ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಗ್ ಬಾಸ್ ಸೋತರೇನಂತೆ ಅರವಿಂದ್ ರವರಿಗೆ ಕುಲಾಯಿಸಿದ ಅದೃಷ್ಟ, ಕೊನೆಗೂ ಅರವಿಂದ್ ಕನಸು ನನಸು, ಏನು ಗೊತ್ತೇ??

2

ನಮಸ್ಕಾರ ಸ್ನೇಹಿತರೇ ಒಂದು ಶೋ ನಲ್ಲಿ ಕಾಣಿಸಿಕೊಂಡರೆ ಸಾಕು ಪರಿಚಯ ಇಲ್ಲದ ಯಾವುದೇ ಮುಖ ಪರಿಚಯವಾಗಿಬಿಡತ್ತೆ. ಇದು ಬಿಗ್ ಬಾಸ್ ವೇದಿಕೆಯಲ್ಲಿ ಅಕ್ಷರಶಃ ಸತ್ಯವಾಗುತ್ತೆ. ಇಲ್ಲಿ ಭಾಗವಹಿಸುವ ಸ್ಪರ್ಧಿಗಳೆಲ್ಲರೂ ಸಾಮಾನ್ಯ ಜನರಿಗೆ ಅಷ್ಟಾಗಿ ಗೊತ್ತಿರುವುದಿಲ್ಲ. ಕೆಲವು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಹೆಸರು ಮಾಡಿರುವವರನ್ನು ಬಿಟ್ಟರೆ ಇನ್ನು ಹಲವು ಸ್ಪರ್ಧಿಗಳು ಹೆಚ್ಚು ಫೇಮಸ್ ಆಗೋದು ಬಿಗ್ ಬಾಸ್ ಮನೆಗೆ ಬಂದ ನಂತರವೇ.

ಅಂಥವರಲ್ಲಿ ಬಿಗ್ ಬಾಸ್ ಸೀನಸ್ 8 ರ ರನ್ನರ್ ಅಪ್ ಆದ ಸ್ಪರ್ಧಿ ಅರವಿಂದ ಕೆ ಪಿ. ಹೌದು ಸ್ನೇಹಿತರೆ, ಉಡುಪಿ ಮೂಲದವರಾದ ಅರವಿಂದ ಕೆ ಪಿ ಅಂತರಾಷ್ಟ್ರೀಯ ಮಟ್ಟದ ಬೈಕರ್. ಆದರೆ ಇವರು ಕನ್ನಡಿಗರಿಗೆ ಅಷ್ಟಾಗಿ ಪರಿಚಯವಿದ್ದ ಮುಖವಲ್ಲ. ಕೇವಲ ಮೂರು ನಾಲ್ಕು ತಿಂಗಳ ಹಿಂದೆ ಅರವಿಂದ ಕೆ ಪಿ ಎಂದರೆ ಯಾರು ಎಂದೇ ಗೊತ್ತಿಲ್ಲದ ಜನ ಇಂದು ಅರವಿಂದ ಕೆ ಪಿಯನ್ನು ಎಲ್ಲಿದ್ದರೂ ಗುರುತಿಸುತ್ತಾರೆ, ಅನುಕರಿಸುತ್ತಾರೆ.

ಇದಕ್ಕೆ ಕಾರಣ ಬಿಗ್ ಬಾಸ್ ನಲ್ಲಿ ಅವರು ಸ್ಪರ್ಧಿಯಾಗಿ ಬಂದಿದ್ದು. ಅರವಿಂದ ಕೆ ಪಿ ಯವರು ಕೇವಲ ಸ್ಪರ್ಧಿಸಿದ್ದು ಮಾತ್ರವಲ್ಲದೆ ಅತ್ಯುತ್ತಮವಾಗಿ ಟಾಸ್ಕ್ ನಿರ್ವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ಡಾರೆ. ಈ ವರೆಗೆ ಬಿಗ್ ಬಾಸ್ ಮನೆಯಲ್ಲಿ ಯಾರೂ ಕೂಡ ಇವರಷ್ಟು ಚೆನ್ನಾಗಿ ಟಾಸ್ಕ್ ಮಾಡಿರಲಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಅರವಿಂದ ಕೆ ಪಿ ಅವರ ಫ್ಯಾನ್ಸ್ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮೊದಲು 40 ಸಾವಿರ ಫಾಲೋವರ್ಸ್ ಇದ್ದದ್ದು ಇದೀಗ 3 ಲಕ್ಷ ದಾಟಿದೆ ಎಂದರೆ ಸುಮ್ಮನೆಯೇ?! ಇನ್ನು ಅಭಿಮಾನಿಗಳಿಂದ ಹಾರೈಕೆಗಳು, ಉಡುಗೊರೆಗಳೂ ಕೂಡ ಅರವಿಂದ ಕೆ ಪಿ ಅವರ ಪಾಲಿಗೆ ಒಲ್ಲಿದು ಬಂದಿವೆ.