ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಎಲ್ಲಾ ತಂಡಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಸ್ಟಾರ್ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡ ಆರ್ಸಿಬಿ, ಯಾರು ಗೊತ್ತೇ??

3

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ನಿಂತು ಹೋಗಿದ್ದ ಐಪಿಎಲ್ ಟೂರ್ನಿ ಯುಎಇ ದೇಶದಲ್ಲಿ ಪುನರಾರಂಭವಾಗಲಿದೆ. ಈಗಾಗಲೇ ಮೊದಲನೇ ಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಆರ್ಸಿಬಿ ತಂಡವು ಎರಡನೇ ಭಾಗದಲ್ಲಿ ಕೂಡ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮೊದಲ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಕನಸು ಕಾಣುತ್ತಿರುವುದು ಸುಳ್ಳಲ್ಲ. ಇಂತಹ ಸಮಯದಲ್ಲಿ ಆರ್ಸಿಬಿ ತಂಡಕ್ಕೆ ಮತ್ತೊಂದು ಸಿಹಿ ಸುದ್ದಿ ಯೊಂದು ಕೇಳಿ ಬಂದಿದೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಯುಎಈ ದೇಶದಲ್ಲಿ ಇರುವ ಕ್ರಿಕೆಟ್ ಮೈದಾನಗಳು ಸ್ಪಿನ್ ಬೌಲರ್ಗಳಿಗೆ ಅತ್ಯಂತ ಸೂಕ್ತವಾದ ಪಿಚ್ ಗಳು ಆಗಿವೆ. ಇಂತಹ ಸಮಯದಲ್ಲಿ ಪ್ರತಿಯೊಂದು ಐಪಿಎಲ್ ತಂಡಗಳು ಕೂಡ ತಮ್ಮ ಸ್ಪಿನ್ ವಿಭಾಗವನ್ನು ಬಲ ಪಡಿಸಿಕೊಳ್ಳುವ ಕುರಿತು ಆಲೋಚನೆ ನಡೆಸುತ್ತಿದ್ದು ಆರ್ಸಿಬಿ ತಂಡ ಇತರ ಐಪಿಎಲ್ ತಂಡಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಸ್ಟಾರ್ ಆಟಗಾರನನ್ನು ಆರ್ಸಿಬಿ ತಂಡಕ್ಕೆ ಸೇರಿಸಿಕೊಂಡು ಬಿಟ್ಟಿದೆ. ಅಷ್ಟಕ್ಕೂ ಆ ಸ್ಟಾರ್ ಆಟಗಾರ ಯಾರು ಹಾಗೂ ಯಾವ ಕಾರಣಕ್ಕೆ ಈತನೇ ಬೆಸ್ಟ್ ಎಂದು ಆರ್ಸಿಬಿ ತಂಡ ಅಂದುಕೊಂಡಿದೆ ಎಂಬುದನ್ನು ನಾವು ತಿಳಿಸುತ್ತೇವೆ ಕೇಳಿ.

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಯುಎಇ ದೇಶದ ಕ್ರಿಕೆಟ್ ಮೈದಾನಗಳು ಬಹುತೇಕ ಶ್ರೀಲಂಕಾ ದೇಶದ ಮೈದಾನ ಗಳಂತೆ ಸ್ಪಿನ್ ಬೌಲರುಗಳಿಗೆ ಹೆಚ್ಚು ನೆರವಾಗುತ್ತದೆ, ಇಂತಹ ಸಮಯದಲ್ಲಿ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಗಳನ್ನು ಹೊಂದಿರುವ ಭಾರತ ತಂಡದ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿ ಶ್ರೀಲಂಕಾ ದೇಶ ಗೆಲ್ಲುವಂತೆ ಮಾಡಿದ್ದ ವನಿಂದು ಹಸರಂಗ ರವರನ್ನು ಆರ್ಸಿಬಿ ತಂಡ ಆಸ್ಟ್ರೇಲಿಯಾ ದೇಶದ ಆಡಮ್ ಜಂಪಾ ಅವರ ಬದಲಿಗೆ ಸೇರಿಸಿಕೊಂಡಿದೆ. ಕಳೆದ ಬಾರಿ ಟೂರ್ನಿಯನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದ ಆಡಮ್ ಜಂಪಾ ಅವರು ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದು ಇವರ ಬದಲಿಗೆ ಸ್ಟಾರ್ ಆಟಗಾರನಿಗೆ ಮಣೆ ಹಾಕಲು ಆರ್ಸಿಬಿ ತಂಡ ನಿರ್ಧಾರಮಾಡಿ ಬಿಸಿಸಿಐ ಕಡೆಯಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡು ಇಂದು ಅಧಿಕೃತವಾಗಿ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿದೆ.