ಕರುನಾಡ ವಾಣಿ
ಇದು ನಿಮ್ಮ ಧ್ವನಿ

20 ವರ್ಷಗಳ ಹಿಂದೆಯೇ ನಿಂತಿದ್ದ ಶಿವಣ್ಣನವರ ಸಿನಿಮಾಗಾಗಿ ಇವತ್ತಿಗೂ ಕಾಯುತ್ತಿರುವ ಫ್ಯಾನ್ಸ್, ಆ ಸಿನೆಮಾ ಹಾಗೂ ಪಾತ್ರ ಯಾವುದು ಗೊತ್ತೇ??

6

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಶಿವಣ್ಣನವರು ಈಗಾಗಲೇ ಮೂರು ತಲೆಮಾರಿನ ಚಿತ್ರರಂಗವನ್ನು ನೋಡಿಕೊಂಡು ಬಂದವರು. ಇಂದಿಗೂ ಕೂಡ ಕನ್ನಡಚಿತ್ರರಂಗದಲ್ಲಿ ಬಲಿಷ್ಠವಾಗಿ ನೆಲೆನಿಂತವರು. ಚಿತ್ರರಂಗಕ್ಕೆ ಬಂದು ಮೂವತ್ತೈದು ವರ್ಷಗಳಿಗೂ ಜಾಸ್ತಿಯಾಗಿದ್ದರೂ ಕೂಡ ತಮ್ಮ ಜನಪ್ರಿಯತೆಯನ್ನು ಕೊಂಚವು ಕೂಡ ಕಡಿಮೆ ಮಾಡಿಕೊಳ್ಳದಂತಹ ನಟ ಅವರು ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ಆನಂದ್ ಚಿತ್ರದಿಂದ ತಮ್ಮ ಚಿತ್ರದ ಜೀವನವನ್ನು ಪ್ರಾರಂಭಿಸಿ ಇಂದಿನವರಿಗೂ ಕೂಡ ಕನ್ನಡ ಚಿತ್ರರಂಗದ ಕರುನಾಡ ಚಕ್ರವರ್ತಿ ಆಗಿ ಮಿಂಚುತ್ತಿದ್ದಾರೆ ನಮ್ಮ ಶಿವಣ್ಣ.

ವಯಸ್ಸು 56 ಮೀರಿದ್ದರೂ ಕೂಡ ಶಿವಣ್ಣ ಹಾಕುವ ಸ್ಟೆಪ್ ಅನ್ನು ಮತ್ತು ಸಾಹಸ ದೃಶ್ಯಗಳನ್ನು ಮೀರಿಸುವ ಇನ್ನೊಬ್ಬ ನಟ ಕನ್ನಡ ಚಿತ್ರರಂಗದಲ್ಲಿ ಇಲ್ಲ ಎಂದು ಹೇಳಬಹುದಾಗಿದೆ. ಇಂದಿಗೂ ಕೂಡ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣನವರು ಅಗ್ರಸ್ಥಾನದಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ 125 ಚಿತ್ರಗಳನ್ನು ಮಾಡಿರುವ ಶಿವಣ್ಣನವರು ಇನ್ನೂರರ ಗಡಿ ಯನ್ನು ದಾಟಿದರು ಕೂಡ ಆಶ್ಚರ್ಯಪಡಬೇಕಾಗಿಲ್ಲ. ಇನ್ನೊಂದು ಚಿತ್ರ ಮಾತ್ರ 20ವರ್ಷಗಳಿಂದ ಕೂಡ ಅರ್ಧಕ್ಕೆ ನಿಂತಿದ್ದು ಅಭಿಮಾನಿಗಳು ಆ ಚಿತ್ರದ ಬಿಡುಗಡೆಗೆ ಕಾತರರಾಗಿ ಕಾಯುತ್ತಿದ್ದಾರೆ.

ಹೌದು ಸ್ನೇಹಿತರೆ ಶಿವಣ್ಣನವರ ಒಂದು ಚಿತ್ರ ಇಪ್ಪತ್ತು ವರ್ಷಗಳ ಹಿಂದೆ ಅರ್ಧಕ್ಕೆ ಚಿತ್ರೀಕರಣ ಮಾಡಿ ನಿಂತಿದ್ದು ಇಂದಿಗೂ ಕೂಡ ಅವರ ಅಭಿಮಾನಿಗಳು ಆ ಚಿತ್ರದ ಬಿಡುಗಡೆಗೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಹೌದು ಸ್ನೇಹಿತರ ಚಿತ್ರ ಇನ್ಯಾವುದು ಅಲ್ಲ ಜಿಲ್ಲಾಧಿಕಾರಿ. ಈ ಚಿತ್ರವನ್ನು ಹುಚ್ಚ ಖ್ಯಾತಿಯ ನಿರ್ಮಾಪಕ ರೆಹಮಾನ್ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ ರವರು ಮಾಡಲು ಹೊರಟಿದ್ದರು. ಚಿತ್ರದಲ್ಲಿ ನಗ್ಮಾ ರವರು ನಟಿಯಾಗಿ ಕೂಡ ಕಾಣಿಸಿ ಕೊಂಡಿದ್ದರು. ಆದರೆ ನಟ ನಿರ್ಮಾಪಕ ಹಾಗೂ ನಿರ್ದೇಶಕರ ನಡುವಿನ ಹೊಂದಾಣಿಕೆ ಹಾಗೂ ಆರ್ಥಿಕ ಪರಿಸ್ಥಿತಿ ಅಭಾವದಿಂದಾಗಿ ಈ ಚಿತ್ರ ಅರ್ಧಕ್ಕೆ ನಿಂತಿದೆ ಎಂದು ಹೇಳಲಾಗುತ್ತದೆ. ಆದರೆ ಕೂಡ ಜಿಲ್ಲಾಧಿಕಾರಿ ಚಿತ್ರದ ಮೂಲಕ ಶಿವಣ್ಣನವರನ್ನು ಹೊಸ ಪಾತ್ರದಲ್ಲಿ ನೋಡಬೇಕೆಂಬ ಅಭಿಮಾನಿಗಳ ಕನಸು ಅರ್ಧಕ್ಕೆ ನಿಂತಿತು ಎಂದರೆ ಬೇಸರವಾಗುತ್ತದೆ.