ಚಿನ್ನದ ಹುಡುಗ ನೀರಜ್ ಚೋಪ್ರಾ ನಿಂದ ಕನ್ನಡದ ಖ್ಯಾತ ನಟನಿಗೆ ಬಂತು ವಿಶೇಷವಾದ ಸಂದೇಶ ಏನು ಗೊತ್ತಾ??
ಚಿನ್ನದ ಹುಡುಗ ನೀರಜ್ ಚೋಪ್ರಾ ನಿಂದ ಕನ್ನಡದ ಖ್ಯಾತ ನಟನಿಗೆ ಬಂತು ವಿಶೇಷವಾದ ಸಂದೇಶ ಏನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಈ ಬಾರಿ ಕ್ರೀಡಾ ಕ್ಷೇತ್ರದಿಂದ ಭಾರತಕ್ಕೆ ಸಾಕಷ್ಟು ಸಂತೋಷದ ವಿಷಯಗಳು ಲಭ್ಯವಾಗಿವೆ ಎಂಬುದು ನಿಮಗೆಲ್ಲ ಗೊತ್ತೇ ಇದೆ. ಹೌದು ಸ್ನೇಹಿತರೆ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಹಲವಾರು ಕ್ರೀಡಾಪಟುಗಳು ಭಾರತಕ್ಕೆ ಪದಕಗಳ ಸಿಹಿಯನ್ನು ಉಣಬಡಿಸಿದ್ದಾರೆ. ಅದರಲ್ಲಿ ಮುಖ್ಯವಾದವರು ನೀರಜ್ ಚೋಪ್ರಾ. ಹೌದು ಸ್ನೇಹಿತರೆ ನೀರಜ್ ಚೋಪ್ರಾ ರವರು ಜಾವೆಲಿನ್ ತ್ರೋ ನಲ್ಲಿ ಟೋಕ್ಯೋ ಒಲಂಪಿಕ್ಸ್ 2020 ರಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಭಾರತದ ಪತಾಕೆ ವಿಶ್ವದಾದ್ಯಂತ ಹರಡುವಂತೆ ಮಾಡಿದ್ದಾರೆ.
ಅಥ್ಲೆಟಿಕ್ಸ್ ನಲ್ಲಿ ಭಾರತ ಪದಕವೇ ಇಲ್ಲದಂತಹ ಸಂದರ್ಭದಲ್ಲಿ ಇಂತಹ ಮಹತ್ತರ ಸಾಧನೆ ಮಾಡಿರುವುದು ನೀರಜ್ ಚೋಪ್ರಾ ರವರ ವಿಶೇಷತೆಗೆ ಕಾರಣವಾಗಿದೆ. ಇನ್ನು ಈಗ ನೀರಜ್ ಚೋಪ್ರಾ ರವರ ಮತ್ತೊಮ್ಮೆ ಸುದ್ದಿಗೆ ಕಾರಣರಾಗಿದ್ದಾರೆ. ಹೌದು ಸ್ನೇಹಿತರೆ ನೀರಜ್ ಚೋಪ್ರಾ ಅವರು ಕನ್ನಡದ ಖ್ಯಾತ ನಟರೊಬ್ಬರಿಗೆ ಶುಭಾಶಯಗಳನ್ನು ಕೋರುವ ಮೂಲಕ ಮತ್ತೊಮ್ಮೆ ಈಗ ಸುದ್ದಿಯಲ್ಲಿದ್ದಾರೆ.
ಹೌದು ಸ್ನೇಹಿತರೇ ನಾಳೆ ಸಪ್ಟೆಂಬರ್2. ಸೆಪ್ಟಂಬರ್ 2 ಎಂದಾಗ ನಮಗೆ ನೆನಪು ಬರುವುದು ಕನ್ನಡ ಚಿತ್ರರಂಗದ ಖ್ಯಾತ ನಟನಾಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಜನ್ಮದಿನಾಚರಣೆ. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತದ ಚಿತ್ರರಂಗ ದಾದ್ಯಂತ ಜನಪ್ರಿಯತೆ ಗಳಿಸಿಕೊಂಡಿರುವ ನಟ ಎಂದರೆ ಅದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಇನ್ನು ನಾಳೆ ಕಿಚ್ಚ ಸುದೀಪ್ ರವರ ಜನ್ಮ ದಿನ ಇರೋ ಕಾರಣ ನೀರಜ್ ಚೋಪ್ರಾ ರವರು ಅವರಿಗೆ ವಿಡಿಯೋ ಮೂಲಕ ಶುಭಾಶಯವನ್ನು ಮುಂಚಿತವಾಗಿಯೇ ಕೋರಿದ್ದಾರೆ. ಅವರ ಮುಂಬರುವ ಚಿತ್ರ ವಿಕ್ರಾಂತ್ ರೋಣಕ್ಕೆ ಕೂಡ ಶುಭಾಶಯಗಳನ್ನು ಕೋರಿದ್ದಾರೆ. ಚಿನ್ನದ ಹುಡುಗನಿಂದ ಕನ್ನಡ ಚಿತ್ರರಂಗದ ಮಾಣಿಕ್ಯ ನಿಗೆ ಶುಭಾಶಯದ ವಿಡಿಯೋ ಈಗ ಹೊರಬಂದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯನ್ನು ಮಾಡುತ್ತಿದೆ.