ನಾಯಕನ ಬದಲಾವಣೆ ಎಂಬ ಸುದ್ದಿಗೆ ಕೊನೆಗೂ ಸ್ಪಷ್ಟನೆ ನೀಡಿದ ಬಿಸಿಸಿಐ, ಖಾರವಾಗಿ ಹೇಳಿದ್ದೇನು ಗೊತ್ತಾ??
ನಾಯಕನ ಬದಲಾವಣೆ ಎಂಬ ಸುದ್ದಿಗೆ ಕೊನೆಗೂ ಸ್ಪಷ್ಟನೆ ನೀಡಿದ ಬಿಸಿಸಿಐ, ಖಾರವಾಗಿ ಹೇಳಿದ್ದೇನು ಗೊತ್ತಾ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ 24 ಗಂಟೆಗಳಿಂದ ವಿರಾಟ್ ಕೊಹ್ಲಿ ರವರು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಆದಮೇಲೆ ನಾಯಕತ್ವ ಸ್ಥಾನದಿಂದ ಕೆಳಗಿಳಿಯಲಿದ್ದಾರೆ, ಹಾಗೂ ಇದೇ ಸಮಯದಲ್ಲಿ ಟೆಸ್ಟ್ ತಂಡದ ನಾಯಕತ್ವವನ್ನು ಮುಂದುವರಿಸುತ್ತಾ ಹಾಗೂ ತಾವೊಬ್ಬ ವಿಶ್ವಶ್ರೇಷ್ಠ ಬ್ಯಾಟ್ಸ್ ಮ್ಯಾನ್ ಆಗುವತ್ತಾ ಗಮನ ಹರಿಸಲಿದ್ದಾರೆ ಎಂಬ ಹಲವಾರು ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಹಲವಾರು ಪ್ರತಿಷ್ಠಿತ ಮಾಧ್ಯಮಗಳು ಕೂಡ ಈ ಕುರಿತು ವರದಿಯನ್ನು ಮಾಡಿವೆ. ವಿರಾಟ್ ಕೊಹ್ಲಿ ರವರು ತಮ್ಮ ಬ್ಯಾಟಿಂಗ್ ಕುರಿತು ಗಮನಹರಿಸಲು ಈ ರೀತಿಯ ನಿರ್ಧಾರ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಹಾಗೂ ಇದೇ ಸಮಯದಲ್ಲಿ ರೋಹಿತ್ ಶರ್ಮಾ ರವರು ಟಿ-ಟ್ವೆಂಟಿ ಹಾಗೂ ಏಕದಿನ ತಂಡಗಳ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಅಥವಾ ಟಿ ಟ್ವೆಂಟಿ 20 ರೋಹಿತ್ ಶರ್ಮಾ ವಹಿಸಿಕೊಂಡು ಏಕದಿನ ತಂಡಕ್ಕೆ ಮತ್ತೊಬ್ಬರು ಕ್ಯಾಪ್ಟನ್ ಆಯ್ಕೆಯಾಗಬಹುದು ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು. ಈ ಮೂಲಕ ನಾಯಕತ್ವವನ್ನು ವಿಭಜನೆ ಮಾಡಲು ಬಿಸಿಸಿಐ ಆಲೋಚನೆ ನಡೆಸಿದೆ ಎಂಬುದು ಕೂಡ ಮಾಹಿತಿಗಳಿಂದ ತಿಳಿದು ಬಂದಿತ್ತು. ಆದರೆ ಈ ಎಲ್ಲ ಊಹಾಪೋಹಗಳಿಗೆ ಇದೀಗ ಬಿಸಿಸಿಐ ಬ್ರೇಕ್ ಹಾಕಿದೆ.
ಹೌದು ಸ್ನೇಹಿತರೇ ಈ ಕುರಿತು ಇದೀಗ ಸೌರವ್ ಗಂಗುಲಿ ರವರ ಅಧ್ಯಕ್ಷತೆಯಲ್ಲಿ ನಡೆದ ಸಂದರ್ಶನದಲ್ಲಿ ಸಂಪೂರ್ಣ ವಿಷಯಗಳು ಬಯಲಾಗಿದ್ದು ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಕೂಡ ಅಧಿಕೃತವಾಗಿ ಆದೇಶ ಹೊರಡಿಸಿದ್ದು, ಯಾವುದೇ ಕಾರಣಕ್ಕೂ ವಿರಾಟ್ ಕೊಹ್ಲಿ ರವರ ನಾಯಕತ್ವವನ್ನು ಬದಲಾಯಿಸುವ ಆಲೋಚನೆ ಅಥವಾ ಸಮಾಲೋಚನೆ ಇಲ್ಲಿಯವರೆಗೂ ಕೂಡ ನಡೆದಿಲ್ಲ, ಇದು ಕೇವಲ ಊಹಾಪೋಹಗಳು, ವಿರಾಟ್ ಕೊಹ್ಲಿ ಅವರು ಎಲ್ಲ ರೀತಿಯ ಕ್ರಿಕೆಟ್ ಮಾದರಿಯಲ್ಲಿ ನಾಯಕನಾಗಿ ಮುಂದುವರಿಯಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದೆ. ಇದು ಕೇವಲ ವಿಡಿಯೋ ಜನರು ಹುಟ್ಟುಹಾಕುತ್ತಿರುವ ಸುದ್ದಿಗಳು ಇದೆಲ್ಲಾ ಒಂದು ರೀತಿಯ ಕಸ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದೆ.