ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸೂರ್ಯಕಾಂತ್ ರವರ ಮತ್ತೊಂದು ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಮತ್ತೊಮ್ಮೆ ಜನರ ಮನಗೆದ್ದ ಬಸವರಾಜ್ ಬೊಮ್ಮಾಯಿ.

5

ನಮಸ್ಕಾರ ಸ್ನೇಹಿತರೇ ಎದೆ ತುಂಬಿ ಹಾಡುವೆನು ಎಂಬ ಕಾರ್ಯಕ್ರಮದ ಸಿಂಗರ್ ಸೂರ್ಯಕಾಂತ್ ಈಗ ಸೆನ್ಸೆಶನಲ್ ಸ್ಟಾರ್. ತನ್ನ ಮೊದಲ ಗಾಯನದಲ್ಲಿ ಕಡಕೋಳ ಮಡಿವಾಳಪ್ಪನವರ ತತ್ವಪದವನ್ನ ಹಾಡಿದ್ದರು. ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ರವೀಂದ್ರ ಹಂದಿಗನೂರು ರವರ ಮೂಕನಾಗಬೇಕು, ಜಗದೊಳು ಜ್ವಾಕ್ಯಾಗಿರಬೇಕು ಎಂಬ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಎಲ್ಲರ ಸ್ಟೇಟಸ್ ಗಳಲ್ಲಿಯೂ ಸಹ ಅದು ಭರ್ಜರಿಯಾಗಿ ಮಿಂಚಿತ್ತು.

ಮೂಲತಃ ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಲಿಂಗದಹಳ್ಳಿಯ ಸೂರ್ಯಕಾಂತ್ ಗೆ ಮಾತನಾಡುವಾಗ ತೊದಲುವ ಸಮಸ್ಯೆ ಇದೆ. ಇದನ್ನೇ ದುರ್ಬಳಕೆ ಮಾಡಿಕೊಂಡ ಅವರ ಊರಿನ ಜನ 2007 ರಲ್ಲಿ ರಿಯಲ್ ಸ್ಟಾರ್ ಉಪೇಂದ್ರರನ್ನ ತೋರಿಸುತ್ತೇವೆ ಎಂದು ಬೆಂಗಳೂರಿಗೆ ಕರೆದುಕೊಂಡು ಬಂದು, ಲಿಫ್ಟ್ ಒರೆಸುವ ಕೆಲಸಕ್ಕೆ ಸೇರಿಸಿಬಿಟ್ಟರಂತೆ. ಅದಲ್ಲದೇ ಶೋ ನಲ್ಲಿ ಮಾತನಾಡಿದ ಸೂರ್ಯಕಾಂತ, ತನ್ನ ಊರಿಗೆ ಇಂದಿಗೂ ಬಸ್ ವ್ಯವಸ್ಥೆ ಇಲ್ಲ. ಗರ್ಭಿಣಿಯರು, ಮಕ್ಕಳು, ಸ್ತ್ರೀಯರು ಏಳೆಂಟು ಕಿಲೋಮೀಟರ್ ನಡೆದುಕೊಂಡೆ ಸಾಗಬೇಕು ಎಂದು ನೋವು ತೋಡಿಕೊಂಡಿದ್ದ.

ಈಗ ಸರ್ಕಾರ ಸೂರ್ಯಕಾಂತ್ ಗೆ ಗುಡ್ ನ್ಯೂಸ್ ನೀಡಿದ್ದು, ಗಡಿಲಿಂಗದಹಳ್ಳಿಗೆ ಬಸ್ ವ್ಯವಸ್ಥೆ ಮಾಡಿದೆ. ಇದಕ್ಕೆ ಸೂರ್ಯಕಾಂತ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅದಲ್ಲದೇ ಸ್ಪರ್ಧೆಯ ತೀರ್ಪುಗಾರರಾದ ರಘು ದೀಕ್ಷೀತ್, ಗುರುಕಿರಣ್, ತೊದಲುವ ಸಮಸ್ಯೆಯಿಂದ ಬಳಲುತ್ತಿರುವ ಸೂರ್ಯಕಾಂತ್ ಗೆ ಸೂಕ್ತ ಚಿಕಿತ್ಸೆ ನೀಡಿಸುವ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ದಿನಬೆಳಗಾಗುವುದರಲ್ಲಿ ಕಲ್ಬುರ್ಗಿಯ ಸೂರ್ಯಕಾಂತ್ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಅವರ ಕಂಠಸಿರಿಯಿಂದ ಮತ್ತಷ್ಟು ಹಾಡುಗಳು ಹೊರಹೊಮ್ಮಲಿ ಎಂದು ಬಯಸುತ್ತೇವೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ತಿಳಿಸಿ.