ಕೊನೆಗೂ ಹೋಂ ಮಿನಿಸ್ಟರ್ ಆದೇಶಕ್ಕೆ ತಲೆಬಾಗಿದ ಟೋಯಿಂಗ್, ಖಡಕ್ ಮಾತಿಗೆ ಬೆಲೆಕೊಟ್ಟು ವಾಹನ ಸವಾರರಿಗೆ ಗುಡ್ ನ್ಯೂಸ್. ನಡೆದ್ದಡೇನು ಗೊತ್ತೇ??

ಕೊನೆಗೂ ಹೋಂ ಮಿನಿಸ್ಟರ್ ಆದೇಶಕ್ಕೆ ತಲೆಬಾಗಿದ ಟೋಯಿಂಗ್, ಖಡಕ್ ಮಾತಿಗೆ ಬೆಲೆಕೊಟ್ಟು ವಾಹನ ಸವಾರರಿಗೆ ಗುಡ್ ನ್ಯೂಸ್. ನಡೆದ್ದಡೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬೆಂಗಳೂರು ಅತ್ಯಂತ ಜನಸಂದಣಿ ಇರುವಂತಹ ಪ್ರದೇಶ. ಇಲ್ಲಿ ಒಂದು ಚದರ ಅಡಿ ಜಾಗಕ್ಕೂ ಬಹು ಬೇಡಿಕೆಯಿದೆ. ಅಂತಹದರಲ್ಲಿ ವಾಹನ ಸವಾರಿಯಂತೂ ಬಲು ಕಷ್ಟ. ಇನ್ನು ವಾಹನವನ್ನು ಓಡಿಸುವುದು ಬಹಳ ಕಷ್ಟ. ಏಷ್ಟೋ ಕಡೆ ವಾಹನಗಳಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಸಹ ಇಲ್ಲ. ಇನ್ನು ಪಾರ್ಕಿಂಗ್ ಮಾಡಿದರೇ, ಟೋಯಿಂಗ್ ಆಗುವ ಸಾಧ್ಯತೆ ಹೆಚ್ಚು. ಇತ್ತಿಚೆಗಷ್ಟೇ ಬೆಂಗಳೂರಿನಲ್ಲಿ ಟೋಯಿಂಗ್ ಹಾವಳಿ ಹೆಚ್ಚಾಗಿತ್ತು. ಸಾರ್ವಜನಿಕರು ಬಹಿರಂಗವಾಗಿಯೇ ಇದಕ್ಕೆ ಆಕ್ಷೇಪಪಡಿಸಿದ್ದರು. ಅದಲ್ಲದೇ ಟೋಯಿಂಗ್ ಮಾಡುತ್ತಿದ್ದ ಸಿಬ್ಬಂದಿಗಳಿಗೆ ಸಾರ್ವಜನಿಕರು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡು ಕೈ ಮಾಡಿದ್ದರು.

ಆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದ್ದವು. ಅದಲ್ಲದೇ ಟೋಯಿಂಗ್ ನಿಷೇಧಿಸಿ, ವಾಹನ ಸವಾರರನ್ನು ಉಳಿಸಿ ಎಂಬ ಅಭಿಯಾನಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆದಿದ್ದವು. ಟೋಯಿಂಗ್ ಹೆಸರಿನಲ್ಲಿ ವ್ಯಾಪಕ ಭೃಷ್ಟಾಚಾರ ನಡೆಯುತ್ತಿತ್ತು. ಟೋಯಿಂಗ್ ನಡೆಸುವ ಸಿಬ್ಬಂದಿಗಳಿಗೆ 700 ರೂ ದಿನಗೂಲಿ, ವಾಹನ ಬಾಡಿಗೆ, ಅದು ಇದು ಎಲ್ಲಾ ಸೇರಿ ಒಂದು ವಾಹನಕ್ಕೆ ₹2350 ರೂ ಚಾರ್ಜ್ ಮಾಡುತ್ತಿದ್ದರು. ಅದಲ್ಲದೇ ಎಷ್ಟೋ ಪ್ರಕರಣಗಳಲ್ಲಿ ವಾಹನದ ಮಾಲೀಕರು ಅಷ್ಟು ಹಣ ಕಟ್ಟದೇ ಜೇಬಿನಲ್ಲಿಷ್ಟಿದ್ದನ್ನು ಕೊಟ್ಟು ವಾಹನಗಳನ್ನು ಬಿಡಿಸಿಕೊಳ್ಳುತ್ತಿದ್ದರು.

ಇದು ಸಹ ವೀಪರೀತ ಟೋಯಿಂಗ್ ಗೆ ಕಾರಣವಾಗುತ್ತಿತ್ತು. ಆದರೇ ಈ ಬಗ್ಗೆ ಕಠಿಣ ಕ್ರಮ ಕೈಗೊಂಡಿದ್ದ ನೂತನ ಗೃಸ ಸಚಿವ ಆರಗ ಜ್ಞಾನೇಂದ್ರ, ಟೋಯಿಂಗ್ ಬಗ್ಗೆ ಪೋಲಿಸರಿಗೆ ಕಠಿಣ ಸೂಚನೆಯನ್ನ ಕೊಟ್ಟಿದ್ದರು. ಅದಲ್ಲದೇ ಟೋಯಿಂಗ್ ಕೇಸ್ ದಾಖಲಿಸುವ ಸಂದರ್ಭದಲ್ಲಿ ಡಿಸಿಪಿಗಳು ಹಾಜರಿದ್ದು ಸ್ಥಳ ಪರಿವೀಕ್ಷಣೆ ಮಾಡಬೇಕು ಎಂದಿದ್ದರು. ವಾಹನ ಸವಾರರು ನೋ ಪಾರ್ಕಿಂಗ್ ನಲ್ಲಿ ವಾಹನವನ್ನ ನಿಲ್ಲಿಸಿದ್ದರೇ, ಮೂರು ಭಾರಿ ಮೈಕ್ ನಲ್ಲಿ ವಾಹನದ ಬಗ್ಗೆ ಹೇಳಿ, ನಂತರವೂ ಅವರು ಬಾರದಿದ್ದರೇ, ಅಂತಹ ವಾಹನಗಳನ್ನು ಟೋಯಿಂಗ್ ಮಾಡಬೇಕು. ಒಂದು ವೇಳೆ ಅವರು ಸ್ದಳದಲ್ಲಿದ್ದರೇ ಅವರಿಂದ ನೋ ಪಾರ್ಕಿಂಗ್ ಶುಲ್ಕವನ್ನ ಮಾತ್ರ ವಸೂಲಿ ಮಾಡಬೇಕು ಹೊರತು, ಬೇರೆ ಏನನ್ನೂ ಕೇಳಬಾರದು ಎಂದು ಹೇಳಿದ್ದರು. ಸದ್ಯ ಗೃಹ ಸಚಿವರ ಈ ನಿರ್ಧಾರವನ್ನ ಬೆಂಗಳೂರು ಟ್ರಾಫಿಕ್ ಪೋಲಿಸರು ಕಟ್ಟುನಿಟ್ಟಾಗಿ ಆಚರಿಸುತ್ತಿದ್ದಾರೆ. ಆ ಕಾರಣಕ್ಕೆ ಕಳೆದೊಂದು ವಾರದಿಂದ ಟೋಯಿಂಗ್ ಕೇಸುಗಳು ಯಾವುದು ದಾಖಲಾಗಿಲ್ಲ. ಅನವಶ್ಯಕ ವಾದಗಳು ಸಹ ನಡೆದ ವರದಿಯಾಗಿಲ್ಲ. ಹಾಗಾಗಿ ಗೃಹ ಸಚಿವರ ಈ ನಿರ್ಧಾರ ವಾಹನ ಸವಾರರಿಗೆ ಖುಷಿ ತಂದಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ತಿಳಿಸಿ.