ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಇಷ್ಟ ಪಟ್ಟ ಹುಡುಗನನ್ನೇ ಮದುವೆಯಾಗುವುದು ಎಂದ ಮಗಳು, ಹೊಲಕ್ಕೆ ಊಟ ತೆಗೆದುಕೊಂಡು ಹೋದಾಗ ತಂದೆ ಮಾಡಿದ್ದೇನು ಗೊತ್ತೇ??

7

ನಮಸ್ಕಾರ ಸ್ನೇಹಿತರೇ ನಮ್ಮ ದೇಶದಲ್ಲಿ ಇಂದಿಗೂ ಕೂಡ ಬಹುತೇಕ ಅಂತರ್ಜಾತಿಯ ವಿವಾಹವನ್ನು ಯಾವುದೇ ಮನೆಯವರು ಕೂಡ ಒಪ್ಪುವುದಿಲ್ಲ. ಅದರಲ್ಲೂ ಯಾರಾದರೂ ಪ್ರೀತಿಸಿ ಮದುವೆಯಾಗುತ್ತಾರೆ ಎಂದರೆ ಖಂಡಿತವಾಗಿ ಏನಾದರೊಂದು ಗಲಾಟೆ ಇದ್ದೇ ಇರುತ್ತದೆ. ಇಂದು ನಾವು ಹೇಳಹೊರಟಿರುವ ವಿಷಯದಲ್ಲಿ ಕೂಡ ಇದೇ ರೀತಿಯ ವಿಚಾರಗಳು ಅಡಗಿವೆ. ಹೌದು ಸ್ನೇಹಿತರೆ ಈ ಘಟನೆ ನಡೆದಿರುವುದು ಮೈಸೂರಿನ ಪಿರಿಯಾಪಟ್ಟಣದ ಗೊಲ್ಲರಹಟ್ಟಿ ಎಂಬ ಊರಿನಲ್ಲಿ. ಜಯರಾಮ್ ಎನ್ನುವವರಿಗೆ ಗಾಯತ್ರಿ ಎಂಬ ಮಗಳಿರುತ್ತಾಳೆ.

ಇನ್ನು ಇವರು ಕೂಡ ಕೆಲಸ ಮಾಡಿಕೊಂಡಿರುತ್ತಾರೆ. ಆದರೆ ಇವರ ಮನೆಯಲ್ಲಿ ಒಂದು ತಿಂಗಳಿಂದ ಒಂದು ವಿಷಯದ ಕುರಿತಂತೆ ಸಾಕಷ್ಟು ಗಲಾಟೆ ನಡೆಯುತ್ತಿತ್ತು. ಅದೇನೆಂದರೆ ಗಾಯತ್ರಿ ಅವರು ಬೇರೆ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದು ಅವನನ್ನು ಬಿಟ್ಟು ನಾನು ಬೇರೆ ಯಾರನ್ನೂ ಕೂಡ ಮದುವೆಯಾಗುವುದಿಲ್ಲ ಎಂಬುದಾಗಿ ಮನೆಯಲ್ಲಿ ಹೇಳಿದ್ದರು. ಇದಕ್ಕಾಗಿ ಮನೆಯವರು ಮಗಳಿಗೆ ಬುದ್ಧಿಯನ್ನು ಹೇಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದರು. ಆದರೆ ಮಗಳು ಗಾಯತ್ರಿ ಅವನನ್ನೇ ಮದುವೆ ಆಗುವ ದೃಢನಿರ್ಧಾರವನ್ನು ಮಾಡಿದ್ದಳು.

ಒಮ್ಮೆ ತಂದೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮಗಳಾದ ಗಾಯತ್ರಿ ತಂದೆಗೆ ಊಟ ತೆಗೆದುಕೊಂಡು ಹೋದಾಗ ಏನು ಮಾಡಿದರು ಗೊತ್ತ. ಹೌದು ಸ್ನೇಹಿತರೆ ತಂದೆಗೆ ಊಟದ ಗೆದ್ದುಕೊಂಡು ಹೋಗಿ ಕೊಟ್ಟಾಗ ತಂದೆ ಮತ್ತೊಮ್ಮೆ ಮನವೊಲಿಸಲು ಪ್ರಾರಂಭಿಸಿದ್ದಾರೆ. ಮಗಳೇ ನಿನ್ನ ಹಠವನ್ನು ಬಿಟ್ಟು ಬಿಡು ಇದರಿಂದ ನಮ್ಮ ಮನೆಯ ಮರ್ಯಾದೆ ಹೋಗುತ್ತದೆ ಎಂಬುದಾಗಿ ಕೂಡ ಬುದ್ಧಿ ಹೇಳುತ್ತಾರೆ. ಆದರೆ ಮಗಳು ಗಾಯತ್ರಿ ನಾನು ಮದುವೆಯಾಗುವುದಾದರೆ ಅವನನ್ನೇ ಮದುವೆಯಾಗುವುದು ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ತಮ್ಮ ದೃಢ ನಿರ್ಧಾರವನ್ನು ತಿಳಿಸುತ್ತಾರೆ. ಇದರಿಂದ ಮತ್ತಷ್ಟು ಪಿತ್ತ ನೆತ್ತಿಗೆ ಏರಿಸಿಕೊಂಡ ತಂದೆ ಮಗಳನ್ನು ಅಲ್ಲೇ ಇದ್ದ ಮಚ್ಚಿನಿಂದ ಮುಗಿಸಿ ಬಿಡುತ್ತಾರೆ. ಮಾತ್ರವಲ್ಲದೆ ಠಾಣೆಗೆ ಕೂಡ ಹೋಗಿ ನಡೆದ ಘಟನೆಯನ್ನು ವಿವರಿಸಿ ತಪ್ಪನ್ನು ಒಪ್ಪಿಕೊಳ್ಳುತ್ತಾರೆ.