ಯಾರ್ಯಾರೋ ಪ್ಯಾನ್ ಇಂಡಿಯಾ ಮಾಡ್ತಾ ಇದ್ದಾರೆ, ಆದರೆ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದು ಕನ್ನಡಿಗರು ಯಾವುದು ಆ ಸಿನಿಮಾ ಗೊತ್ತೆ??

ನಮಸ್ಕಾರ ಸ್ನೇಹಿತರೇ ಬಾಹುಬಲಿ ಚಿತ್ರದ ನಂತರ ದಕ್ಷಿಣ ಭಾರತದಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳ ಸಂಖ್ಯೆ ಜಾಸ್ತಿಯಾಗಿದೆ. ಇನ್ನು ಕನ್ನಡ ಚಿತ್ರರಂಗದಲ್ಲಿ ಕೂಡ ಕೆಜಿಎಫ್ ಸರಣಿ ಚಿತ್ರಗಳ ನಂತರ ಪ್ಯಾನ್ ಇಂಡಿಯಾ ಚಿತ್ರಗಳ ಸಂಸ್ಕೃತಿ ಜಾಸ್ತಿಯಾಗುತ್ತಿದೆ. ಹೌದು ಸ್ನೇಹಿತರೇ ಮೊದಲು ಕನ್ನಡ ಚಿತ್ರಗಳು ಕೇವಲ ಕನ್ನಡ ಚಿತ್ರಗಳಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಭಾಷೆಗಳಲ್ಲಿ ಕೂಡ ಡಬ್ ಆಗುತ್ತಿದ್ದವು. ಈಗ ಕೇವಲ ದಕ್ಷಿಣಭಾರತಕ್ಕೆ ಸೀಮಿತವಾಗದೆ ಪ್ಯಾನ್ ಇಂಡಿಯಾ ಚಿತ್ರವಾಗಿ ಕೂಡ ಹಲವಾರು ಚಿತ್ರಗಳು ಬಿಡುಗಡೆಯಾಗುತ್ತಿವೆ.

ಆದರೆ ನಿಮಗೆ ಗೊತ್ತಾ ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ 60 ವರ್ಷಗಳ ಹಿಂದೆಯೇ ಪ್ಯಾನ್ ಇಂಡಿಯಾ ಚಿತ್ರವೊಂದು ಬಿಡುಗಡೆಯಾಗಿತ್ತು. ಹೌದು ಸ್ನೇಹಿತರೆ ಕನ್ನಡದ ಅಥವಾ ದೇಶದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಯಾರು ಎಂದು ಕೇಳಿದರೆ ನೀವು ಬೇರೆ ಬೇರೆ ನಟರ ಹೆಸರು ಹೇಳಬಹುದು. ಆದರೆ ಇಡೀ ಭಾರತೀಯ ಚಿತ್ರರಂಗದಲ್ಲಿ ಮೊದ ಪ್ಯಾನ್ ಇಂಡಿಯಾ ಚಿತ್ರವಾಗಿ ಮೂಡಿಬಂದಿದ್ದು ಕನ್ನಡ ಚಿತ್ರವೇ ಹಾಗೂ ಇಡೀ ಭಾರತ ದೇಶದಲ್ಲಿ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೂಡಿಬಂದಿದ್ದು ಕೂಡ ಕನ್ನಡದ ಹೆಮ್ಮೆಯ ನಟ. ಹಾಗಿದ್ದರೆ ಆ ಕನ್ನಡ ಚಿತ್ರ ಹಾಗೂ ಕನ್ನಡದ ಸೂಪರ್ ಸ್ಟಾರ್ ಯಾರು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಭಾರತೀಯ ಚಿತ್ರರಂಗದ ಮೊತ್ತಮೊದಲ ಪ್ಯಾನ್ ಇಂಡಿಯಾ ಚಿತ್ರ ಬಿಡುಗಡೆಯಾಗಿದ್ದು ಕನ್ನಡ ಚಿತ್ರರಂಗದಲ್ಲಿ. 1959 ರಲ್ಲಿ ಬಿಡುಗಡೆಯಾದಂತಹ ಮಹಿಷಾಸುರ ಮ’ರ್ದಿನಿಯ ಎಂಬ ಚಿತ್ರ ಬರೋಬ್ಬರಿ ಎಂಟು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಇನ್ನು ಈ ಚಿತ್ರದಲ್ಲಿ ಮಹಿಷಾಸುರ ನ ಪಾತ್ರದಲ್ಲಿ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ರವರು ನಡೆಸಿದ್ದರು. ಪ್ಯಾನ್ ಇಂಡಿಯಾ ಚಿತ್ರಗಳ ಬಿಡುಗಡೆ ವಿಚಾರಕ್ಕೆ ಬಂದರೆ ತಾವು ಮೊದಲು ತಾವು ಮೊದಲು ಎಂದು ಹೇಳುವ ಬೇರೆ ಭಾಷೆಯ ಚಿತ್ರರಂಗಗಳಿಗೆ ಇದು ತಿಳಿಯಲೇಬೇಕು ಸ್ನೇಹಿತರೇ. ನಮ್ಮ ದೇಶದ ಮೊದಲ ಪ್ಯಾನ್ ಇಂಡಿಯಾ ಚಿತ್ರ ಕನ್ನಡ ಚಿತ್ರ ಹಾಗೂ ಮೊದಲ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ನಮ್ಮ ಅಣ್ಣಾವ್ರು ಎಂದು ಹೇಳುವುದಕ್ಕೆ ನಮಗೆ ಹೆಮ್ಮೆ ಆಗುತ್ತದೆ.

Post Author: Ravi Yadav