ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮಿನಿ ಬಿಗ್ ಬಾಸ್ ನಲ್ಲಿ ಅರವಿಂದ್ ಹಾಗೂ ಮಂಜು ರವರ ಮೀರಿಸುವ ಸ್ಪರ್ದಿ, ಯಾರು ಗೊತ್ತೇ?? ಅದ್ಯಾರು ಗೊತ್ತೇ??

6

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಸೀಸನ್ 8 ಕೊನೆಗೊಂಡಿದೆ. ಮಂಜು ಹಾಗೂ ಅರವಿಂದ ಕೆ ಪಿ ಮೊದಲನೆ ಸ್ಥಾನ ಹಾಗೂ ರನ್ನರ್ ಅಪ್ ಸ್ಥಾನವನ್ನು ಹಂಚಿಕೊಂಡು ಮನೆ ಮಾತಾಗಿದ್ದಾರೆ. ಇನ್ನು ಹಲವಾರು ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಇನ್ನಷ್ಟು ವಿಷಯಗಳು ಜನರಿಗೆ ಗೊತ್ತಾಗ್ತಾ ಇವೆ. ಬಿಗ್ ಬಾಸ್ ಅಭಿಮಾನಿಗಳಿಗೆ ಬಿಗ್ ಬಾಸ್ ಶೋ ಮುಗಿತಲ್ಲಾ ಅಂತಾ ಬೇಜಾರಾಗಿದ್ರೆ ಆ ಬೇಜಾರು ಹೋಗಿಸೋಕೆ ವಾಹಿಸಿಯವರು ಶುರು ಮಾಡೇ ಬಿಟ್ರು ಬಿಗ್ ಬಾಸ್ ಮಿನಿ ಸೀಸನ್.

ಹೌದು ಸ್ನೇಹಿತರೆ, ಬಿಗ್ ಬಾಸ್ ಮಿನಿ ಸೀಸನ್ ಶುರುವಾದಾಗ ಏನಪ್ಪಾ ಇಷ್ಟೆಲ್ಲಾ ಜನ ಯಾರು ನೋಡ್ತಾರೆ ಎಂದುಕೊಂಡ್ರೂ ಕೂಡ ಈಗಿಗ ಈ ಸೀಸನ್ ನನ್ನು ಜನ ಮೆಚ್ಚಿಕೊಳ್ಳೊಕೆ ಶುರು ಮಾಡಿದ್ದಾರೆ. ಯಾಕೆಂದ್ರೆ ಇದರಲ್ಲಿ ಇರುವ ಸ್ಪರ್ಧಿಗಳೇಲ್ಲರೂ ಕಿರುತೆರೆಯಲ್ಲಿ ಮಿಂಚುತ್ತಿರುವವರು. ಅದರಲ್ಲೂ ಕೆಲವು ಸ್ಪರ್ಧಿಗಳೆಂದರೆ ಸೀರಿಯಲ್ ನಟ ನಟಿಯರಾಗಿ ಜನರಿಗೆ ತುಂಬಾನೇ ಇಷ್ಟವಾದವರು. ಅಂಥವರಲ್ಲಿ ಕಿರಣ್ ರಾಜ್ ಮೊದಲಿಗರು.

ಕಿರಣ್ ರಾಜ್ ,ಕನ್ನಡತಿ ಧಾರಾವಾಖ್ಹಿಯ ಖ್ಯಾತ ನಟ. ಕೇವಲ ಒಂದು ಧಾರಾವಾಹಿಯಲ್ಲಿ ನಟಿಸಿಯೇ ಕನ್ನಡಿಗರ ಮನಸ್ಸಿನಲ್ಲಿ ತಮ್ಮದೇ ಛಾಪು ಮೂಡಿಸಿದವರು ಕಿರಣ್ ರಾಜ್. ಕನ್ನಡಿಗರೇ ಆದರೂ ದೂರದ ಉತ್ತದ ಭಾರತದ ಕಡೆಯಲ್ಲಿ ಬೆಳೆದು, ಹಿಂದಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿ ನಂತರ ಇಲ್ಲಿಗೆ ಬಂದು ಕನ್ನಡವನ್ನು ಸ್ಪಷ್ಟವಾಗಿ ಕಲಿತು ಕನ್ನಡಿಗರಿಗೆ ಇಷ್ಟವಾದ ನಟ. ಬಿಗ್ ಬಾಸ್ ಮನೆಯಲ್ಲಿ ಕಿರಣ್ ರಾಜ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಎಲ್ಲ ಟಾಸ್ಕ್ ಗಳಲ್ಲಿಯೂ ಅದ್ಭುತ ಆಟವಾಡುತ್ತಿದ್ದಾರೆ. ಇನ್ನು ಕಿರಣ್ ರಾಜ್ ಅವರು ಜೀವನ ಪಾಠಗಳನ್ನು ಸ್ವಂತ ಅನುಭವದ ಮಾತುಗಳನ್ನು ಹಂಚಿಕೊಳ್ಳುತ್ತಿರುವುದು ಕೇವಲ ಸ್ಪರ್ಧಿಗಳಿಗೆ ಮಾತ್ರವಲ್ಲ ವೀಕ್ಷಕರಿಗೂ ಕೂಡ ಉತ್ತಮ ಪಾಠವಾಗುತ್ತಿದೆ.

ಕನ್ನಡತಿಯ ಹರ್ಷ ಕಿರಣ್ ರಾಜ್ ಅವರು ಅವರ ಪ್ರಾಮಾಣಿಕ ಆಟ, ಅತ್ಯುತ್ತಮ ಮಾತುಗಾರಿಕೆಯಿಂದ ಕನ್ನಡಿಗರ ಮನಸ್ಸನ್ನು ಮತ್ತೊಮ್ಮೆ ಗೆದ್ದಿದ್ದು, ಇವರು ಬಿಗ್ ಬಾಸ್ ಮೈನ್ ಸೀಸನ್ ಗೆ ಬಂದಿದ್ರೆ ಮಂಜು ಪಾವಗಡ ಹಾಗೂ ಅರವಿಂದ ಕೆ ಪಿ ಸೇರಿದಂತೆ ಎಲ್ಲ ಸ್ಪರ್ಧಿಗಳಿಗೂ ಅತ್ಯುತ್ತಮ ಪ್ರತಿಸ್ಪರ್ಧಿ ಆಗುತ್ತಿದ್ದರು ಎನ್ನುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಬಿಗ್ ಬಾಸ್ ಟ್ರೋಫಿ ಗೆಲ್ಲುವ ಸಾಧ್ಯತೆಗಳೂ ಕೂಡ ಹೆಚ್ಚಾಗಿತ್ತು.