ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ನಡೆದ ಕೆಲವು ಕರಾಳ ಘಟನೆಗಳು ಮರೆಯಲು ಸಾಧ್ಯವಾಗದೇ ಹಾಗೆಯೇ ನಮ್ಮ ಮನಸ್ಸಿನಲ್ಲಿ ಉಳಿದು ಹೋಗುತ್ತವೆ. ಜುಲೈ, 25, 1994 ನಡೆದ ಆ ಒಂದು ಘಟನೆ ಸಾಮಾನ್ಯವಾಗಿ ಯಾವ ಸಿನಿ ಪ್ರಿಯರೂ ಮರೆಯಲು ಸಾಧ್ಯವೇ ಇಲ್ಲ. ಅದೆವೇ ಸ್ಫುರದ್ರೂಪಿ ನಟ ಸುನೀಲ್ ಅವರು ನಮ್ಮನ್ನಗಲಿದ್ದು.
ಹೌದು ಸ್ನೇಹಿತರೆ, ನಟ ಸುನೀಲ್ ನಮ್ಮನ್ನು ಅಗಲಿ 27 ವರ್ಷಗಳೇ ಕಳೆದಿವೆ. ಒಂದು ಕಾರ್ ಆಕ್ಸಿಡೆಂಟ್ ನಲ್ಲಿ ಸುನೀಲ್ ಪ್ರಾಣ ಬಿಡಬೇಕಾಯ್ತು. ಚಿತ್ರೀಕರಣ ಒಂದನ್ನು ಮುಗಿಸಿ ಬರುವಾಗ ಈ ಕಹಿ ಘಟನೆ ಸಂಭವಿಸುತ್ತೆ. ಕಾರಿನಲ್ಲಿ ನಟಿ ಮಾಲಾಶ್ರೀ ಹಾಗೂ ಸುನೀಲ್ ಒಬ್ಬರೂ ಇದ್ದರು. ಈ ಘಟನೆ ನಡೆದಿದ್ದು ಚಿತ್ರದುರ್ಗದ ಹತ್ತಿರ ಎನ್ನಲಾಗುತ್ತದೆ. ಕಾರಿನ ಡ್ರೈವರ್ ಲಾರಿ ಯೊಂದಕ್ಕೆ ಗುದಿದ್ದರಿಂದ ಕಾರ್ ಆಕ್ಸಿಡೆಂಟ್ ಆಗುತ್ತೆ. ಆಗ ಮಾಲಾಶ್ರಿಯವರಿಗೂ ತಲೆಗೆ ಪೆಟ್ಟಾಗುತ್ತೆ. ಆದರೆ ಸುನೀಲ್ ಅವರಿಗೆ ಹೆಚ್ಚಾಗಿಯೇ ಪೆಟ್ಟಾಗಿ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲೇ ಇಲ್ಲ. ಕೊನೆಗೂ ಸುನೀಲ್ ನಮ್ಮನ್ನು ಬಿಟ್ಟು ಹೋದರು.
ನಟ ಸುನೀಲ್ ಚಿತ್ರರಂಗವನ್ನು ಅಗಲುವಾಗ ಅವರಿಗೆ 30 ವರ್ಷ ವಯಸ್ಸಾಗಿತ್ತು. ಇನ್ನು ಉಡುಪಿ ಮೂಲದವರಾದ ನಟ ಸುನೀಲ್ ನಟನೆಗೆ ಬಂದ ಕೇವಲ ಮೂರು ವರ್ಷಗಳಲ್ಲಿಯೇ ಸಾಕಷ್ಟು ಹೆಸರು ಮಾಡಿದ್ದರು. ಸುನೀಲ್ ಅವರು ಹೆಚ್ಚಾಗಿ ನಟಿಸಿದ್ದೆ ನಟಿ ಮಾಲಾಶ್ರೀಯವರ ಜೊತೆ. ’ಮಾಲಾಶ್ರೀ ಮಾಮಾಶ್ರೀ’. ಬೆಳ್ಳಿ ಕಾಲುಂಗುರ’ ಹೀಗೆ ಹಲವಾರು ಚಿತ್ರಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡು ಆಗಿನ ಕಾಲದ ಜನಮೆಚ್ಚಿದ ಜೋಡಿ ಎನಿಸಿಕೊಂಡಿತ್ತು. ಇನ್ನು ನಿಜ ಜೀವನದಲ್ಲಿಯೂ ಈ ಜೋಡಿ ಜೊತೆಯಾಗಬೇಕು ಎಂದು ತೀರ್ಮಾನಿಸಿದ್ದರಂತೆ! ಹೌದು ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದ ಕಾರಣಕ್ಕೆ ಸುನೀಲ್ ಹಾಗೂ ಮಾಲಾಶ್ರೀಯವರ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟಿತ್ತು. ಸಿನೀಲ್, ಮಾಲಾಶ್ರೀಯವರನ್ನೇ ಮದುವೆಯಾಗಬೇಕು ಎಂದು ಭಾವಿಸಿದ್ದರಂತೆ. ಆದರೆ ವಿಧಿಯ ನಿರ್ಣಯವೇ ಬೇರೆಯಾಗಿತ್ತು. ನಟ ಸುನೀಲ್ ಬಾರದ ಲೋಕಕ್ಕೆ ತೆರಳಿ ಬಿಟ್ಟರು!