ಅಚನೂಕ್ ಆಗಿ ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ದಿಗಳ ಪಟ್ಟಿ ಬಿಡುಗಡೆ, ವಾಹಿನಿ ಕಡೆಯಿಂದ ಕರೆ ಮಾಡಿರುವ ಸ್ಪರ್ದಿಗಳು ಯಾರ್ಯಾರು ಗೊತ್ತೇ??
ಅಚನೂಕ್ ಆಗಿ ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ದಿಗಳ ಪಟ್ಟಿ ಬಿಡುಗಡೆ, ವಾಹಿನಿ ಕಡೆಯಿಂದ ಕರೆ ಮಾಡಿರುವ ಸ್ಪರ್ದಿಗಳು ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಎಂದರೆ ಸಾಕು ಕನ್ನಡ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಬಾಡೂಟವನ್ನು ನೀಡುವ ಕಾರ್ಯಕ್ರಮ ಎಂದು ಹೇಳಬಹುದಾಗಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 8 ಮುಗಿದು ಈಗಾಗಲೇ ಮಂಜು ಪಾವಗಡ ವಿನ್ನರ್ ಎಂಬುದಾಗಿ ಎಲ್ಲರಿಗೂ ಕೂಡ ಗೊತ್ತಾಗಿದೆ.
ಇನ್ನು ಈಗಾಗಲೇ ತೆರೆಮರೆಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9 ಕ್ಕಾಗಿ ಕೂಡ ಕಲರ್ಸ್ ಕನ್ನಡ ವಾಹಿನಿ ತಯಾರಿ ಮಾಡಿಕೊಳ್ಳುತ್ತಿದೆ ಎಂಬ ಸುಳಿವು ಸಿಕ್ಕಿದೆ. ಕೇವಲ ಇಷ್ಟು ಮಾತ್ರವಲ್ಲದೆ ಬಿಗ್ ಬಾಸ್ ಕನ್ನಡ ಸೀಸನ್ 9 ಕ್ಕಾಗಿ ಯಾವ ಸ್ಪರ್ಧಿಗಳಲ್ಲಿ ಆಯ್ಕೆಯಾಗಿದ್ದಾರೆ ಎಂಬ ಕುರಿತಂತೆ ಸುಳಿವು ಕೂಡ ಸಿಕ್ಕಿದೆ ಬನ್ನಿ ಯಾರೆಲ್ಲ ಆಯ್ಕೆಯಾಗಿದ್ದಾರೆ ಎಂದು ನಾವು ವಿವರವಾಗಿ ಹೇಳುತ್ತೇವೆ.
ವಿಜಯ್ ಸೂರ್ಯ ಹೌದು ಸ್ನೇಹಿತರೆ ಅಗ್ನಿಸಾಕ್ಷಿ ಧಾರವಾಹಿ ಮೂಲಕ ಕನ್ನಡ ಕಿರುತೆರೆಯ ಲೋಕದಲ್ಲಿ ಪರಿಚಿತರಾಗಿ ನಂತರ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿರುವ ವಿಜಯ್ ಸೂರ್ಯ ಕೂಡ ಆಯ್ಕೆಯಾಗಿದ್ದಾರೆ. ಮಜಾಭಾರತ ರಘು ಕರಾವಳಿ ಮೂಲದ ಮಜಾಭಾರತ ರಘು ಕೂಡ ಈ ಬಾರಿಯ ಬಿಗ್ ಬಾಸ್ ಕನ್ನಡ ಒಂಬತ್ತಕ್ಕೆ ಆಯ್ಕೆಯಾಗುವ ಎಲ್ಲ ಸಾಧ್ಯತೆಗಳಿವೆ. ಸೌಂದರ್ಯ ಜಯಮಾಲಾ ರಿಯಲ್ ಸ್ಟಾರ್ ಉಪೇಂದ್ರರೊಂದಿಗೆ ಹಲವಾರು ಚಿತ್ರಗಳಲ್ಲಿ ನಟಿಸಿ ವಿಫಲರಾಗಿ ಈಗ ಬಿಗ್ ಬಾಸ್ ನಲ್ಲಿ ಅದೃಷ್ಟ ಪರೀಕ್ಷೆಗೆ ಸೌಂದರ್ಯ ಜಯಮಾಲರವರು ಬರುತ್ತಿದ್ದಾರೆ.
ತರಂಗ ವಿಶ್ವ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದರಲ್ಲಿ ಒಬ್ಬರಾದಂತಹ ವಿಶ್ವ ರವರು ಕೂಡ ಈ ಬಾರಿ ಬಿಗ್ ಬಾಸ್ ನಲ್ಲಿ ಬರಲಿದ್ದಾರೆ. ಮಂಡ್ಯ ರಮೇಶ್ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಕಲಾವಿದರಲ್ಲಿ ಹಾಗೂ ಹಾಸ್ಯ ಕಲಾವಿದರಲ್ಲಿ ಒಬ್ಬರಾಗಿರುವ ಮಂಡ್ಯ ರಮೇಶ್ ರವರು ಕೂಡ ಈ ಬಾರಿಯ ಬಿಗ್ ಬಾಸ್ ನಲ್ಲಿ ಆಗಮಿಸಲಿದ್ದಾರೆ. ಚಂದನ್ ಶರ್ಮ ಕನ್ನಡ ಚಿತ್ರರಂಗದ ಕಿರುತೆರೆಯ ನ್ಯೂಸ್ ವಾಚಕರಾಗಿ ಇದ್ದಂತಹ ಚಂದನ್ ಶರ್ಮಾರವರು ಕೂಡ ಈ ಬಾರಿಯ ಬಿಗ್ ಬಾಸ್ ನಲ್ಲಿ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ.
ಆರ್ ಜೆ ಸುನಿಲ್ ಎಫ್ಎಂನಲ್ಲಿ ಕೇಳಿಬರುವ ಕಾಗೆ ಕೋ ಪ್ರೋಗ್ರಾಮನ್ನು ನಡೆಸಿಕೊಡುವುದು ನಮ್ಮ ಆರ್.ಜೆ. ಸುನಿಲ್ ರವರು. ಇವರು ಕೂಡ ಬಿಗ್ಬಾಸ್ ಮನೆಯಲ್ಲಿ ಕಾಗೆ ಬಿಡಲು ಬರಲಿದ್ದಾರೆ. ಕೆಸಿ ಕರಿಯಪ್ಪ ಕರ್ನಾಟಕ ರಾಜ್ಯ ರಣಜಿ ತಂಡದ ಆಟಗಾರ ಹಾಗೂ ಐಪಿಎಲ್ ನಲ್ಲಿ ರಾಜಸ್ಥಾನ ತಂಡದ ಆಟಗಾರ ಈ ಬಾರಿಯ ಬಿಗ್ ಬಾಸ್ ನಲ್ಲಿ ಕೂಡ ಬರಲಿದ್ದಾರೆ ಎಂಬ ಮಾಹಿತಿ ಇದೆ. ರೇಖಾದಾಸ್ ಕನ್ನಡ ಚಿತ್ರರಂಗದ ಹಿರಿಯ ಹಾಸ್ಯಕಲಾವಿದೆ ರೇಖಾದಾಸ್ ರವರು ಕೂಡ ಈ ಬಾರಿಯ ಬಿಗ್ ಬಾಸ್ ಗೆ ಬರಲಿದ್ದಾರೆ.
ಮುಖ್ಯಮಂತ್ರಿ ಚಂದ್ರು ಅನಾದಿ ಕಾಲದಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಸಿಕೊಂಡು ಬರುತ್ತಿರುವ ಮುಖ್ಯಮಂತ್ರಿ ಚಂದ್ರುರವರು ಕೂಡ ಈ ಬಾರಿಯ ಬಿಗ್ ಬಾಸ್ ಗೆ ಕಾಲಿಡಲಿದ್ದಾರೆ. ರವಿ ಶ್ರೀವತ್ಸ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ಅಂತಹ ರವಿಶ್ರೀವತ್ಸ ರವರಿಗೆ ಕೂಡ ಈ ಬಾರಿಯ ಬಿಗ್ ಬಾಸ್ ನಿಂದ ಆಹ್ವಾನ ಬಂದಿದೆ. ಅಲೋಕ್ ಕನ್ನಡ ಚಿತ್ರರಂಗದ ಇಂಡಿಪೆಂಡೆಂಟ್ ಆರ್ಟಿಸ್ಟ್ ಎಂದು ಹೇಳಬಹುದಾದಂತಹ ಅಲೋಕ್ ರವರು ಕೂಡ ಈ ಬಾರಿಯ ಬಿಗ್ ಬಾಸ್ ನಲ್ಲಿ ಕಾಲಿಡಲಿದ್ದಾರೆ.
ಪ್ರದೀಪ್ ಬಡೆಕ್ಕಿಲ ಸ್ನೇಹಿತರ ಇವರು ಇನ್ಯಾರು ಅಲ್ಲ ಬಿಗ್ ಬಾಸ್ ಗೆ ಅಧಿಕೃತವಾಗಿ ಧ್ವನಿಯನ್ನು ನೀಡುವವರು. ಇವರು ಕೂಡ ಬಿಗ್ ಬಾಸ್ ಗೆ ಎಂಟ್ರಿ ಕೊಡಕ್ಕೆ ರೆಡಿ. ಮೇಘನಾ ಖುಷಿ ಅರಗಿಣಿ ಧಾರಾವಾಹಿ ನಟಿ ಮೇಘನಾ ಖುಷಿ ಕೂಡ ಈ ಬಾರಿಯ ಬಿಗ್ ಬಾಸ್ ನ ಪಾಲಾಗಲಿದ್ದಾರೆ. ನಮೃತ ಗೌಡ ನಾಗಿಣಿ2 ಖ್ಯಾತಿಯ ಕಿರುತೆರೆಯ ಸ್ಟಾರ್ ನಟಿ ನಮೃತಾ ಗೌಡರವರು ಕೂಡಾ ಬಿಗ್ ಬಾಸ್ ಗೆ ಬರಲಿದ್ದಾರೆ. ವೇದ ಕೃಷ್ಣಮೂರ್ತಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸದಸ್ಯರಾಗಿರುವ ವೇದ ಕೃಷ್ಣಮೂರ್ತಿ ಕೂಡ ಈ ಬಾರಿಯ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.