗವಹಿಸುವ ಅರ್ಹತೆ ಕೂಡ ಇಲ್ಲದಂತೆ ಮಾಡಿದ್ದಾನೆ ಕಿಮ್ ಜಾಂಗ್-ಉನ್. ಸರ್ವಾಧಿಕಾರಿಯ ಪತ್ನಿ ಆಗಿದ್ದರೂ ಕೂಡ ಯಾವುದೇ ಸುಖ ಸಂತೋಷಗಳನ್ನು ಅನುಭವಿಸಿದಂತಹ ಪರಿಸ್ಥಿತಿ ಇವಳ ದ್ದಾಗಿದೆ. ಈ ಕುರಿತು ನೀವು ಏನು ಹೇಳುತ್ತೀರಾ ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ ಸ್ನೇಹಿತರೆ. ಇಷ್ಟೆಲ್ಲಾ ಸಂಪತ್ತು ಇದ್ದರೂ ಕೂಡ ಅದನ್ನು ಅನುಭವಿಸಲಾಗದ ಅಂತಹ ಕಿಮ್ ಜಾಂಗ್-ಉನ್ ಪತ್ನಿಗೆ ನೀವು ಏನು ಹೇಳುತ್ತೀರಾ ಎಂಬುದನ್ನು ಕೂಡ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Post Author: Ravi Yadav