ಪಂದ್ಯ ಗೆಲ್ಲುತ್ತಿದ್ದರೂ ಕೂಡ ವಿರಾಟ್ ಕೊಹ್ಲಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಸುನೀಲ್ ಗವಾಸ್ಕರ್ ಯಾಕೆ ಗೊತ್ತೇ??

ಪಂದ್ಯ ಗೆಲ್ಲುತ್ತಿದ್ದರೂ ಕೂಡ ವಿರಾಟ್ ಕೊಹ್ಲಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಸುನೀಲ್ ಗವಾಸ್ಕರ್ ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ಕ್ರಿಕೇಟ್ ಕಂಡ ಶ್ರೇಷ್ಠ ನಾಯಕ. ಇಂಗ್ಲೆಂಡ್ ವಿರುದ್ದದ ಟೆಸ್ಟ್ ನಲ್ಲಿ ಭಾರತ ಐತಿಹಾಸಿಕ ಮೈದಾನ ಲಾರ್ಡ್ಸ್ ನಲ್ಲಿ ದಿಗ್ವಿಜಯ ಸಾಧಿಸಿತ್ತು. ಅದಲ್ಲದೇ ಸೋತೆಬಿಟ್ಟಿತು ಎನ್ನುವ ಪಂದ್ಯದಲ್ಲಿ ವಿರಾಟ್ ಕೋಹ್ಲಿಯ ಆಕರ್ಷಕ ನಾಯಕತ್ವದ ಕೌಶಲ್ಯಗಳಿಂದ ಭಾರತ ಅದ್ಭುತ ಜಯ ಸಾಧಿಸಿತ್ತು. ಈಗ ನಾಲ್ಕನೇ ಟೆಸ್ಟ್ ನಲ್ಲಿ ಕೂಡ ಭಾರತ ತಂಡ ಗೆಲುವು ಕಾಣುವುದರಲ್ಲಿ ಯಶಸ್ವಿಯಾಗಿದೆ. ಆದರೆ ಈ ನಡುವೆ ನಿನ್ನೆ ಪಂದ್ಯ ನಡೆಯುವ ವೇಳೆ ಕಾಮೆಂಟರಿ ಬಾಕ್ಸ್ ನಲ್ಲಿ ಕೂತಿದ್ದ ಭಾರತ ತಂಡದ ಹಿರಿಯ ಕ್ರಿಕೇಟರ್ ಸುನೀಲ್ ಗವಾಸ್ಕರ್ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ಕೌಶಲ್ಯದ ವಿರುದ್ದ ಕಿಡಿಕಾರಿದ ಪ್ರಸಂಗ ಸಹ ನಡೆಯಿತು.

ಇನ್ನಿಂಗ್ಸ್ ನ ಮೊದಲ ಓವರ್ ನ ಹೊಸ ಬೌಲರ್ ಉಮೇಶ್ ಯಾದವ್ ಗೆ ನೀಡಿದ್ದು ಗವಾಸ್ಕರ್ ಕೆಂಗಣ್ಣಿಗೆ ಕಾರಣವಾಗಿತ್ತು. ಉಮೇಶ್ ಯಾದವ್ ಒಂಬತ್ತು ತಿಂಗಳಿಂದ ಒಂದೇ ಒಂದು ಅಂತರಾಷ್ಟ್ರೀಯ ಪಂದ್ಯ ಆಡಿಲ್ಲ. ಇಂತಹವರಿಗೆ ಇನ್ನಿಂಗ್ಸ್ ನ ಮೊದಲ ಓವರ್ ನ ಹೇಗೆ ನೀಡುತ್ತಾರೆ. ಅದಲ್ಲದೇ ಕಳೆದ ಪಂದ್ಯಗಳಲ್ಲಿ ಇಂಗ್ಲೆಂಡ್ ನ ಆರಂಭಿಕರನ್ನು ಔಟ್ ಮಾಡಿದ್ದು ಜಸ್ಪ್ರಿತ್ ಬುಮ್ರಾ. ಅವರನ್ನ ಬಿಟ್ಟು ಇವರು ಹೇಗೆ ಹೊಸ ಬೌಲರ್ ಗೆ ಚೆಂಡು ನೀಡುತ್ತಾರೆ. ಈ ಹಿಂದಿನ ಟೆಸ್ಟ್ ನಲ್ಲೂ ಸಹ ಮೊದಲ ಓವರ್ ನ ಇಶಾಂತ್ ಶರ್ಮಾ ಗೆ ನೀಡಿದ್ದರು.

ಒಂದು ತುದಿಯಲ್ಲಿ ಬುಮ್ರಾ ಉತ್ತಮ ಬೌಲಿಂಗ್ ಮಾಡುತ್ತಿದ್ದರೂ, ಮತ್ತೊಂದು ತುದಿಯಲ್ಲಿ ಇಶಾಂತ್ ಶರ್ಮಾ ಸಾಕಷ್ಟು ರನ್ ಬಿಟ್ಟು ಕೊಡುತ್ತಿದ್ದರು. ಇದು ಇಂಗ್ಲೆಂಡ್ ಉತ್ತಮ ಆರಂಭಪಡೆಯುವಲ್ಲಿ ಕಾರಣವಾಯಿತು. ಕೊಹ್ಲಿ ಇಂತಹ ನಿರ್ಧಾರಗಳನ್ನು ಅದೇಕೆ ತೆಗೆದುಕೊಳ್ಳುತ್ತಾರೋ, ಆ ದೇವರಿಗೆ ಗೊತ್ತು ಎಂದು ಸುನೀಲ್ ಗವಾಸ್ಕರ್ ಕಿಡಿಕಾರಿದ ಪ್ರಸಂಗ ನಡೆದಿದೆ. ಆದರೇ ಸುನೀಲ್ ಗವಾಸ್ಕರ್ ಲೆಕ್ಕಾಚಾರ ತಪ್ಪಿದಂತೆ, ಉಮೇಶ್ ಯಾದವ್ , ಟೀಂ ಇಂಡಿಯಾ ಪಾಲಿಗೆ ಅತಿ ಮಹತ್ವ ಎನಿಸಿದ್ದ ಜೋ ರೂಟ್ ರನ್ನ ತಮ್ಮ ಅದ್ಭುತ ಇನ್ ಸ್ವಿಂಗರ್ ಮೂಲಕ ಬೌಲ್ಡ್ ಮಾಡಿದ್ದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.