ದರ್ಶನ್ ರವರ ಕ್ರಾಂತಿ ಸಿನಿಮಾ ಘೋಷಣೆ ಬೆನ್ನಲ್ಲೇ ಸುದೀಪ್ ರವರ ಮುಂದಿನ ಸಿನಿಮಾ ಕುರಿತು ಮಾಹಿತಿ, ಮುಂದಿನ ಸಿನಿಮಾ ಯಾವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಸಕ್ಕತ್ ಸೌಂಡ್ ಮಾಡುತ್ತಿರುವ ಕನ್ನಡದ ಸಿನಿಮಾವೆಂದರೆ ಅದು ಖಂಡಿತವಾಗಿಯೂ ವಿಕ್ರಂತ್ ರೋಣ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ವಿಕ್ರಾಂತ ರೋಣ ಚಿತ್ರದ ವಿಡಿಯೋ ತುಣುಕು ಕಿಚ್ಚ ಸುದೀಪ್ ರವರ ಜನ್ಮದಿನಕ್ಕೆ ಬಿಡುಗಡೆಯಾಗಿದ್ದು ಈಗಾಗಲೇ ತನ್ನ ಕ್ವಾಲಿಟಿ ಹಾಗೂ ಮೇಕಿಂಗ್ ಮೂಲಕ ಎಲ್ಲಾ ಸಿನಿಪ್ರಿಯರ ಮನ ಗೆದ್ದಂತಹ ಚಿತ್ರವಾಗಿದೆ ವಿಕ್ರಾಂತ್ ರೋಣ.

ಹೌದು ಸ್ನೇಹಿತರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಅನು ಭಂಡಾರಿ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ವಿಕ್ರಾಂತ್ ರೋಣದ ಚರ್ಚೆ ಈಗಾಗಲೇ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ದೊಡ್ಡದಾಗಿ ಕೇಳುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ವಿಶೇಷ ಲುಕ್ ಈಗಾಗಲೇ ಎಲ್ಲಾ ಸಿನಿಪ್ರೇಮಿಗಳ ಹೃದಯವನ್ನು ಗೆದ್ದಿದೆ. ಸದಾ ವಿಭಿನ್ನ ಹಾಗೂ ವಿಶೇಷವಾದ ಪಾತ್ರಗಳ ಮೂಲಕ ಮಿಂಚುವ ಕಿಚ್ಚ ಸುದೀಪ್ ರವರು ವಿಕ್ರಾಂತ್ ರೋಣ ಚಿತ್ರದಲ್ಲಿ ಇವೆಲ್ಲದಕ್ಕಿಂತ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಈಗ ಸದ್ಯಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ3 ಹಾಗೂ ವಿಕ್ರಾಂತ್ ರೋಣ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು ಅಭಿಮಾನಿಗಳು ಈ ಎರಡೂ ಚಿತ್ರಗಳನ್ನು ನೋಡಲು ಕಾತರರಾಗಿದ್ದಾರೆ

ಆದರೆ ಈಗ ಮೂಡಿಬರುತ್ತಿರುವ ಪ್ರಶ್ನೆ ಇವೆರಡೂ ಚಿತ್ರಗಳ ನಂತರ ಸುದೀಪ್ ರವರು ಏನು ಮಾಡಲಿದ್ದಾರೆ. ಹೌದು ಸ್ನೇಹಿತರೆ ಕೆಲ ಸುದ್ದಿಗಳ ಪ್ರಕಾರ ಕಿಚ್ಚ ಸುದೀಪ್ ರವರು ನಿರ್ದೇಶನದ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಇನ್ನೂ ಕೆಲ ಸುದ್ದಿಗಳ ಪ್ರಕಾರ ಮತ್ತೊಮ್ಮೆ ಅನುಪ್ ಭಂಡಾರಿ ಅವರೊಂದಿಗೆ ಹೊಸ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಹೌದು ಸ್ನೇಹಿತರೆ ಈ ಹಿಂದೆ ಅಶ್ವತ್ಥಾಮ ಎಂಬ ಆ ಚಿತ್ರವನ್ನು ಕಿಚ್ಚ ಕ್ರಿಯೇಶನ್ಸ್ ಮೂಲಕ ಘೋಷಣೆ ಮಾಡಲಾಗಿತ್ತು. ಈಗ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ಮತ್ತೊಮ್ಮೆ ಕಿಚ್ಚ ಸುದೀಪ್ ರವರನು ಭಂಡಾರಿ ನಿರ್ದೇಶನದಲ್ಲಿ ಅಶ್ವತ್ಥಾಮ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ, ಹೆಸರು ಕೇಳಿದ ಕೂಡಲೇ ಇದೊಂದು ಪೌರಾಣಿಕ ಸಿನಿಮಾ ಇರಬಹುದು ಎಂದು ಕೂಡ ಹೇಳಲಾಗುತ್ತಿದೆ. ಈ ಕುರಿತಂತೆ ಕಿಚ್ಚ ಸುದೀಪ್ ರವರು ಕೂಡ ಸಾಕಷ್ಟು ಸಂದರ್ಶನಗಳಲ್ಲಿ ಮಾತಾಡಿದ್ದು ಅಭಿಮಾನಿಗಳು ಈ ಚಿತ್ರಕ್ಕಾಗಿ ಕೂಡ ಈಗ ಕಾತರರಾಗಿದ್ದಾರೆ.

Post Author: Ravi Yadav