ಕಿಟ್ಟು ಪುಟ್ಟು ಸಿನಿಮಾಗೆ ವಿಷ್ಣುವರ್ಧನ್ ಹೀರೋ ಆಗುವುದು ಬೇಡ ಎಂದು ಮಂಜುಳಾ ಹಠ ಹಿಡಿದದ್ದು ಯಾಕೆ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗಲ್ಲಿ ಕೆಲವು ಚಿತ್ರಗಳಿಗೆ ಸಂಬಂಧಿಸಿದಂತೆ, ನಾವೆಲ್ಲಾ ತಿಳಿದುಕೊಳ್ಳುವುದಕ್ಕೆ ಹಲವಾರು ರೋಚಕ ಕಥೆಗಳಿವೆ. ಒಂದೊಂದು ಕಥೆಯೂ ಒಂದೊಂದು ವಿಶೇಷತೆಯನ್ನು ಹೊಂದಿವೆ. ನಾವೀಗ ಹೇಳುತ್ತಿರುವ ಕಥೆ ಕಿಟ್ಟು ಪುಟ್ಟು ಸಿನಿಮಾ ನಿರ್ಮಾಣದ ಹಿಂದಿನ ರೋಚಕ ಕಥೆ. ಅದೇನು ಬನ್ನಿ ನೋಡೋಣ.

1977 ರಲ್ಲಿ ತೆರೆಕಂದ ಸಿನಿಮಾ ’ಕಿಟ್ಟು ಪುಟ್ಟು’. ದ್ವಾರಕೀಶ್ ಅವರ ನಿರ್ಮಾಣದ ಈ ಚಿತ್ರದ ಮೂಲಕ ಡಾ. ವಿಷ್ಣುವರ್ಧನ್ ಹಾಗೂ ಮಂಜುಳಾ ಜೋಡಿ ಸೂಪರ್ ಹಿಟ್ ಜೋಡಿ ಎನಿಸಿದ್ದು. ಆದರೆ ಈ ಚಿತ್ರ ಶುರುವಾದ ರೀತಿ ಹೀಗೆ.. ನಟ ದ್ವಾರಕೀಶ್ ಅವರು ತಮಿಳು ಭಾಷೆಯ ಹಾಸ್ಯ ಕಲಾವಿದನೊಬ್ಬ ದ್ವಿಪಾತ್ರದಲ್ಲಿ ನಟಿಸಿರುವ ಸಿನಿಮಾವನ್ನು ನೋಡಿ ಅಂದರಿಂದ ಪ್ರೇರಿತರಾಗಿ ಕಿಟ್ಟು ಪುಟ್ಟು ನಿರ್ಮಾಣ ಮಾಡುವ ನಿರ್ಧಾರ ಮಾಡಿದ್ದರಂತೆ. ತಮ್ಮ ಸ್ನೇಹಿತ ನಾಗರಾಜ್ ಅವರಿಗೆ ಕಥೆಯನ್ನು ವಿವರಿಸಿ ಇದಕ್ಕೆ ನಾಯಕನಾಗಿ ಡಾ. ವಿಷ್ಣುವರ್ಧನ್ ಹಾಗು ನಟಿ ಮಂಜುಳಾ ನಾಯಕಿಯಾಗಬೇಕು ಎಂದು ನಿರ್ಧಾರ ಮಾಡಿದರಂತೆ. ಹಾಗೂ ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಸಿ. ವಿ.ರಾಜೇಂದ್ರನ್ ಅವರಿಗೆ ವಹಿಸಿದ್ರು ದ್ವಾರಕೀಶ್.

ಚಿತ್ರ ಚಿತ್ರೀಕರಣಕ್ಕೆ ಎಲ್ಲವೂ ಸೆಟ್ ಆಯ್ತು ಅನ್ನುವಷ್ಟರಲ್ಲಿ ನಟಿ ಮಂಜುಳಾ ತದಾದೆ ಎತ್ತಿದರಂತೆ. ಬೇರೇನು ಅಲ್ಲ. ಕಥೆಯನ್ನು ಕೇಳಿದ ಮಂಜುಳಾ ಈ ಚಿತ್ರಕ್ಕೆ ಡಾ. ವಿಷ್ಣುವರ್ಧನ್ ಬದಲು ಪ್ರಣಯ ರಾಜ ಶ್ರೀನಾಥ್ ಅವರು ನಾಯಕರಾಗಬೇಕು ಎಂದರಂತೆ. ಆದರೆ ಈ ಕಥೆಗೆ ಶ್ರೀನಾಥ್ ಅವರಿಗಿಂತ ವಿಷ್ಣುವೇ ಸರಿ ಎನ್ನುವುದು ದ್ವಾರಕೀಶ್ ಅವರ ನಿರ್ಧಾರವಾಗಿತ್ತು. ಆದರೆ ಸಿನಿ ಪರದೆಯ ಮೇಲೆ ಆ ಸಮಯದಲ್ಲಿ ಬೆಸ್ಟ್ ಜೋಡಿ ಎನಿಸಿಕೊಂಡಿದ್ದು ನಟ ಶ್ರೀನಾಥ್ ಹಾಗೂ ನಟಿ ಮಂಜುಳಾ ಜೋಡಿ. ಆದರೆ ಕೊನೆಯಲ್ಲಿ ದ್ವಾರಕೀಶ್ ಅವರು ಮಂಜುಳಾ ಅವರ ಮನಮೊಲಿಸಿ ತಮ್ಮ ಸ್ನೇಹಿತರೂ ಆಗಿರುವ ನಟ ಡಾ. ವಿಷ್ಣುವರ್ಧನ್ ಅವರನ್ನೇ ನಾಯಕರನ್ನಾಗಿ ಮಾಡುತ್ತಾರೆ. ಆ ನಂತರ ಮಂಜುಳಾ ಹಾಗೂ ವಿಷ್ಣು ಜೋಡಿಯ ಅದ್ಭುತ ಕಾಂಬಿನೇಶನ್ ನಲ್ಲಿ ಮೂಡಿ ಬಂದ ’ಕಿಟ್ಟು ಪುಟ್ಟು’ ಅದ್ಭುತ ಯಶಸ್ಸನ್ನು ಕಾಣುತ್ತದೆ.

Post Author: Ravi Yadav