ಕಿರುತೆರೆಯಲ್ಲಿ ಶುರುವಾಗ್ತಿದೆ ಮತ್ತೊಮ್ಮೆ ಬಿಗ್ ಬಾಸ್! ಕಲರ್ಸ್ ನೀಡಲಿದೆ ವೀಕ್ಷಕರಿಗೆ ಮತ್ತೊಂದು ಸಿಹಿ ಸುದ್ದಿ, ಯಾವಾಗ ಗೊತ್ತೆ??

ನಮಸ್ಕಾರ ಸ್ನೇಹಿತರೇ ಕನ್ನಡದಲ್ಲಿ ಧಾರಾವಾಹಿಯಷ್ಟೇ ಹೆಚ್ಚು ಫೇಮಸ್ ಆಗಿರುವುದು ರಿಯಾಲಿಟಿ ಶೋಗಳು. ನಿರ್ದಿಷ್ಟ ಅವಧಿಗೆ ಶುರುವಾಗಿ ಮುಗಿಯುವ ರಿಯಾಲಿಟಿ ಶೋಗಳಿಗೆ ಅದರದ್ದೇ ಆದ ಪ್ರತ್ಯೇಕ ವೀಕ್ಷಕ ಬಳಗವಿದೆ. ರಿಯಾಲಿಟಿ ಶೋಗಳು ಸಾಕಷ್ಟು ಹಿಟ್ ಆಗಲು ಅದರಲ್ಲಿ ಭಾಗವಹಿಸುವ ಸ್ಪರ್ಧಿಗಳು ಕೂಡ ಒಂದು ಕಾರಣ. ವೀಕ್ಷಕರು ಇಷ್ಟಪಟ್ಟಂಥ ಸ್ಪರ್ಧಿಗಳೇ ರಿಯಾಲಿಟಿ ಶೋನಲ್ಲಿಯೂ ಕಾಣಿಸಿಕೊಂಡಾಗ ಅವರ ಪರ್ಫಾರ್ಮೆನ್ಸ್ ನೋಡಲು ಜನ ಕಾತುರದಿಂದ ಕಾಯುತ್ತಾ ಇರುತ್ತಾರೆ.

ಇನ್ನು ಕನ್ನಡದಲ್ಲಿ ಅತ್ಯಂತ ಜನಪ್ರಿಯ ಶೋ ಬಿಗ್ ಬಾಸ್. ಬಿಗ್ ಬಾಸ್ ಸೀಸನ್ 8 ಮುಗಿದ ಬೆನ್ನಲ್ಲೇ ಪ್ರೇಕ್ಷಕರಿಗೆ ಪ್ರಿಯವಾದ ಸೀರಿಯಲ್ ನಟ ನಟಿಯರನ್ನು ಬಿಗ್ ಬಾಸ್ ಮನೆಯಲ್ಲಿ ಬಿಟ್ಟು ಮನೋರಂಜನೆಯನ್ನು ನೀಡಲಾಗಿತ್ತು. ಆದರೆ ಇದೀಗ ಅದರ ಫೈನಲ್ ಕೂಡ ಮುಗಿದು ಎಲ್ಲ ಸ್ಪರ್ಧಿಗಳಿಗೂ ಒಂದೊಂದು ಅವಾರ್ಡ್ ಕೂಡ ಕೊಡಲಾಗಿತ್ತು. ಬಿಗ್ ಬಾಸ್ ಮುಗಿದ ನಂತರ ಆ ಸಮಯದಲ್ಲಿ 2 ಹೊಸ ಧಾರಾವಾಹಿಗಳನ್ನು ಬಿಟ್ಟರೆ ಬೇರೆ ಯಾವುದೇ ರಿಯಾಲಿಟಿ ಶೋಗಳನ್ನು ಶುರು ಮಾಡಿರಲಿಲ್ಲ ಕಲರ್ಸ್ ಕನ್ನಡ. ಆದರೆ ಇದೀಗ ಕಲರ್ಸ್ ವೀಕ್ಷಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಅದೇನು ಅಂತೀರಾ !? ಮುಂದೆ ಓದಿ.

ವೀಕ್ಷಕರಿಗೆ ಸಿಹಿ ಸುದ್ದಿ. ಅದೇನೆಂದರೆ ಬಿಗ್ ಬಾಸ್ ಮತ್ತೆ ಆರಂಭವಾಗ್ತಾ ಇದೆ. ಹೌದು ಸ್ನೇಹಿತರೆ ಬಿಗ್ ಬಾಸ್ ಸೀಸನ್ 9 ಸಧ್ಯದಲ್ಲೇ ಸರಿ ಸುಮಾರು ಮುಂದಿನ ತಿಂಗಳ ಮದ್ಯದಲ್ಲಿ ಪ್ರಸಾರವಾಗಲಿದೆ ಅಂತ ಮೂಲಗಳು ತಿಳಿಸಿವೆ. ಇದರ ಜೊತೆಗೆ ಮತ್ತೆರಡು ಹೊಸ ಧಾರಾವಾಹಿಗಳನ್ನು ಲಾಂಚ್ ಮಾಡುವುದರಲ್ಲಿಯೂ ಬ್ಯುಸಿಯಾಗಿದೆಯಂತೆ ಕಲರ್ಸ್ ತಂಡ. ಇನ್ನು ಕಲರ್ಸ್ ನಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿಗಳು ಯಾರು ಎನ್ನುವುದು ಮಾತ್ರ ಇನ್ನೂ ಫೈನಲ್ ಆಗಬೇಕಿದೆ. ಈಗಾಗಲೇ ಕೆಲವು ಫೇಮಸ್ ನಟ ನಟಿಯರ ಹೆಸರುಗಳು ಕೇಳಿ ಬರುತ್ತಿದೆ. ಆದರೆ ಇದ್ಯಾವುದರ ಬಗ್ಗೆಯೂ ಕಲರ್ಸ್ ಯಾವ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಹಾಗಾಗಿ ಬಿಗ್ ಬಾಸ್ ಸ್ಪರ್ಧಿಗಳು ಯಾರು ಎಂಬ ಕುತೂಹಲ ಇನ್ನಷ್ಟು ದಿನ ಹಾಗೆಯೇ ಮುಂದುವರೆಯಬಹುದು.

Post Author: Ravi Yadav