ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮುಂದಿನ ದಿನಗಳಲ್ಲಿ ಏರಲಿದೆ ಸಿನೆಮಾಗಳ ಕಾವು, ನೇರ ಹಣಾಹಣಿ ಮಾಡಲಿರುವ ಟಾಪ್ ನಂತರ ಚಿತ್ರಗಳು ಯಾವ್ಯಾವು ಗೊತ್ತೇ??

5

ನಮಸ್ಕಾರ ಸ್ನೇಹಿತರೇ ಈ ಬಾರಿಯ ಲಾಕ್ಡೌನ್ ನಿಂದಾಗಿ ಎಷ್ಟೋ ಭಾರತೀಯ ಚಿತ್ರಗಳು ಬಿಡುಗಡೆಯಾಗಬೇಕಿದ್ದು ಅರ್ಧದಲ್ಲೇ ನಿಂತು ಪ್ರೇಕ್ಷಕರಿಗೆ ನಿರಾಸೆ ಉಂಟು ಮಾಡಿತ್ತು. ಹೀಗಾಗಿ ಪರಿಸ್ಥಿತಿ ತಿಳಿಗೊಂಡ ಮೇಲೆ ಚಿತ್ರಗಳ ಬಿಡುಗಡೆಯ ಮಹಾಪೂರವೇ ಹರಿದುಬರಲಿದೆ. ಹೌದು ಸ್ನೇಹಿತರೆ ಈಗಾಗಲೇ ಹಲವಾರು ಚಿತ್ರಗಳು ಬಿಡುಗಡೆಗೆ ನಿಂತಿದ್ದು ಮುಂದಿನ ದಿನಗಳಲ್ಲಿ ಕ್ಲಾಷ್ ಉಂಟಾಗುವುದು ಗ್ಯಾರಂಟಿ. ಇನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ದಿನಾಂಕ ಕ್ಲಾಷ್ ಆಗಬಲ್ಲ ಅಂತಹ ಚಿತ್ರಗಳು ಯಾವುವು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ.

ಮೊದಲಿಗೆ ಪ್ಯಾನ್ ಇಂಡಿಯಾ ಚಿತ್ರವಾಗಿರುವ ಕೆಜಿಎಫ್ ಚಾಪ್ಟರ್ 2. ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಗಿದಿದ್ದು ಬಿಡುಗಡೆಗೆ ಸಂಪೂರ್ಣವಾಗಿ ಸಿದ್ಧವಾಗಿದೆ. ಇನ್ನು ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಫ್ಯಾನ್ ವರ್ಲ್ಡ್ ಚಿತ್ರವಾಗಿ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇದರ ಜೊತೆಗೆ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಕಬ್ಜಾ ಚಿತ್ರ ಕೂಡ. ಇನ್ನು ಇದರ ಚಿತ್ರೀಕರಣ ಇನ್ನು ಕಂಪ್ಲೀಟ್ ಆಗಿಲ್ಲ. ನಿನ್ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಕೂಡ ಬಿಡುಗಡೆಗೆ ಸಿದ್ಧವಾಗಿದ್ದು,

ಈ ಚಿತ್ರದ ಬಿಡುಗಡೆ ದಿನಾಂಕ ಕೂಡ ಹೇಳಿರುವ ಚಿತ್ರಗಳ ಆಸುಪಾಸಿನಲ್ಲಿ ಬಿಡುಗಡೆಯಾಗ ಬಹುದಾದ ಸಾಧ್ಯತೆ ಇದೆ. ಇನ್ನು ಇದು ಮಾತ್ರವಲ್ಲದೆ ಬುದ್ಧಿವಂತ 2 ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಾಳಿಪಟ 2 ಕಿಚ್ಚ ಸುದೀಪ್ ರವರ ಕೋಟಿಗೊಬ್ಬ 3 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ ಜೇಮ್ಸ್. ಹೀಗೆ ಹಲವಾರು ಕನ್ನಡ ಚಿತ್ರಗಳು ಇದೇ ನವೆಂಬರ್ ಹಾಗೂ ಡಿಸೆಂಬರ್ ಒಳಗಾಗಿ ಬಿಡುಗಡೆಯಾಗುವ ಎಲ್ಲ ಲಕ್ಷಣಗಳು ಕಾಣುತ್ತಿದ್ದು ಒಂದು ವೇಳೆ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿಗೆ ಬಿಡುಗಡೆಯಾಗವುದಾದರೆ ಖಂಡಿತವಾಗಿಯೂ ಬಾಕ್ಸಾಫೀಸ್ ಕಲೆಕ್ಷನ್ ವಿಚಾರದಲ್ಲಿ ನಷ್ಟವಾಗುತ್ತದೆ ಹಾಗಾಗಿ ನಿರ್ಮಾಪಕರು ಪರಸ್ಪರ ಮಾತಾಡಿಕೊಂಡು ಚಿತ್ರಗಳನ್ನು ಬಿಡುಗಡೆ ಮಾಡಬೇಕು.