ಯಶ್ ಇಲ್ಲದೆ ಸಿಮಾ ಬೆಸ್ಟ್ ನಟ ಅವಾರ್ಡ್ ಗೆ ನಾಮಿನೇಟ್ ಆಗಿರುವವರು ಯಾರ್ಯಾರು ಗೊತ್ತೇ?? ಇವರಲ್ಲಿ ಯಾರು ಗೆಲ್ಲಬಹುದು??

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ಪ್ರತಿಯೊಬ್ಬರು ನಟನೆಯ ವೃತ್ತಿಯನ್ನು ಮಾಡುವುದು ಕೇವಲ ದುಡ್ಡಿಗೆ ಮಾತ್ರವಲ್ಲ ಅವರ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸುವ ಅವಾರ್ಡ್ ಗಾಗಿ ಕೂಡ ಹೌದು. ಹೌದು ಸ್ನೇಹಿತರೆ ಅವಾರ್ಡ್ ಗಳು ಒಬ್ಬ ನಟನ ಪ್ರತಿಭೆಯನ್ನು ಸನ್ಮಾನದ ರೂಪದಲ್ಲಿ ದೃಢೀಕರಣ ಗೊಳಿಸುವ ಮಾಪನ ಎಂದು ಹೇಳಬಹುದು. ಇಂದಿನ ವಿಚಾರದಲ್ಲಿ ನಾವು 2019 ರ ಸಾಲಿನ ಸೈಮಾ ಅವಾರ್ಡ್ಸ್ ನಲ್ಲಿ ಕನ್ನಡ ಚಿತ್ರರಂಗದಿಂದ ಆಯ್ಕೆಯಾಗಿರುವ ಬೆಸ್ಟ್ ಆಕ್ಟರ್ ಅವಾರ್ಡ್ ಸಾಲಿನಲ್ಲಿರುವ ನಟರ ಕುರಿತಂತೆ ಹೇಳಲು ಹೊರಟಿದ್ದೇವೆ. ಇದರಲ್ಲಿ ನಿಮಗೆ ಯಾರು ಗೆಲ್ಲಬಹುದು ಎಂಬುದನ್ನು ಕೂಡ ಕೊನೆಯಲ್ಲಿ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಕೂಡ 2019ರ ಬೆಸ್ಟ್ ಆಕ್ಟರ್ ಅವಾರ್ಡ್ ನಾಮಿನೇಷನ್ ಗೆ ಆಯ್ಕೆಯಾಗಿದ್ದು ಅವರು ಆಯ್ಕೆಯಾಗಿರುವ ಸಿನಿಮಾ ನಟ ಸಾರ್ವಭೌಮ. ನಟಸಾರ್ವಭೌಮ ಚಿತ್ರದಲ್ಲಿ ಮೀಡಿಯ ಪ್ರತಿನಿಧಿ ಪಾತ್ರದ ಮೂಲಕ ಜನರ ಮನ ಗೆದ್ದಿದ್ದರು. ರಿಷಿ ಕುಮಾರ್ ಕವಲುದಾರಿ ಚಿತ್ರದ ಮೂಲಕ ಟ್ರಾಫಿಕ್ ಪೊಲೀಸ್ ಪಾತ್ರದಲ್ಲಿ ಕನ್ನಡಿಗರ ಮನಗೆದ್ದಿದ್ದ ರಿಷಿ ಕುಮಾರ್ ರವರು ಈ ಬಾರಿಯ ನೆಚ್ಚಿನ ನಾಯಕ ನಟ ಅವರಿಗೆ ಕೂಡ ಆಯ್ಕೆಯಾಗಿದ್ದಾರೆ.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಪ್ಯಾನ್ ಇಂಡಿಯಾ ಬಿಡುಗಡೆ ಮೂಲಕ ಸದ್ದು ಮಾಡಿದಂತಹ ಅವನೇ ಶ್ರೀಮನ್ನಾರಾಯಣ ಚಿತ್ರದ ನಾರಾಯಣ ಪಾತ್ರಕ್ಕಾಗಿ ರಕ್ಷಿತ್ ಶೆಟ್ಟಿ ಅವರು ಸೈಮಾ 2019 ರ ಬೆಸ್ಟ್ ಆಕ್ಟರ್ ಅವಾರ್ಡ್ ಗೆ ನಾಮಿನೇಟ್ ಆಗಿದ್ದಾರೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ಚೇತನ್ ಕುಮಾರ್ ನಿರ್ದೇಶನದ ಹಾಗೂ ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ಭರಾಟೆ ಚಿತ್ರದ ಪಾತ್ರಕ್ಕಾಗಿ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರು 2019 ರ ಸಾಲಿನ ಬೆಸ್ಟ್ ಆಕ್ಟರ್ ಅವಾರ್ಡ್ ಗೆ ನಾಮಿನೇಟ್ ಆಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಶ್ರೀನಿವಾಸ್ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ರವರು ಯಜಮಾನ ಚಿತ್ರದ ಪಾತ್ರಕ್ಕಾಗಿ ಈ ಬಾರಿಯ ಸೈಮಾ ಅವಾರ್ಡ್ಸ್ ನ ಬೆಸ್ಟ್ ಆಕ್ಟರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ. ಇಷ್ಟೊಂದು ಜನ ನಟರಲ್ಲಿ ಈ ಬಾರಿ ಅಂದರೆ 2019 ರ ಸಾಲಿನ ಸೈಮಾ ಅವಾರ್ಡ್ ಅನ್ನು ಯಾರು ಗೆಲ್ಲುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.

Post Author: Ravi Yadav