ಈ ವಾರದ ಟಾಪ್ 10 ಧಾರಾವಾಹಿಗಳು ಯಾವವು ಗೊತ್ತಾ? ನಿಮ್ಮ ಫೆವರೇಟ್ ಧಾರಾವಾಹಿಗೆ ಎಷ್ಟನೇ ಸ್ಥಾನ ಗೊತ್ತಾ??

ನಮಸ್ಕಾರ ಸ್ನೇಹಿತರೇ ಜನರಿಗೆ ಸಾಕಷ್ಟು ಕೆಲಸದ ನಡುವೆಯೂ ಅವರಿಗೆ ಮನೋರಂಜನೆ ನೀಡುವುದು ಯಾವುದೆ? ಅಥವಾ ಮಹಿಳೆಯರಿಗೆ ದಿನವಿಡೀ ಮನೆಯಲ್ಲಿ ಕೆಲಸ ಮಾಡಿಕೊಂಡು ತುಸು ಮನಸ್ಸಿಗೆ ಸಮಾಧಾನ ಕೊಡುವುದು ಯಾವ ವಿಷಯ? ಟಿ ವಿ ಧಾರಾವಾಹಿಗಳು ಅಲ್ವಾ? ಹೌದು ಸ್ನೇಹಿತರೇ ಬೇರೆ ಯಾವುದೇ ಶೋ ಗಳು ಪ್ರಸಾರವಾಗಲಿ ಅದು ಕೆಲವು ಸಮಯದ ವರೆಗೆ ಮಾತ್ರ ಮತ್ತೆ ಮುಗಿಯುತ್ತದೆ. ಆದರೆ ವರ್ಷಾನುಗಟ್ಟಲೇ ಪ್ರಸಾರವಾಗುವುದು ಮೆಗಾ ಸೀರಿಯಲ್ ಗಳು. ಅದನ್ನು ನೋಡುವುದರಲ್ಲಿ ಮಹಿಳೆಯರದ್ದೇ ಸಿಂಹಪಾಲು ಎಂದೇ ಇಟ್ಟುಕೊಳ್ಳಿ. ಇನ್ನು ಸೀರಿಯಲ್ ನಲ್ಲಿ ಕಥೆಗಳು ಜನರಿಗೆ ಇಷ್ಟವಾಗುವ ಹಾಗೆ ನಿರ್ಮಿಸಲಾಗುತ್ತದೆ.

ಜೊತೆಗೆ ಅದರಲ್ಲಿ ಬರುವ ಸಣ್ಣ ಸಣ್ಣ ವಿಷಯಗಳೂ ಕೂಡ ನಮ್ಮ ಮನಸ್ಸಿಗೆ ಹತ್ತಿರವಾಗಿರುತ್ತವೆ. ಆದರೆ ವೀಕ್ಷಣೆಯ ಆಧಾರದ ಮೇಲೆ ಟಿ ಆರ್ ಪಿ ರೇಟ್ ಕೂಡ ವ್ಯತ್ಯಯವಾಗುತ್ತದೆ. ಹಾಗಾದರೆ ಈ ವಾರ ಟಾಪ್ 10 ನಲ್ಲಿ ಇರುವ ಧಾರಾವಾಹಿಗಳು ಯಾವವು ಬನಿ ನೋಡೋಣ.

ಈ ಬಾರಿ ಧಾರಾವಾಹಿಯ 10 ನೇ ಸ್ಥಾನದಲ್ಲಿರುವುದು ಮುದ್ದು ಲಕ್ಷ್ಮಿ ಧಾರಾವಾಹಿ ಇನ್ನು 9 ನೇ ಸ್ಥಾನವನ್ನು ತ್ರಿನಯನಿ ಪಡೆದುಕೊಂಡಿದ್ದರೆ, ಕನ್ನಡದ ಮೆಚ್ಚಿನ ಧಾರಾವಾಹಿ ಕನ್ನಡತಿ 8 ನೇ ಸ್ಥಾನ ಪಡೆದುಕೊಂಡಿರುವುದು ಕೆಲವರಿಗೆ ಬೇಸರದ ವಿಷಯ. ಇನ್ನು 7 ನೇ ಸ್ಥಾನವನ್ನು ಪಡೆದುಕೊಂಡಿರುವ ಧಾರಾವಾಹಿ ಗೀತಾ ಹಾಗೂ 6ರಲ್ಲಿ ನಿಂತಿದೆ ಮಂಗಳ ಗೌರಿ ಮದುವೆ.

ಇನ್ನು ಟಾಪ್ 10 ರಲ್ಲಿ 5ನೇ ಸ್ಥಾನದಲ್ಲಿರುವುದು ಇತ್ತೀಚಿಗೆ ಶುರುವಾದ ಹಿಟ್ಲರ್ ಕಲ್ಯಾಣ. ಇನ್ನು 4 ನೇ ಸ್ಥಾನ ಗಟ್ಟಿ ಮೇಳ ಧಾರಾವಾಹಿ ಪಾಲಾಗಿದೆ. 3ನೇ ಸ್ಥಾನವನ್ನು ನಾಗಿಣಿ 2 ಹಾಗೂ ಪಾರು ಧಾರಾವಾಹಿಗೆ ಸಮವಾಗಿ ಹಂಚಿಕೆಯಾಗಿದೆ. ಇನ್ನು ಸತ್ಯ ಧಾರಾವಾಹಿ ಮತ್ತೆ ಟಾಪ್ ಗೆ ಬಂದಿದ್ದು 2 ನೇ ಸ್ಥಾನದಲ್ಲಿದೆ. ಇನ್ನು ಕನ್ನಡಿಗರ ಮೆಚ್ಚಿನ ಧಾರಾವಾಹಿ ಜೊತೆ ಜೊತೆಯಲಿ ಪುನಃ ಮೊದಲನೇ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Post Author: Ravi Yadav