ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ ಹೊಸ ಧಾರವಾಹಿ, ಚಿಕ್ಕ ವಯಸ್ಸಿನಲ್ಲಿಯೇ ಮದ್ವೆ, ಆಮೇಲೆ ನಡೆಯುವ ಕತೆ ಏನು ಗೊತ್ತೇ??

7

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆ ಚಾನೆಲ್ ಗಳು ಹೊಸ ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿ ಕಾಂಪಿಟೇಶನ್ ಗೆ ಬಿದ್ದಿವೆ. ಹೌದು ಸ್ನೇಹಿತರೆ ಟಿ ಆರ್ ಪಿ ಗಾಗಿ ಹಾಗೂ ಸ್ಪಾನ್ಸರ್ ಗಳಿಗಾಗಿ ಕನ್ನಡ ಕಿರುತೆರೆಯ ವಾಹಿನಿಗಳು ಒಳ್ಳೆಯ ಒಳ್ಳೆಯ ಧಾರಾವಾಹಿಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿವೆ. ಹಿಂದೆ ಲಾಕ್ಡೌನ್ ಇದ್ದಾಗ ದಾರವಾಹಿ ಚಿತ್ರೀಕರಣಗಳು ನಡೆಯುತ್ತಿರಲಿಲ್ಲ ಹಾಗಾಗಿ ಎಲ್ಲ ಚಾನೆಲ್ ಗಳಲ್ಲಿ ಡಬ್ಬಿಂಗ್ ಧಾರವಾಹಿಗಳ ಟ್ರೆಂಡ್ ಸ್ಟಾರ್ಟ್ ಆಗಿತ್ತು.

ಹೌದು ಸ್ನೇಹಿತರೆ ಹಿಂದಿ ಧಾರವಾಹಿಗಳನ್ನು ಕನ್ನಡದ ನೇಟಿವಿಟಿಗೆ ತಕ್ಕಂತೆ ಡಬ್ ಮಾಡಿ ಪ್ರಸಾರ ಮಾಡಲಾಗುತ್ತಿತ್ತು. ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅದೇ ಮಾದರಿಯ ಧಾರಾವಾಹಿಯೊಂದನ್ನು ಇದೇ ಸೆಪ್ಟೆಂಬರ್ 20 ರಿಂದ 2:00 ಗಂಟೆಗೆ ಪ್ರಸಾರವಾಗಲು ಪ್ರಾರಂಭವಾಗಲಿದೆ. ಹೌದು ಸ್ನೇಹಿತರೆ ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಬ್ಯಾರಿಸ್ಟರ್ ಬಾಬು ಎಂಬ ಧಾರಾವಾಹಿಯನ್ನು ಚಿಕ್ಕೆಜಮಾನಿ ಎಂಬ ಹೆಸರಿನ ಮೂಲಕ ಕಲರ್ಸ್ ಕನ್ನಡ ವಾಹಿನಿ ಪ್ರಸಾರ ಮಾಡಲು ವಾಹಿನಿ ನಿರ್ಧರಿಸಿದೆ. ಇನ್ನು ಹಿಂದಿ ಡಬ್ಬಿಂಗ್ ಧಾರವಾಹಿಯನ್ನು ಕನ್ನಡದಲ್ಲಿ ಪ್ರಸಾರ ಮಾಡಲು ಹಲವಾರು ಪ್ರೇಕ್ಷಕರು ವಿರೋಧಿಸಿದ್ದರು ಕೂಡ ಪ್ರಸಾರದ ಸಮಯ ಈಗಾಗಲೇ ನಿಗದಿಯಾಗಿದೆ.

ಹೌದು ಸ್ನೇಹಿತರೆ ಈ ಧಾರಾವಾಹಿಯ ಕಥೆಯನ್ನು ಹೇಳುವುದಾದರೆ ಭಾಂದಿತಾ ದಾಸ್ ಎಂಬ 11 ವರ್ಷದ ಬಾಲಕಿಯನ್ನು ಬ್ಯಾರಿಸ್ಟರ್ ಅನೀರುದ್ಧ್ ರಾಯಾ ಚೌದರಿ ಎಂಬಾತ ಮದುವೆಯಾಗಿ ಸಮಾಜದಲ್ಲಿದ್ದ ಕೆಟ್ಟ ಕಾನೂನುಗಳ ವಿರುದ್ಧ ಧ್ವನಿ ಎತ್ತುವ ತನ್ನ ಕಾರ್ಯವನ್ನು ಪ್ರವೃತ್ತ ಗಳಿಸುತ್ತಾನೆ. ಇನ್ನು ಇದು ಸ್ವಾತಂತ್ರ್ಯ ಪೂರ್ವದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದಂತಹ ಘಟನೆಯ ಧಾರವಾಹಿ ಆಗಿದೆ. ಇನ್ನು ಈಗಾಗಲೇ ಇದರ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ತನ್ನ ಚಾನೆಲ್ನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ದಾರವಾಹಿ ಪ್ರೇಕ್ಷಕರಿಗೆ ಒಂದೊಳ್ಳೆ ದಾರವಾಹಿ ನೋಡುವ ಸೌಭಾಗ್ಯ ಒದಗಿ ಬಂದಿದೆ ಎಂದು ಹೇಳಬಹುದಾಗಿದೆ.