ದರೋಡೆ ಮಾಡಿದ ನಂತರ ಮಾಲೀಕರ ಕಾಲಿಗೆ ನಮಸ್ಕರಿಸಿ, ಈ ಕಳ್ಳ ನೀಡಿದ ಆಶ್ವಾಸನೆ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕಳ್ಳತನ, ದರೋಡೆ ಮಾಡುವುದರ ಬಗ್ಗೆ ನಮಗೆಲ್ಲಾ ತಿಳಿದಿದೆ. ಯಾವಾಗ ಎಲ್ಲಿ ಎಷ್ಟು ಹೊತ್ತಿಗೆ ಯಾರು ಬಂದು ನಮ್ಮ ನಿಮ್ಮ ಮನೆಯನ್ನು ದೋಚಿಕೊಂಡು ಹೋಗಬಹುದು, ಅಪಾಯ ಮಾಡಬಹುದು ಎಂಬುದನ್ನು ಯಾರೂ ಊಹಿಸಲು ಸಾಧ್ಯವೇ ಇಲ್ಲ. ಹಾಗೆಯೇ ಒಮ್ಮೆ ಕಳ್ಳರು ಮನೆಯಲ್ಲಿದ್ದದ್ದನ್ನೆಲ್ಲಾ ಕೊಂಡು ಹೋದರೆ ಮತ್ತೆ ಆ ವಸ್ತುಗಳಾಗಲಿ ಹಣವಾಗಲಿ ಪೋಲೀಸ್ ರಿಗೆ ಹೇಳಿದರೂ ಸಿಗುತ್ತದೆ ಎನ್ನುವ ಗ್ಯಾರಂಟಿಯಂತೂ ಇರುವುದೇ ಇಲ್ಲ. ಆದರೆ ಇದಕ್ಕೆ ತದ್ವಿರುದ್ಧವಾಗಿ ಲಕ್ನೋದಲ್ಲಿ ಘಟನೆಯೊಂದು ನಡೆದಿದೆ. ಇದನ್ನು ಕೇಳಿದರೆ ನೀವು ನಿಜಕ್ಕೂ ಶಾಕ್ ಆಗ್ತಿರಾ! ಏನದು ಕಥೆ ? ಮುಂದೆ ಓದಿ..

ಇದು ಉತ್ತರ ಪ್ರದೇಶದ ಘಜಿಯಾಬಾದ್ ನಲ್ಲಿ ನಡೆದ ಘಟನೆ. ಹಿರಿಯ ಉದ್ಯಮಿಗಳಾದ ಸುರೇಂದ್ರ ವರ್ಮಾ ಹಾಗೂ ಅವರ ಪತ್ನಿಯ ಮನೆಯನ್ನು ತಡ ರಾತ್ರಿ 3.30 ರ ಸಮಯದಲ್ಲಿ ದೋಚಿದ್ದಾರೆ ದರೋಡೆಕೋರರು. ಈ ಸಮಯದಲ್ಲಿ ಮನೆಗೆ ನುಗ್ಗಿದ ಕಳ್ಳರು, ಸುರೇಂದ್ರ ವರ್ಮ ಅವರನ್ನು ಹೆದರಿಸಿ ಒಂದು ರೂಮ್ ನಲ್ಲಿ ಕೂಡಿ ಹಾಕಿದ್ದಾರೆ. ನಂತರ ಮನೆಯಲ್ಲಿರುವ 1.5 ಲಕ್ಷ ಹಣ ಹಾಗೂ 4 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣವನ್ನು ದೋಚಿದ್ದಾರೆ.

ಕಳ್ಳರು ಹಣವನ್ನು ದೋಚಿಕೊಂಡು ಪರಾರಿಯಾಗುವುದಕ್ಕೂ ಮೊದಲು ಸುರೇಂದ್ರ ವರ್ಮ ದಂಪತಿಗಳ ಕಾಲಿಗೆ ನಮಸ್ಕರಿಸಿ ಆಶೀರ್ವಾದವನ್ನೂ ಕೇಳಿದ್ದಾರೆ. ಜೊತೆಗೆ ತಾವು ಅನಿವಾರ್ಯ ಕಾರಣಕ್ಕಾಗಿ ಇಂಥ ಕೆಲಸ ಮಾಡುತ್ತಿದ್ದು, 6 ತಿಂಗಳಲ್ಲಿ ದೋಚಿದ ಹಣ ಹಾಗೂ ಆಭರಣಗಳನ್ನು ಹಿಂತಿರುಗಿಸುವುದಾಗಿಯೂ ಹೇಳಿದ್ದಾರೆ. ಇದರಿಂದ ವರ್ಮ ದಂಪತಿಗಳಿಗೆ ತುಂಬಾನೇ ಆಶ್ಚರ್ಯವಾಗಿದೆ. ಇದಕ್ಕಿಂತ ಆಶ್ಚರ್ಯದ ಸಂಗತಿಯೆಂದರೆ ಮನೆ ಖರ್ಚಿಗೆ ಎಂದು 500 ರೂಪಾಯಿಗಳನ್ನು ವರ್ಮ ಅವರಿಗೆ ಕೊಟ್ಟು ಹೋಗಿದ್ದಾರೆ. ಇನ್ನು ವರ್ಮ ದಂಪತಿಗಳು ಪೋಲಿಸರಿಗೆ ದೂರು ನೀಡಿದ್ದು, ಕಳ್ಳರು ಮಾಸ್ಕ್ ಧರಿಸಿದ್ದರಿಂದ ಯಾರು ಎಂದು ಕಂಡುಹಿಡಿಯಲು ತನಿಖೆ ಮುಂದುವರೆದಿದೆ.