9 ಕಿಲೋ ಮೀಟರ್ ದೂರದ ಹೋಟೆಲ್ ನಲ್ಲಿ ಊಟವನ್ನು ಸೈಕಲ್ ನಲ್ಲಿ ತಡವಾಗಿ ತಂದಿದಕ್ಕೆ ಡೆಲಿವರಿ ಬಾಯ್ ಗೆ ಆತ ಮಾಡಿದ್ದೇನು ಗೊತ್ತಾ??
9 ಕಿಲೋ ಮೀಟರ್ ದೂರದ ಹೋಟೆಲ್ ನಲ್ಲಿ ಊಟವನ್ನು ಸೈಕಲ್ ನಲ್ಲಿ ತಡವಾಗಿ ತಂದಿದಕ್ಕೆ ಡೆಲಿವರಿ ಬಾಯ್ ಗೆ ಆತ ಮಾಡಿದ್ದೇನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಈ ಸ್ವಾರ್ಥವೇ ತುಂಬಿರುವ ಬ್ಯುಸಿ ದುನಿಯಾದಲ್ಲಿ ಬೇರೊಬ್ಬರಿಗೆ ಕಷ್ಟ ಇದ್ದರೆ ಸಹಾಯ ಮಾಡುವ ನಿಸ್ವಾರ್ಥ ಮನಸ್ಸಿನ ಜನ ಸಿಕ್ಕುವುದು ತುಂಬಾನೇ ಅಪರೂಪ. ಆದರೆ ಇಂದು ನಾವು ಹೇಳಹೊರಟಿರುವ ಕಥೆಯಲ್ಲಿ ಅತ್ಯಂತ ವಿರಳ ನಿಸ್ವಾರ್ಥ ಮನಸ್ಸಿನ ವ್ಯಕ್ತಿಯೊಬ್ಬರ ಕಥೆ ಹಾಗೂ ಒಬ್ಬ ಪರಿಶ್ರಮಿ ಹುಡುಗನ ಕಥೆ ಹೇಳಲು ಹೊರಟಿದ್ದೇವೆ.
ನಾವು ಹೇಳ ಹೊರಟಿರುವ ಕಥೆ ಇಲ್ಲೇ ನಮ್ಮ ಪಕ್ಕದ ಹೈದರಾಬಾದ್ ನಲ್ಲಿ ನಡೆದಂತಹ ಘಟನೆ. ಇದೆ ಲಾಕ್ ಡೌನ್ ಇದ್ದ ಕಾರಣ ಎಂಜಿನಿಯರಿಂಗ್ ಕಲಿಯುತ್ತಿದ್ದಂತಹ ಅಖಿಲ್ ಅಹಮದ್ ಎಂಬ ಬಡ ಕುಟುಂಬದ ಹುಡುಗ ತನ್ನ ಕುಟುಂಬದ ನಿರ್ವಹಣೆ ಹಾಗೂ ತನ್ನ ವಿದ್ಯಾಭ್ಯಾಸದ ಕರ್ಚಿಗೆ ಜೋಮೆಟೊ ಸಂಸ್ಥೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತಾನೆ. ಆದರೆ ಜೋಮೇಟೋ ಸಂಸ್ಥೆಯಲ್ಲಿ ಕೆಲಸ ಮಾಡಲು ಖಂಡಿತವಾಗಿಯೂ ದ್ವಿಚಕ್ರವಾಹನದ ಅಗತ್ಯತೆ ಇರುತ್ತದೆ. ಆದರೆ ಅಖಿಲ್ ಅಹಮದ್ ಬಳಿ ಇದ್ದಿದ್ದು ಕೇವಲ ಸೈಕಲ್ ಮಾತ್ರ. ಆದರೂ ಕೂಡ ಆತ ಸೈಕಲ್ನಲ್ಲಿ ನಿಗದಿತ ಸಮಯದಲ್ಲಿ ಆಹಾರ ಡೆಲಿವರಿ ಮಾಡುತ್ತಿದ್ದ.
ಇನ್ನು ಹೀಗೆ ಡೆಲಿವರಿ ಮಾಡುತ್ತಿದ್ದಾಗ ಮುಕೇಶ್ ಎಂಬುವವರಿಂದ ಒಂದು ಆಹಾರದ ಆರ್ಡರ್ ಬರುತ್ತದೆ. ಅದನ್ನು 9 ಕಿಲೋಮೀಟರ್ ದೂರವನ್ನು ಕೇವಲ 20 ನಿಮಿಷಗಳಲ್ಲಿ ಕ್ರಮಿಸಿ ಮುಕೇಶ್ ರವರಿಗೆ ಅವರ ಆಹಾರವನ್ನು ನೀಡುತ್ತಾರೆ. ಮುಕೇಶ್ ರವರು ಶಕೀಲ್ ಅಹ್ಮದ್ ಸೈಕಲ್ ನಲ್ಲಿ ಕೇವಲ 20 ನಿಮಿಷಗಳಲ್ಲಿ 9 ಕಿಲೋಮೀಟರ್ ದೂರವನ್ನು ಕ್ರಮಿಸಿ ಬಂದಿರುವುದು ತುಂಬಾನೇ ಆಶ್ಚರ್ಯ ಮೂಡಿಸುತ್ತದೆ. ಹೀಗಾಗಿ ಅವರ ಪರಿಸ್ಥಿತಿಯನ್ನು ಕೇಳಿದಾಗ ಅಖಿಲ ಅಹ್ಮದ್ ಅವರು ತಮ್ಮ ಮನೆಯಲ್ಲಿ ಇದ್ದಂತಹ ಬಡತನದ ಸ್ಥಿತಿಯನ್ನು ಹೇಳಿಕೊಳ್ಳುತ್ತಾರೆ.
ಆಗ ಮುಖೇಶ್ ರವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಖಿಲಾ ಮಧುರ್ ಅವರ ಕುರಿತಂತೆ ಹಾಗೂ ಅವರ ಪರಿಸ್ಥಿತಿಯ ಕುರಿತಂತೆ ಬರೆದು ಫಂಡ್ ರೈಸಿಂಗ್ ಕಾರ್ಯಕ್ರಮವನ್ನು ಪ್ರಾರಂಭ ಮಾಡುತ್ತಾರೆ. ಅಖಿಲ್ ಅಹಮದ್ ರವರ ಪರಿಸ್ಥಿತಿಯನ್ನು ನೋಡಿದಂತಹ ಸಾಮಾಜಿಕ ಜಾಲತಾಣಗಳ ಜನರು ತಮ್ಮ ಕೈಲಾದಷ್ಟು ಫಂಡ್ ರೈಸಿಂಗ್ ಗೆ ದೇಣಿಗೆ ನೀಡುವ ಮೂಲಕ ಸಹಾಯ ಮಾಡುತ್ತಾರೆ.
ಮುಕೇಶ್ ರವರ ಪ್ರಕಾರ rs.60000 ಸಿಕ್ಕಬಹುದು ಅದರಲ್ಲಿ ಒಂದು ದ್ವಿಚಕ್ರವಾಹನವನ್ನು ಅಹ್ಮದ್ ರವರಿಗೆ ಕೊಡಿಸುವ ಚಿಂತನೆಯಲ್ಲಿದ್ದಾರೆ. ಆದರೆ ಅಲ್ಲಿ ನಿರೀಕ್ಷೆಗೂ ಮೀರಿ 73 ಸಾವಿರ ರೂಪಾಯಿಗಳ ದೇಣಿಗೆ ಒಟ್ಟಾಗುತ್ತದೆ. ಮುಕೇಶ್ ರವರು ಅದರಲ್ಲಿ 65000 ರೂಪಾಯಿಗಳಲ್ಲಿ ಅಹಮದ್ ರವರಿಗೆ ದ್ವಿಚಕ್ರವಾಹನವನ್ನು ಕೊಡಿಸುತ್ತಾರೆ.
ಮತ್ತೆ ಉಳಿದ ಹಣವನ್ನು ಅಖಿಲ್ ಅಹಮದ್ ರವರ ವಿದ್ಯಾಭ್ಯಾಸಕ್ಕಾಗಿ ಅವರಿಗೆ ನೀಡುತ್ತಾರೆ. ನೋಡಿದ್ರಲ್ಲ ಸ್ನೇಹಿತರೆ ಸಾಮಾಜಿಕ ಜಾಲತಾಣಗಳು ಕೇವಲ ಕೆಟ್ಟ ಪ್ರಭಾವವನ್ನು ಮಾತ್ರವಲ್ಲದೆ ಇಂತಹ ಒಳ್ಳೆಯ ಕೆಲಸಕ್ಕೂ ಕೂಡ ಉಪಯೋಗ ಆಗುತ್ತದೆ ಎಂಬುದು ಈ ಘಟನೆಯ ಮೂಲಕ ನಾವು ತಿಳಿದುಕೊಳ್ಳಬಹುದಾಗಿದೆ. ಇನ್ನು ಈಗ ಅಖಿಲ್ ಅಹಮದ್ ರವರಿಗೆ ಜೋಮೇಟೊ ಕೆಲಸವನ್ನು ವೇಗವಾಗಿ ಮಾಡಲು ಮುಕೇಶ್ ರವರ ಮುಖಾಂತರ ಸಹಾಯ ಮಾಡಿದ ಜನರಿಂದಾಗಿ ಬಂದಂತಹ ದ್ವಿಚಕ್ರವಾಹನ ಸಹಾಯಕವಾಗಿದೆ. ಇದಕ್ಕಾಗಿ ನಾವು ಮೊದಲು ಮುಕೇಶ್ ಅವರಿಗೆ ಧನ್ಯವಾದಗಳನ್ನು ಹೇಳಲೇಬೇಕು.