ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಗ್ ನ್ಯೂಸ್: ಒಂದೇ ದಿನ ಮೂರು ಹೊಸ ಬಲಿಷ್ಠ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡ ಆರ್ಸಿಬಿ, ಯಾರ್ಯಾರು ಗೊತ್ತೇ??

3

ನಮಸ್ಕಾರ ಸ್ನೇಹಿತರೇ ನಿಮಗೆಲ್ಲಾ ಐಪಿಎಲ್ ನ ಮುಂದುವರಿದ ಚರಣ ಇದೇ ಸೆಪ್ಟೆಂಬರ್ 19 ರಿಂದ ಯು.ಎ.ಇ , ದುಬೈ ಹಾಗೂ ಅಬುಧಾಬಿಯಲ್ಲಿ ನಡೆಯುತ್ತಿರುವುದು ತಿಳಿದಿದೆ. ಎಲ್ಲಾ ಫ್ರಾಂಚೈಸಿಗಳು ತಮ್ಮ ಆಟಗಾರರನ್ನ ಸುರಕ್ಷಿತ ವಲಯದಲ್ಲಿರಿಸಿ, ಈಗಾಗಲೇ ಕ್ವಾರಂಟೈನ್ ಮುಗಿಸಿ ದುಬೈ ವಿಮಾನವನ್ನು ಹತ್ತಿಸುತ್ತಿವೆ. ಅದಲ್ಲದೇ ಕೆಲವು ಆಟಗಾರರು ಈ ಭಾರಿಯ ಐಪಿಎಲ್ ಗೆ ಅಲಭ್ಯರಾಗಿದ್ದಾರೆ. ಅಂತಹ ಆಟಗಾರರಿಗೆ ಬದಲಿ ಆಟಗಾರರನ್ನು ಸಹ ತಂಡಗಳು ಹುಡುಕುತ್ತಿವೆ.

ಇನ್ನು ಈ ಭಾರಿಯ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಸಹ ಮೂರು ಜನ ವಿದೇಶಿ ಆಟಗಾರರು ಈ ಭಾರಿ ಆಯ್ಕೆಗೆ ಲಭ್ಯರಿರಲಿಲ್ಲ. ಈ ಹಿಂದೆ ಟೂರ್ನಿ ಮಧ್ಯೆಯೇ ತಂಡವನ್ನು ತೊರೆದ ಆಡಂ ಜಂಪಾ ಹಾಗೂ ಈ ಭಾರಿ ಆಯ್ಕೆಗೆ ಲಭ್ಯರಾಗದ ಕೇನ್ ರಿಚರ್ಡಸನ್ ಮತ್ತು ಫಿನ್ ಅಲೆನ್ ಬದಲು ಬೇರೆ ದೇಶಗಳ ಮೂವರು ಆಟಗಾರರು ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಬನ್ನಿ ಆ ಆಟಗಾರರು ಯಾರು ಎಂದು ತಿಳಿಯೋಣ.

ಮೊದಲನೆಯದಾಗಿ ವನಿಂದು ಹಸರಂಗ – ಆಸ್ಟ್ರೇಲಿಯಾದ ಸ್ಪಿನ್ನರ್ ಆಡಂ ಜಂಪಾ ಸುರಕ್ಷತೆ ದೃಷ್ಠಿಯಿಂದ ಅರ್ಧಕ್ಕೆ ಆರ್ಸಿಬಿಯನ್ನು ತೊರೆದಿದ್ದರು. ಈಗ ಅವರ ಜಾಗಕ್ಕೆ ಶ್ರೀಲಂಕಾದ ಲೆಗ್ ಸ್ಪಿನ್ನರ್ ಹಾಗೂ ಬ್ಯಾಟ್ಸಮನ್ ವನಿಂದು ಹಸರಂಗ ಆರ್ಸಿಬಿಗೆ ಸೇರಿದ್ದಾರೆ. ಇತ್ತಿಚೆಗೆ ನಡೆದ ಭಾರತದ ವಿರುದ್ದ ಸರಣಿಯಲ್ಲೂ ಸಹ ಹಸರಂಗಾ ಉತ್ತಮ ಆಲ್ ರೌಂಡರ್ ಪ್ರದರ್ಶನ ನೀಡಿದ್ದರು.

ಎರಡನೆಯದಾಗಿ ದುಷ್ಯಂತ ಚಾಮೀರಾ – ಆಸ್ಟ್ರೇಲಿಯಾದ ವೇಗದ ಬೌಲರ್ ಕೇನ್ ರಿಚರ್ಡಸನ್ ಈ ಭಾರಿಯ ಐಪಿಎಲ್ ನಲ್ಲಿ ಭಾಗವಹಿಸುತ್ತಿಲ್ಲ. ಅವರ ಸ್ಥಾನಕ್ಕೆ ಲಂಕಾ ವೇಗಿ ಚಾಮೀರರವರು ಆರ್ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ. ಭಾರತ ವಿರುದ್ದದ ಸರಣಿಯಲ್ಲಿ ಚಾಮೀರ ತಮ್ಮ ವೇಗ ಹಾಗೂ ಸ್ವಿಂಗ್ ಬೌಲಿಂಗ್ ನಿಂದ ಗಮನ ಸೆಳೆದಿದ್ದರು.

ಮೂರನೆಯದಾಗಿ ಟಿಮ್ ಡೇವಿಡ್ – ನ್ಯೂಜಿಲೆಂಡ್ ತಂಡದ ವಿಕೇಟ್ ಕೀಪರ್ ಬ್ಯಾಟ್ಸಮನ್ ವೈಯುಕ್ತಿಕ ಕಾರಣಕ್ಕೆ ಈ ಭಾರಿ ಐಪಿಎಲ್ ನಲ್ಲಿ ಭಾಗವಹಿಸುತ್ತಿಲ್ಲ. ಹಾಗಾಗಿ ಅವರ ಬದಲಿಗೆ ಐಪಿಎಲ್ ಇತಿಹಾಸದಲ್ಲಿಯೇ ಮೊದಲ ಭಾರಿ ಸಿಂಗಾಪುರ ತಂಡದ ಆಟಗಾರ ಟಿಮ್ ಡೇವಿಡ್ ಆರ್ಸಿಬಿ ಪರ ಆಡಲಿದ್ದಾರೆ. ಫಿನ್ ಆಲೆನ್ ಸಹ ಆಸ್ಟ್ರೇಲಿಯಾದ ಜೋಶುಹಾ ಫಿಲಿಫೆ ಯವರ ಬದಲಿ ಆಟಗಾರನಾಗಿ ತಂಡವನ್ನು ಸೇರಿಕೊಂಡಿದ್ದರು. ಆರ್ಸಿಬಿ ತಂಡಕ್ಕೆ ಹೊಸದಾಗಿ ಸೇರಿಕೊಂಡ ಆಟಗಾರರ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.