ವಯಸ್ಸಿನಲ್ಲಿ ತಮಗಿಂತ ಚಿಕ್ಕವರನ್ನು ಮದುವೆಯಾದ ಟಾಪ್ ನಟಿಯರು ಯಾರ್ಯಾರು ಗೊತ್ತೇ?? ಅಚ್ಚರಿಯ ಹೆಸರುಗಳು ಲಿಸ್ಟಿನಲ್ಲಿ.
ವಯಸ್ಸಿನಲ್ಲಿ ತಮಗಿಂತ ಚಿಕ್ಕವರನ್ನು ಮದುವೆಯಾದ ಟಾಪ್ ನಟಿಯರು ಯಾರ್ಯಾರು ಗೊತ್ತೇ?? ಅಚ್ಚರಿಯ ಹೆಸರುಗಳು ಲಿಸ್ಟಿನಲ್ಲಿ.
ನಮಸ್ಕಾರ ಸ್ನೇಹಿತರೇ ಕೇವಲ ನಾಯಕನಟರಿಗೆ ಮಾತ್ರವಲ್ಲದೆ ನಮ್ಮ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯರು ಕೂಡ ಅಪಾರ ಪ್ರಮಾಣದ ಅಭಿಮಾನಿಗಳ ದಂಡು ಹೊಂದಿದ್ದಾರೆ. ಯಾರ ಸಹಾಯವೂ ಇಲ್ಲದೆ ಯಾವ ಶಿಫಾರಸು ಇಲ್ಲದೆ ಕನ್ನಡ ಚಿತ್ರರಂಗದಲ್ಲಿ ತಮ್ಮ ಪ್ರತಿಭೆಯ ಮೂಲಕ ಅದೆಷ್ಟೋ ಅಭಿಮಾನಿಗಳನ್ನು ಹೊಂದಿರುವ ಇವರು ಸ್ವಾವಲಂಬಿ ಮಹಿಳಾ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇನ್ನು ಇಂದಿನ ವಿಷಯದಲ್ಲಿ ನಾವು ನಮ್ಮ ಕನ್ನಡ ಚಿತ್ರರಂಗದ ವಿವಾಹಿತ ನಟಿಯರ ಕುರಿತಂತೆ ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಇಂದಿನ ವಿಚಾರದಲ್ಲಿ ನಾವು ತಮಗಿಂತಲೂ ಕಡಿಮೆ ವಯಸ್ಸಿನವರನ್ನು ಮದುವೆಯಾಗಿರುವ ನಟಿಯರ ಕುರಿತಂತೆ ವಿವರವಾಗಿ ಹೇಳಲು ಹೊರಟಿದ್ದೇವೆ ಬನ್ನಿ.
ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದ ಸಿಂಡ್ರೆಲ್ಲಾ ಎಂದೇ ಖ್ಯಾತರಾಗಿರುವ ಕರಾವಳಿ ಮೂಲದ ಬೆಡಗಿ ರಾಧಿಕಾ ಪಂಡಿತ್. ರಾಧಿಕಾ ಪಂಡಿತ್ ಅವರು ಮೊದಲು ಕಿರುತೆರೆಯ ಧಾರವಾಹಿಗಳಲ್ಲಿ ನಟಿಸುವ ಮೂಲಕ ಮನೋರಂಜನ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿ ನಂತರ ಮೊಗ್ಗಿನ ಮನಸು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. ಅದಾದ ನಂತರ ಅವರು ಹಿಂದಿರುಗಿ ನೋಡಿದ್ದೇ ಇಲ್ಲ ಕನ್ನಡ ಚಿತ್ರರಂಗದಲ್ಲಿ ಅನಭಿಷಕ್ತ ರಾಣಿಯಾಗಿ ಮೆರೆದಿದ್ದಾರೆ. ಇದೀಗ ತಮ್ಮ ಬಹುಕಾಲದ ಗೆಳೆಯ ರಾಕಿಂಗ್ ಸ್ಟಾರ್ ಯಶ್ ರವರನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಕೂಡ ಹೊಂದಿದ್ದಾರೆ. ಇನ್ನು ರಾಧಿಕಾ ಪಂಡಿತ್ ಅವರು ಯಶ್ ಅವರಿಗಿಂತ ವಯಸ್ಸಿನಲ್ಲಿ 2 ವರ್ಷ ದೊಡ್ಡವರು.
ಶಿಲ್ಪ ಶೆಟ್ಟಿ ಮಂಗಳೂರು ಮೂಲದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಅವರು ಕೂಡ ಈ ಲಿಸ್ಟಿನಲ್ಲಿ ಕಾಣಸಿಗುತ್ತಾರೆ. ಶಿಲ್ಪ ಶೆಟ್ಟಿ ಅವರು ಖ್ಯಾತ ಉದ್ಯಮಿಯಾಗಿರುವ ರಾಜ್ ಕುಂದ್ರಾ ರವರನ್ನು ವಿವಾಹವಾಗಿ ರುತ್ತಾರೆ. ಇನ್ನು ಇವರಿಬ್ಬರಿಗೆ ಒಬ್ಬ ಮಗ ಕೂಡ ಜನಿಸಿದ್ದಾನೆ. ಶಿಲ್ಪ ಶೆಟ್ಟಿ ಅವರು ರಾಜ್ ಕುಂದ್ರಾ ಅವರಿಗಿಂತ ವಯಸ್ಸಿನಲ್ಲಿ ಎರಡು ವರ್ಷ ದೊಡ್ಡವರು. ಇನ್ನು ಶಿಲ್ಪ ಶೆಟ್ಟಿ ಅವರನ್ನು ಬಾಲಿವುಡ್ ಚಿತ್ರರಂಗದ ಫಿಟ್ನೆಸ್ ಪ್ರೇಮಿ ಎಂದು ಕೂಡ ಕರೆಯಲಾಗುತ್ತದೆ.
ಛಾಯಾಸಿಂಗ್ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಾಯಕ ನಟಿಯಾಗಿ ಇದ್ದಂತಹ ಛಾಯಾಸಿಂಗ್ ರವರು ವಿವಾಹಿತರಾಗಿ ಚಿತ್ರರಂಗದಿಂದ ಕೊಂಚ ದೂರ ಉಳಿದಿದ್ದಾರೆ. ಇನ್ನು ಛಾಯಾ ಸಿಂಗ್ ರವರು ಮದುವೆಯಾಗಿರುವುದು ತಮಿಳು ಚಿತ್ರರಂಗದ ಖ್ಯಾತ ನಟ ಪ್ರಸನ್ನ ರವರನ್ನು. ಇನ್ನು ಪ್ರಸನ್ನ ಕೂಡ ಛಾಯಾ ಸಿಂಗ್ ಅವರಿಗಿಂತ ವಯಸ್ಸಿನಲ್ಲಿ ಎರಡು ವರ್ಷ ಚಿಕ್ಕವರು.
ಐಶ್ವರ್ಯ ರೈ ಮಂಗಳೂರು ಮೂಲದ ಭುವನ ಸುಂದರಿ ಐಶ್ವರ್ಯ ರೈ ಅವರು ಕೂಡ ಬಾಲಿವುಡ್ ಚಿತ್ರರಂಗದ ನಂಬರ್1 ನಟಿಯರಲ್ಲಿ ಒಬ್ಬರಾಗಿದ್ದರು. ಒಂದು ಕಾಲದಲ್ಲಿ ಕೇವಲ ಬಾಲಿವುಡ್ ಚಿತ್ರರಂಗದಲ್ಲಿ ಮಾತ್ರವಲ್ಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೂಡ ನಟಿಸಿ ಖ್ಯಾತರಾದವರು. ಇನ್ನು ಇವರು ಮದುವೆಯಾಗಿರುವುದು ಭಾರತ ಚಿತ್ರರಂಗದ ಶಹೆಂಶಃ ಎಂದೇ ಖ್ಯಾತರಾಗಿರುವ ಅಮಿತಾ ಬಚ್ಚನ್ ರವರ ಪುತ್ರ ಅಭಿಷೇಕ್ ಬಚ್ಚನ್ ರವರನ್ನು. ಇನ್ನು ಇವರಿಗೆ ಒಬ್ಬ ಮಗಳು ಕೂಡ ಇದ್ದಾಳೆ. ವಯಸ್ಸಿನ ವಿಚಾರಕ್ಕೆ ಬರುವುದಾದರೆ ಅಭಿಷೇಕ್ ಬಚ್ಚನ್ ರವರು ಐಶ್ವರ್ಯ ಅವರಿಗಿಂತ ವಯಸ್ಸಿನಲ್ಲಿ ಎರಡು ವರ್ಷ ಚಿಕ್ಕವರು.
ಅನುಪ್ರಭಾಕರ್ ಕನ್ನಡ ಚಿತ್ರರಂಗದ ಒಂದು ಕಾಲದಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಕಾಣಿಸಿಕೊಂಡಿದ್ದಂತಹ ಅನುಪ್ರಭಾಕರ್ ಅವರು ಈಗ ಸುಖ ಸಂಸಾರವನ್ನು ಜೀವಿಸುತ್ತಿದ್ದಾರೆ. ಇನ್ನು ಇವರು ಎರಡನೆಯ ಮದುವೆಯಾಗಿ ನಟ ಹಾಗೂ ಮಾಡೆಲ್ ರಘು ಮುಖರ್ಜಿ ಅವರನ್ನು ಮದುವೆಯಾಗಿದ್ದು, ರಘು ಮುಖರ್ಜಿ ಅವರು ಅನುಪ್ರಭಾಕರ್ ಅವರಿಗಿಂತ ವಯಸ್ಸಿನಲ್ಲಿ 2 ವರ್ಷ ಚಿಕ್ಕವರು.
ನಮ್ರತಾ ಶಿರೋಡ್ಕರ್ ನಮ್ರತಾ ಶಿರೋಡ್ಕರ್ ಅವರು ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದು ಒಂದೇ ಚಿತ್ರವಾದರೂ ಕೂಡ ದಕ್ಷಿಣ ಭಾರತದಲ್ಲಿ ಪ್ರಸಿದ್ಧತೆಯನ್ನು ಪಡೆದುಕೊಂಡಂತಹ ನಟಿ. ಇನ್ನೂ ಅವರು ಮದುವೆಯಾಗಿರುವುದು ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ಮಹೇಶ್ ಬಾಬು ರವರನ್ನು. ನಮೃತ ಹಾಗೂ ಮಹೇಶ್ ಬಾಬು ದಂಪತಿಗಳಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿದೆ. ಇನ್ನು ಮಹೇಶ್ ಬಾಬು ರವರು ನಮೃತ ಅವರಿಗಿಂತ ವಯಸ್ಸಿನಲ್ಲಿ ಎರಡು ವರ್ಷ ಚಿಕ್ಕವರು.