ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನಾಂಗ ಸಂಸ್ಕಾರಯುತ ದಾರಿತಪ್ಪುತ್ತಿದ್ದಾರೆ ಎಂಬ ಮಾತುಗಳು ಹೆಚ್ಚಾಗುತ್ತಿದ್ದಾವೆ. ಹೌದು ಸ್ನೇಹಿತರ ಚಿಕ್ಕಚಿಕ್ಕ ಮಾತುಗಳಿಗೂ ಕೂಡ ಪೋಷಕರ ವಿರುದ್ಧ ಹೋಗುತ್ತಾರೆ ಇಂದಿನ ಯುವಜನತೆ. ಹೀಗಾಗಿ ಪೋಷಕರು ಹಾಗೂ ಮಕ್ಕಳ ನಡುವಿನ ಬಾಂಧವ್ಯ ಸಾಕಷ್ಟು ಯಾಂತ್ರಿಕವಾಗಿ ಹೋಗಿಬಿಟ್ಟಿದೆ. ಇದೇ ತರ ಒಂದು ವಿಚಾರವನ್ನು ಹೇಳುವುದಾದರೆ ಅನುಷ 19 ವರ್ಷದ ಹುಡುಗಿ ಇತ್ತೀಚಿಗಷ್ಟೇ ತನ್ನ ಬದುಕನ್ನು ಇಲ್ಲವಾಗಿಸಿಕೊಂಡಂತಹ ಸುದ್ದಿ ಎಲ್ಲರಿಗೂ ಕೂಡ ತಲ್ಲಣಗೊಳಿಸುತ್ತದೆ. ಹೌದು ಸ್ನೇಹಿತರೆ ಅನುಷಾ ಎಂಬಾಕೆ ಕೇವಲ 10ನೇ ತರಗತಿಯನ್ನಷ್ಟೇ ಓದಿರುತ್ತಾರೆ ಅದರಲ್ಲೂ ಕೂಡ ಅನುತ್ತೀರ್ಣರಾಗಿರುತ್ತಾರೆ.
ಇನ್ನೂ ಅನುಷಾ ರವರು ನರ್ಸಿಂಗ್ನಲ್ಲಿ ಅಧ್ಯಯನ ಮಾಡುತ್ತಿರುತ್ತಾರೆ. ಇನ್ನೊಮ್ಮೆ ಅನುಷಾ ಅವರ ಪೋಷಕರು ಅನುಷಾ ರವರಿಗೆ ಒಮ್ಮೆ ಕರೆ ಮಾಡಿ ನಿನಗೆ ಗಂಡು ನೋಡುವ ಕಾರ್ಯಕ್ರಮವಿದೆ ದಯವಿಟ್ಟು ಬೇಗ ಬಂದುಬಿಡು ಎಂದು ಹೇಳುತ್ತಾರೆ. ಅದಾದನಂತರ ಅನುಷರವರು ಫೋನ್ ಸ್ವಿಚ್ ಆಫ್ ಮಾಡಿಕೊಂಡು ಕಾಣೆಯಾಗಿ ಬಿಡುತ್ತಾರೆ. ಕೆಲ ಸಮಯಗಳ ಕಾದ ನಂತರ ಅನುಷಾ ರವರ ಪೋಷಕರು ಪೊಲೀಸ್ ಕಂಪ್ಲೇಂಟ್ ಮಾಡುತ್ತಾರೆ. ನಂತರ 14 ದಿನಗಳ ನಂತರ ಪೊಲೀಸರು ಅನುಷಾ ರವರನ್ನು ಕಂಡುಹಿಡಿಯಲು ಯಶಸ್ವಿಯಾಗುತ್ತಾರೆ ಹಾಗೂ ಇನ್ನು ಮುಂದೆ ಹೀಗೆ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಕಾಣೆಯಾಗುವುದು ನಿಲ್ಲಿಸು ಎನ್ನುವುದಾಗಿ ಎಚ್ಚರಿಕೆಯನ್ನು ಕೂಡ ಕೊಡುತ್ತಾರೆ.
ಮನೆಗೆ ಬಂದ ಮಾರನೇ ದಿನವೇ ಅನುಷಾ ರವರ ಪೋಷಕರು ನಾಳೆ ರೆಡಿಯಾಗಿರು ಗಂಡಿನ ಕಡೆಯವರು ಬರುತ್ತಿದ್ದಾರೆ ಎಂದು ಹೇಳುತ್ತಾರೆ. ಆಗ ಅನುಷಾ ಇಲ್ಲ ನನಗೆ ನೀವು ತೋರಿಸುವ ಯಾವ ಹುಡುಗನೂ ಕೂಡ ಇಷ್ಟವಿಲ್ಲ ನಾನು ಈಗಾಗಲೇ ಒಬ್ಬರನ್ನು ಪ್ರೀತಿಸುತ್ತಿದ್ದೇನೆ ಎಂಬುದಾಗಿ ಹೇಳುತ್ತಾರೆ. ಅದಕ್ಕೆ ಮನೆಯವರು ನಿರಾಕರಿಸಿ ವಿರೋಧಿಸುತ್ತಾರೆ. ಆದರೆ ಮಾರನೇ ದಿನ ನೋಡಿದರೆ ಮಗಳು ಅನುಷಾ ಸ್ನಾನಕ್ಕೆಂದು ಹೋದವಳು ತಮ್ಮ ದುಪ್ಪಟ್ಟದಲ್ಲಿ ಬಿಗಿದು ಜೀವವನ್ನು ಇಲ್ಲವಾಗಿಸಿ ಬಿಟ್ಟು ಕೊಂಡಿರುತ್ತಾರೆ. ಇದನ್ನು ನೋಡಿದ ಪೋಷಕರಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗುತ್ತದೆ. ನೋಡಿದ್ರಲ್ಲ ಸ್ನೇಹಿತರೆ ವರ್ಷಾನುಗಟ್ಟಲೆ ಸಾಕಿದಂತಹ ಪೋಷಕರಿಗಿಂತ ನೆನ್ನೆ ಮೊನ್ನೆ ಬಂದ ಪ್ರಿಯಕರನೇ ಇವರಿಗೆ ಜಾಸ್ತಿ ಆಗಿಬಿಟ್ಟಿರುತ್ತದೆ. ಇಂತಹ ಜಗತ್ತು ಎಷ್ಟರಮಟ್ಟಿಗೆ ಸರಿ ಎಂಬುದು ನೀವೇ ತಿಳಿಸಿ ಸ್ನೇಹಿತರೆ.