ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಅತಿ ಚಿಕ್ಕ ವಯಸ್ಸಿಗೆ ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ ಈ ಹುಡುಗಿ, ಹೇಗೆ ಗೊತ್ತೇ?? ಐಡಿಯಾ ಈಗೂ ಬರಬಹುದು.

4

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಕುತ್ತಮ ವಿದ್ಯಾಭ್ಯಾಸವನ್ನು ಮಾಡಿ, ಶಿಕ್ಷಣವನ್ನು ಮುಗಿಸಿ ಒಂದು ಕೆಲಸ ಸಿಕ್ಕರೆ ಸಾಕಪ್ಪ ಅಂತ ಕೆಲಸ ಹುಡುಕಿ ಜೀವನ ಪರ್ಯಂತ ಒಂದು ಕಂಪನಿಯಲ್ಲಿ ದುಡಿಯುತ್ತಲೇ ಇರುವವರು ಸಾಕಷ್ಟು ಜನರಿದ್ದಾರೆ. ಆದರೆ ಇನ್ನೂ ಕೆಲವರು ಇವರಿಗಿಂತ ಭಿನ್ನ. ತಾವು ಎಷ್ಟೇ ಉತ್ತಮ ಸಂಭಾವನೆ ಪಡೆಯುವ ಸಾಮರ್ಥ್ಯವಿದ್ದರೂ ಕೂಡ ಚಿಕ್ಕದಾದರೂ ಸರಿ ತಮ್ಮ ಸ್ವಂತ ಉದ್ದಿಮೆ ಮಾಡಲು ಹಂಬಲಿಸುತ್ತಾರೆ.

ಹಲವರು ಇದರಲ್ಲಿ ಯಶಸ್ಸು ಕಂಡಿದ್ದಾರೆ ಕೂಡ. ಇಂಥ ಹಲವು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಇನ್ನು ಒಂದು ಭಾಗದ ಭಾಷೆ, ಆಚಾರ ವಿಚಾರಗಳು ಯಾವುದೂ ಗೊತ್ತಿಲ್ಲದೇ ಆ ಜಾಗದಲ್ಲಿ ಉದ್ದಿಮೆ ಮಾಡಿ ಯಶಸ್ಸು ಕಾಣುವುದು ಎಂದರೆ ಸುಲಭದ ಮಾತಲ್ಲ. ಆದರೆ ಸ್ವಂತ ಉದ್ದಿಮೆ ಮಾಡಿ ಗೆದ್ದ ಒಬ್ಬ ಯಶಸ್ವಿ ಹುಡುಗಿಯ ಕಥೆ ಇಲ್ಲಿದೆ ನೋಡಿ. ದೂರದ ಜಾರ್ಖಂಡ್ ನಿಂದ ಬೆಂಗಳೂರಿಗೆ ಅಧ್ಯಯನಕ್ಕಾಗಿ ಬರುತ್ತಾರೆ ಶಿಲ್ಪಿ ಸಿನ್ಹ. ಶಿಲ್ಪಿಗೆ ಮೊದಲಿನಿಂದಲೂ ಸ್ವಂತ ಉದ್ದಿಮೆ ಮಾಡುವ ಹಂಬಲ. ಅದಕ್ಕೆ ಪೂರಕವಾಗಿ ಒಂದು ಗಟನೆ ನಡೆಯುತ್ತದೆ.

ಶಿಲ್ಪಿ ಬೆಂಗಳೂರಿನಲ್ಲಿ ಹಸುವಿನ ಹಾಲಿಗಾಗಿ ಹುಡುಕಾಡುತ್ತಾಳೆ. ಆದರೆ ಎಲ್ಲಿಯೂ ಸರಿಯಾಗಿ ಹಾಲು ಸಿಗುವುದಿಲ್ಲ. ಆಗ ತಾನೇ ಹಸುವಿನ ಹಾಲಿನ ಮಾರಾಟ ಮಾಡಲು ನಿರ್ಧಾರ ಮಾಡುತ್ತಾಳೆ. ಬೆಂಗಳೂರಿನ ಸುತ್ತ ಮುತ್ತಲಿನ ಪ್ರದೇಶದಲ್ಲಿ ಜಾಗವನ್ನು ಹುಡುಕಿ, ಒಂದು ಸ್ವಲ್ಪ ಜಾಗವನ್ನು ಲೀಸ್ ಗೆ ತೆಗೆದುಕೊಂಡು ಕಡಿಮೆ ಬಂಡವಾಳದಲ್ಲಿ ಹಸು ಹಾಲಿನ ಡೈರಿ ಶುರು ಮಾಡುತ್ತಾಳೆ. ತಾನೇ ಸ್ವತಃ ಮೇವನ್ನೂ ಕೂಡ ತಂದು ಹಸುಗಳನ್ನು ಸಾಕುತ್ತಾಳೆ. 2018ರಲ್ಲಿ ಆರಂಭವಾದ ಈ ಉದ್ದಿಮೆ ಇಂದು ಕೋಟಿ ಕೋಟಿ ಗಟ್ಟಲೇ ವ್ಯವಹಾರ ನಡೆಸುವಷ್ಟು ದೊಡ್ದದಾಗಿದೆ. ಶಿಲ್ಪಿಯವರ ಪರಿಶ್ರಮ ಹಾಗೂ ಅವರ ಸಾಧಿಸುವ ಹಂಬಲದಿಂದ ಯಶಸ್ಸುಕಂಡಿದ್ದು ಇತರರಿಗೂ ಮಾದರಿ.