ಕೊನೆಗೂ ಕರೀನಾ ಕಪೂರ್ ಬೇಡ ಎಂದು ನಿರ್ಧಾರ ಮಾಡಿ ಬೇರೆ ನಟಿಯನ್ನು ಸೀತಾ ಮಾತೆಯ ಪಾತ್ರಕ್ಕೆ ಆಯ್ಕೆ, ಆ ನಟಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಳೆದ ಕೆಲವು ದಿನಗಳಿಂದ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ದಿನಗಳಿಂದ ಭಾರತದ ಪ್ರಖ್ಯಾತ ನಿರ್ದೇಶಕ ರಾಗಿರುವ ರಾಜಮೌಳಿ ರವರ ತಂದೆ ಕಥೆ ಬರೆದಿರುವ ಸೀತಾಮಾತೆಯ ಆಧಾರಿತ ಚಿತ್ರಕ್ಕೆ ಯಾವ ನಟಿ ಆಯ್ಕೆಯಾಗಲಿದ್ದಾರೆ ಎಂಬುದರ ಕುರಿತು ಭಾರೀ ಚರ್ಚೆ ನಡೆಯುತ್ತಿತ್ತು. ಇದಕ್ಕಾಗಿ ಹಲವಾರು ನಟಿಯರಿಗೆ ಆಫರ್ ಕೂಡ ನೀಡಲಾಗಿತ್ತು. ಆದರೆ ಈ ಸಮಯದಲ್ಲಿ ಬಾಲಿವುಡ್ನಲ್ಲಿ ನಟಿಯರ ನಡುವೆ ಸೀತಾಮಾತೆಯ ಚಿತ್ರಕ್ಕೆ ಆಯ್ಕೆಯಾಗುವುದು ಕುರಿತು ಸಾಕಷ್ಟು ಖಾರವಾದ ಚರ್ಚೆಗಳು ನಡೆದಿದ್ದವು.

ಅದರಲ್ಲಿಯೂ ಚಿತ್ರತಂಡ ಸೀತಾಮಾತೆಯ ಪಾತ್ರಕ್ಕೆ ಕರೀನಾ ಕಪೂರ್ ಅವರನ್ನು ನಟಿಸುವಂತೆ ಕೇಳಿದಾಗ ಇಡೀ ದೇಶದ ಎಲ್ಲೆಡೆ ಸೀತಾಮಾತೆ ಚಿತ್ರಕ್ಕೆ ಯಾವುದೇ ಕಾರಣಕ್ಕೂ ಕರೀನಾ ಕಪೂರ್ ಅವರು ಬೇಡ ಎಂಬ ಮಾತುಗಳು ಕೇಳಿ ಬಂದಿದ್ದವು, ಬಹುತೇಕರು ಕರೀನಾ ಕಪೂರ್ ಅವರನ್ನು ಸೀತಾಮಾತೆಗೆ ಪಾತ್ರದಲ್ಲಿ ನೋಡಲು ಇಷ್ಟಪಟ್ಟಿರಲಿಲ್ಲ ಇಷ್ಟೆಲ್ಲ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲಿ ಕರೀನಾ ಕಪೂರ್ ರವರು ನಾನು ಸೀತೆ ಮಾತೆಯ ಪಾತ್ರ ಮಾಡಬೇಕು ಎಂದರೆ ನನಗೆ ಸಾಮಾನ್ಯ ಸಂಭಾವನೆಗಿಂತ ಮೂರುಪಟ್ಟು ಹೆಚ್ಚು ಅಂದರೆ ಸಾಮಾನ್ಯ ಚಿತ್ರಕ್ಕೆ ನಾಲ್ಕು ಕೋಟಿ ಪಡೆಯುವ ಕರೀನಾ ಕಪೂರ್ 12 ಕೋಟಿ ಹಣ ನೀಡಿದರೆ ಮಾತ್ರ ನಾನು ಸೀತಾಮಾತೆಯ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದಿದ್ದರು.

ಹೀಗೆ ಸಂಭಾವನೆ ಕುರಿತು ಕೂಡ ಚರ್ಚೆ ಆರಂಭವಾದ ಕರೀನಾ ಕಪೂರ್ ಬೇಡವೇ ಬೇಡ ಈ ಪಾತ್ರಕ್ಕೆ ಹಲವಾರು ನಟಿಯರ ಹೆಸರುಗಳನ್ನು ಸೂಚಿಸಿ ಇವರನ್ನು ಆಯ್ಕೆ ಮಾಡಿ ಸೀತಾಮಾತೆಯ ಪಾತ್ರಕ್ಕೆ ಅತ್ಯದ್ಭುತವಾಗಿ ಸೂಕ್ತವಾಗಿ ಇದ್ದಾರೆ ಎಂದು ನೆಟ್ಟಿಗರು ಆಯ್ಕೆಗಳನ್ನು ಕೂಡ ಮುಂದಿಟ್ಟಿದ್ದರು. ಅದರಲ್ಲಿ ಕಂಗನಾ ರಾವತ್ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಸೇರಿದಂತೆ ಇನ್ನೂ ಹಲವಾರು ನಟಿಯರ ಹೆಸರುಗಳು ಕೇಳಿಬಂದಿದ್ದವು. ಬಹುತೇಕರ ಬಾಯಲ್ಲಿ ಕಂಗನಾ ರಾವತ್ ರವರ ಹೆಸರು ಕೇಳಿಬಂದಿತ್ತು, ಬಹುಶಹ ಅದೇ ಕಾರಣಕ್ಕೆ ಇರಬೇಕು ಇದೀಗ ರಾಜಮೌಳಿ ರವರ ತಂದೆ ವಿಜಯೇಂದ್ರ ಪ್ರಸಾದ್ ರವರು ಕೊನೆಗೂ ಸೀತಾಮಾತೆಯ ಪಾತ್ರಕ್ಕೆ ಕಂಗನಾ ರಾವತ್ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಕುರಿತು ಕಂಗನಾ ರಾವತ್ ರವರು ಅಧಿಕೃತ ನಿರ್ಧಾರ ತಿಳಿಸಿದ್ದು ಟ್ವಿಟರ್ನಲ್ಲಿ ಈ ಕುರಿತು ಬರೆದುಕೊಂಡು ಫೋಟೋವೊಂದನ್ನು ಕೂಡ ಹಾಕಿದ್ದಾರೆ. ಈ ಮೂಲಕ ಸೀತಾಮಾತೆಯ ಪಾತ್ರಕ್ಕೆ ಕಂಗನಾ ರವರು ಫೈನಲ್ ಆಗಿ ಆಯ್ಕೆಯಾಗಿದ್ದಾರೆ

Post Author: Ravi Yadav