ರಾಹುಲ್ ದ್ರಾವಿಡ್ ರವರ ಸ್ಥಾನವನ್ನು ತುಂಬಬಲ್ಲಂತಹ ಆಟಗಾರ ಸಿಕ್ಕಾಯ್ತು ಎಂದ ಮೊಹಮ್ಮದ್ ಕೈಫ್, ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ದೇಶದಲ್ಲಿ ಸಿನಿಮಾ ಬಿಟ್ಟರೆ ಅತ್ಯಂತ ಹೆಚ್ಚು ಜನಪ್ರಿಯವಾಗಿರುವುದು ಎಂದರೆ ಕ್ರಿಕೆಟ್ ಎಂದರೆ ತಪ್ಪಾಗಲಾರದು. ಹೌದು ಸ್ನೇಹಿತರೆ ಕ್ರಿಕೆಟ್ ಆಟಗಾರರನ್ನು ದೇವರಂತೆ ಪೂಜಿಸುವ ದೇಶ ನಮ್ಮದು. ಕ್ರಿಕೆಟಿಗರಿಗೆ ಅಷ್ಟೊಂದು ಗೌರವ ಹಾಗೂ ಮರ್ಯಾದೆ ನಮ್ಮ ದೇಶದಲ್ಲಿದೆ ಎಂದರೆ ತಪ್ಪಾಗಲಾರದು. ಇನ್ನು ನಮ್ಮ ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ರಾಹುಲ್ ದ್ರಾವಿಡ್ ಅವರ ಹೆಸರು ಅಗ್ರಗಣ್ಯ ಒಬ್ಬರಾಗಿ ಕೇಳಿಬರುತ್ತದೆ. ಇನ್ನು ಇವರು ನಮ್ಮ ಕನ್ನಡಿಗರು ಎಂದು ಹೇಳುವುದಕ್ಕೆ ನಮಗೆ ಕೂಡ ತುಂಬಾ ಹೆಮ್ಮೆ.

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅದರಲ್ಲೂ ಕೂಡ ಟೆಸ್ಟ್ ಕ್ರಿಕೆಟ್ ನಲ್ಲಿ ರಾಹುಲ್ ದ್ರಾವಿಡ್ ರವರನ್ನು ಹಿಂದಿಕ್ಕುವ ಇನ್ನೊಬ್ಬ ಕ್ರಿಕೆಟಿಗ ಸಿಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಬಹುದಾಗಿದೆ. ಭಾರತ ಯಾವಾಗೆಲ್ಲ ಸೋಲುತ್ತದೆ ಎಂಬ ಪರಿಸ್ಥಿತಿಯಲ್ಲಿ ಬಂದಾಗ ರಾಹುಲ್ ದ್ರಾವಿಡ್ ಅವರು ಮುಂದೆ ಬಂದು ತಂಡವನ್ನು ಗೆಲ್ಲಿಸಿರುವ ಉದಾಹರಣೆ ಸಾಕಷ್ಟಿವೆ. ಇನ್ನು ರಾಹುಲ್ ದ್ರಾವಿಡ್ ಅವರು ಆರಂಭಿಕ ಆಟಗಾರನಾಗಿ ಮಧ್ಯಮ ಕ್ರಮಾಂಕದ ಆಟಗಾರನಾಗಿ ಹಾಗೂ ಫಿನಿಶರ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಇದು ಬ್ಯಾಟಿಂಗ್ ಆದರೆ ಇದಲ್ಲದೆ ಕೀಪರ್ ಆಗಿ ಉತ್ತಮ ಫೀಲ್ಡರ್ ಆಗಿಯೂ ಕೂಡ ಭಾರತ ಕ್ರಿಕೆಟ್ ತಂಡಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಇದುವರೆಗೂ ಕೂಡ ಭಾರತ ಕ್ರಿಕೆಟ್ ತಂಡಕ್ಕೆ ಇವರನ್ನು ಮೀರಿಸುವ ಆಟಗಾರ ಇನ್ನೊಬ್ಬ ಸಿಕ್ಕಿಲ್ಲ ಎಂದು ಹೇಳಬಹುದಾಗಿದೆ.

ಆದರೆ ಇತ್ತೀಚಿಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ನಾಗಿರುವ ಮಹಮದ್ ಕೈಫ್ ರವರು ರಾಹುಲ್ ದ್ರಾವಿಡ್ ಅವರ ಸ್ಥಾನಕ್ಕೆ ಇನ್ನೊಬ್ಬ ಕ್ರಿಕೆಟ್ ಆಟಗಾರ ಬಂದಿದ್ದಾನೆ ಎಂಬುದಾಗಿ ಹೇಳಿದ್ದಾರೆ. ಹೌದು ಸ್ನೇಹಿತರೆ ಮೊಹಮ್ಮದ್ ಕೈಫ್ ರವರು ಈ ಕುರಿತಂತೆ ಸ್ಟೇಟ್ಮೆಂಟ್ ಒಂದು ನೀಡಿದ್ದಾರೆ. ಹೌದು ಸ್ನೇಹಿತರೆ ಕನ್ನಡಿಗ ಕೆಎಲ್ ರಾಹುಲ್ ರವರು ಬ್ಯಾಟಿಂಗ್ ಮಾಡುತ್ತಿರಬೇಕಾದರೆ ಅವರು ಯಾವ ಸ್ಥಾನದಲ್ಲಿ ಕೂಡ ಬ್ಯಾಟಿಂಗ್ ನಿರ್ವಹಿಸುವಂತಹ ಚಾತುರ್ಯತೆ ನೋಡಿ ಅವರಿಗೆ ರಾಹುಲ್ ದ್ರಾವಿಡ್ ನೆನಪಾಗುತ್ತದೆಯಂತೆ. ಹೀಗಾಗಿ ಭಾರತ ಕ್ರಿಕೆಟ್ ತಂಡದಲ್ಲಿ ರಾಹುಲ್ ದ್ರಾವಿಡ್ ರವರ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಅಂತಹ ಆಟಗಾರನೆಂದರೆ ಅದು ಕೇವಲ ಕೆಎಲ್ ರಾಹುಲ್ ಮಾತ್ರ ಎಂಬುದಾಗಿ ಮೊಹಮ್ಮದ್ ಕೈಫ್ ರವರು ಹೇಳುತ್ತಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav