ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸೊಸೆ ಹೊರಹಾಕಿದ್ದಾರೆ ಹಳೆ ಬ್ಯಾನರ್ ಇದ್ದರೇ ಕೊಡಿ, ಗುಡಿಸಲು ಮೇಲೆ ಹೊದಿಸುತ್ತೇವೆ ಎಂದ ಅಜ್ಜ-ಅಜ್ಜಿ ಗೆ ಪಾಲಿಕೆ ಸದಸ್ಯ ಮಾಡಿದ್ದೇನು ಗೊತ್ತೇ??

ಸೊಸೆ ಹೊರಹಾಕಿದ್ದಾರೆ ಹಳೆ ಬ್ಯಾನರ್ ಇದ್ದರೇ ಕೊಡಿ, ಗುಡಿಸಲು ಮೇಲೆ ಹೊದಿಸುತ್ತೇವೆ ಎಂದ ಅಜ್ಜ-ಅಜ್ಜಿ ಗೆ ಪಾಲಿಕೆ ಸದಸ್ಯ ಮಾಡಿದ್ದೇನು ಗೊತ್ತೇ??

21

ನಮಸ್ಕಾರ ಸ್ನೇಹಿತರೇ ಈ ಜೀವನವೇ ಹಾಗೇ. ಅನೀರಿಕ್ಷಿತ ಘಟನೆಗಳ ಆಖರ. ನಾವು ಅಂದುಕೊಳ್ಳುವುದೋ ಒಂದು, ಆಗುವುದೋ ಇನ್ನೊಂದು. ಈ ಘಟನೆ ನಡೆದಿರುವುದು ದಾವಣಗೆರೆ ಜಿಲ್ಲೆಯಲ್ಲಿ. ದಾವಣಗೆರೆ ಮಹಾನಗರ ಪಾಲಿಕೆಯ 19ನೇ ವಾರ್ಡಿನ ಪಾಲಿಕೆ ಸದಸ್ಯ ಶಿವಪ್ರಕಾಶ್ ಎಂದಿನಂತೆ ಜನತಾ ದರ್ಶನ ಮಾಡುವಾಗ ಒಬ್ಬ ವೃದ್ಧ ದಂಪತಿ ಅವರೆದುರು ಬಂದರು. ಅವರ ಕಷ್ಟ ಕೋಟಲೆಗಳನ್ನ ವಿಚಾರಿಸುತ್ತಿರೋ ಹೊತ್ತಿನಲ್ಲಿ,

Follow us on Google News

ಅವರು ತಮಗೆ ಹಳೇಯ ಬ್ಯಾನರ್ ಗಳನ್ನ ಕೊಡಿ ಎಂದು ಕೇಳಿದರಂತೆ. ಏಕೆ ಹೀಗೆ ವಿಚಿತ್ರವಾದ ಬೇಡಿಕೆ ಎಂದು ಅವರ ಹಿನ್ನಲೆಯನ್ನ ಕೂಲಂಕೂಷವಾಗಿ ಪರಿಶೀಲಿಸತೊಡಗಿದರಂತೆ. ಆಗ ಹೊರ ಬಿದ್ದದ್ದೂ ನಿಜಕ್ಕೂ ಷಾಕಿಂಗ್ ವಿಷಯ. ದಾವಣಗೆರೆಯಲ್ಲಿಯೇ ವಾಸವಿದ್ದ ಈ ವೃದ್ಧ ದಂಪತಿಗಳಿಗೆ ಇಬ್ಬರೂ ಗಂಡು ಮಕ್ಕಳು. ಮದುವೆಯನ್ನು ಸಹ ಮಾಡಿದ್ದರು. ಗಂಡು ಮಕ್ಕಳಿಬ್ಬರೂ ಅಸುನೀಗಿದರು. ಆದರೇ ಮನೆಗೆ ಬಂದ ಸೊಸೆಯಿಂದರೂ, ಇವರನ್ನ ಕಾಲ ಕಸವೆಂಬಂತೆ ನೋಡತೊಡಗಿದರು.

ಒಂದು ದಿನ ಮನೆಯಿಂದ ಹೊರಹಾಕಿದರು. ಕೊನೆಗೆ ಜೀವನೋಪ್ಪಾಯಕ್ಕೆ ಗುಡಿಸಲು ಹಾಕಿಕೊಳ್ಳಲು, ಹಳೇಯ ಬ್ಯಾನರ್ ಗಳನ್ನ ಕೊಡಿ ಎಂದು ವೃದ್ಧ ದಂಪತಿ ಪಾಲಿಕೆ ಸದಸ್ಯ ಶಿವಪ್ರಕಾಶ್ ರವರ ಬಳಿ ಬಂದಿದ್ದಾರೆ. ಇವರ ಕಷ್ಟಕ್ಕೆ ಕರಗಿದ ಪಾಲಿಕೆ ಸದಸ್ಯ ಶಿವಪ್ರಕಾಶ್, ಇವರಿಗೆ ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಚಿಕ್ಕದೊಂದು ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಅಲ್ಲಿಗೆ ವೃದ್ಧ ದಂಪತಿಗಳಿಗೆ ಸ್ವಂತ ಮಗ ಮಾಡುವ ಕೆಲಸವನ್ನ ಇವರು ಮಾಡಿಕೊಟ್ಟಿದ್ದಾರೆ. ಸದ್ಯ ದಾವಣಗೆರೆಯಲ್ಲಿ ಈ ಸುದ್ದಿ ಸಖತ್ ವೈರಲ್ ಆಗಿದ್ದು , ಪಾಲಿಕೆ ಸದಸ್ಯ ಶಿವಪ್ರಕಾಶ್ ರವರ ಈ ಕಾರ್ಯಕ್ಕೆ ಜನ ಮನತುಂಬಿ ಹಾರೈಸುತ್ತಿದ್ದಾರೆ. ಶಿವಪ್ರಕಾಶ್ ರವರ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆಯ ಮಳೆ ಸುರಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.