ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನೆನಪಿದ್ದಾರಾ ಸೌಂದರ್ಯವತಿ ‘ಕರ್ಪೂರದ ಗೊಂಬೆ’ ನಟಿ ಶ್ವೇತಾ ಇದೀಗ ಹೇಗಿದ್ದಾರೆ? ಏನು ಮಾಡುತ್ತಿದ್ದಾರೆ ಗೊತ್ತಾ??

10

ನಮಸ್ಕಾರ ಸ್ನೇಹಿತರೇ ಬಣ್ಣದ ಲೋಕ ಅಂದರೆನೆ ಹಾಗೆ. ಇಲ್ಲಿ ಯಾರೂ ಶಾಶ್ವತವಲ್ಲ. ಕೆಲವರು ಕಲಾವಿದರು ಮೊದಲು ತುಂಬಾ ಹಿಟ್ ಚಿತ್ರಗಳನ್ನು ನೀಡಿ ಫೇಮಸ್ ಆಗಿ ನಂತರ ಸಿನಿಮಾದಲ್ಲಿ ಸೋಲನ್ನು ಕಂಡು ನಟನೆಯನ್ನೇ ಬಿಟ್ಟವರು. ಇನ್ನು ಕೆಲವು ಕಲಾವಿದರು ಚಿತ್ರರಂಗಕ್ಕೆ ಬಂದಾಗಿನಿಂದ ಸೋಲನ್ನೇ ಕಂಡು ಆದರೂ ಭರವಸೆ ಕಳೆದುಕೊಳ್ಳದೆ ಮತ್ತೆ ಮತ್ತೆ ತಮ್ಮ ಪ್ರಯತ್ನದ ಮೂಲಕ ಜನಪ್ರಿಯತೆ ಪಡೆದವರು. ಇದರ ಜೊತೆಗೆ ಇನ್ನೊಂದಿಷ್ಟು ಕಲಾವಿದರು ತಾವು ಉತ್ತಮ ಹೆಸರನ್ನು ಹೊಂದಿರುವಾಗಲೇ ನಟನಾ ಕ್ಷೇತ್ರಕ್ಕೆ ಗುಡ್ ಬೈ ಕೇಳಿದವರು. ಕರ್ಪೂರದ ಗೊಂಬೆ ಚಿತ್ರದಲ್ಲಿ ನಾಯಕಿ ಶ್ರುತಿಯ ತಂಗಿ ಪಾತ್ರ ಮಾಡಿದ ನಟಿ ಶ್ವೇತಾ ಈ ವಿಭಾಗಕ್ಕೆ ಸೇರುತ್ತಾರೆ.

ಹೌದು ಸ್ನೇಹಿತರೆ, ನಟಿ ಶ್ವೇತಾ ಬಹಳ ಉತ್ತಮ ಅಭಿನೇತ್ರಿ. ಆಕೆಯ ಮುಖದಲ್ಲಿನ ಒಂದು ಮುಗ್ಧತೆ ಅತಿಹೆಚ್ವು ಜನರನ್ನು ಸೆಳೆದಿತ್ತು. ಈ ಚೆಲುವೆ ಒಂದು ಕಾಲದಲ್ಲಿ ಕನ್ನಡದ ಟಾಪ್ ನಟಿ. ಒಂದರಹಿಂದೊಂದು ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ನಟಿ ಶ್ವೇತಾ ಅವರು ತಮಿಳು ಮಲಯಾಳಂ ಭಾಷೆಗಳ ಧಾರಾವಾಹಿ ಗಳಲ್ಲಿ ಬಾಲನಟಿಯಾಗಿ ವೃತ್ತಿ ಆರಂಭಿಸಿ ಅಲ್ಲಿಯೂ ಕೂಡ ನಟಿಸಿ ಸೈ ಎನಿಸಿಕೊಂಡವರು.

1992ರಲ್ಲಿ ‘ಚೈತ್ರದ ಪ್ರೇಮಾಂಜಲಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಶ್ವೇತಾ ಅವರಿಗೆ ಅಲ್ಲಿಂದಲೇ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡರು. ನಂತರ ಹಲವು ಕನ್ನಡ ಸಿನಿಮಾಗಳಲ್ಲಿ ಅಂದವಾದ ಶ್ವೇತಾ ಅವರ ಚಂದದ ನಟನೆಯನ್ನು ಕಾಣಬಹುದು. ಚೈತ್ರದ ಪ್ರೇಮಾಂಜಲಿಯ ನಂತರ ಗೆಜ್ಜೆನಾದ, ಮಿನುಗುತಾರೆ, ಕರ್ಪೂರದ ಗೊಂಬೆ, ಲಕ್ಷ್ಮಿ ಮಹಾಲಕ್ಷ್ಮಿ, ಬದುಕು ಜಟಕಾಬಂಡಿ, ನಮ್ಮ ಸಂಸಾರ ಆನಂದ ಸಾಗರ, ಕುಟುಂಬ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿ ಸಿನಿ ಪ್ರಿಯರ ಮನಸ್ಸನ್ನು ಗೆದ್ದರು. ನಂತರ ಶ್ವೇತಾ ಅವರಿಗೆ ಅವಕಾಶಗಳು ಕಡಿಮೆ ಆದವು. ಹಾಗಾಗಿ ತಮಿಳಿನ ಕೆಲವು ಧಾರಾವಾಹಿ ಗಳಲ್ಲಿ ಮತ್ತೆ ಅಭಿನಯಿಸಿದರು ಶ್ವೇತಾ. 2002ರ ನಂತರ ಚಿತ್ರರಂಗದಿಂದ ದೂರ ಉಳಿದ ನಟಿ ಶ್ವೇತಾ ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಇದೀಗ ನೋಡಲು ಸಾಕಷ್ಟು ಬದಲಾಗಿದ್ದಾರೆ ಶ್ವೇತಾ. ಇನ್ನು ಮನೆಯವರೊಂದಿಗೆ ನಟಿ ಶ್ವೇತಾ ಸಮಯಕಳೆಯಲು ನಟನೆಯಿಂದ ದೂರವಾದರು ಎಂದು ಹೇಳಲಾಗುತ್ತದೆ.