ಇಡೀ ಭಾರತದಲ್ಲಿಯೇ ಬಾರಿ ನಿರೀಕ್ಷೆ ಮೂಡಿಸಿರುವ ಕೆಜಿಎಫ್-2 ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿದ್ದು ಎಷ್ಟು ಕೋಟಿಗೆ ಗೊತ್ತೇ??
ಇಡೀ ಭಾರತದಲ್ಲಿಯೇ ಬಾರಿ ನಿರೀಕ್ಷೆ ಮೂಡಿಸಿರುವ ಕೆಜಿಎಫ್-2 ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿದ್ದು ಎಷ್ಟು ಕೋಟಿಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ ಕನ್ನಡದಲ್ಲಿ ದೊಡ್ದ ಇತಿಹಾಸವನ್ನೇ ನಿರ್ಮಿಸಿದ ಚಿತ್ರ ‘ಕೆಜಿಎಫ್’. ಕೆಜಿಎಫ್ ಕನ್ನಡದಲ್ಲಿ ನಿರ್ಮಾಣವಾಗಿ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿಯೂ ತೆರೆಕಂಡ ಅದ್ಬುತ ಸಿನಿಮಾ. ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದಂಥಾ ಸಿನಿಮಾ. ಇನ್ನು ಕೆಜಿಎಫ್ ಮೊದಲ ಭಾಗದಲ್ಲಿಯೇ ಕೆಜಿಎಫ್2 ಬಗ್ಗೆ ಹೇಳಲಾಗಿದ್ದು ಇದೀಗ ಸಿದ್ಧವಾಗಿರುವ ಕೆಜಿಎಫ್ 2 ಯಾವಾಗ ಚಿತ್ರಮಂದಿರಗಳಲ್ಲಿ ರಿಲೀಸ್ ಅಂತ ಸಿನಿ ಪ್ರಿಯರು ಕಾತುರರಾಗಿದ್ದಾರೆ.
ಕೆಜಿಎಫ್ 2 ಬಗ್ಗೆ ಮಾಹಿತಿ ಕೊಟ್ಟಿರುವ ಪ್ರಶಾಂತ್ ನೀಲ್ ಚಿತ್ರಮಂದಿರ ತುಂಬಿದಾಗ ಕೆಜಿಎಫ್ 2 ರಿಲೀಸ್ ಎಂಬಂತೆ ಟ್ವೀಟ್ ಮಾಡಿ ಹೇಳಿದ್ರು. ಇದೀಗ ಕರೋನ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದ್ರೂ ಕೂಡ ಚಿತ್ರಮಂದಿರದಲ್ಲಿ 100% ಸ್ಥಳಾವಕಾಶ ನೀಡಲಾಗಿಲ್ಲ. ಹಾಗಾಗಿ ಕೆಜಿಎಫ್ 2 ರಿಲೀಸ್ ಇನ್ನೂ ಪೆಂಡಿಂಗ್ ನಲ್ಲಿದೆ.
ಅಂದಹಾಗೆ ದೇಶಾದ್ಯಂತ ಕೆಜಿಎಫ್ 2 ಸಿನಿಮಾದ ಸ್ಯಾಟಲೈಟ್ ರೈಟ್ಸ್ ಜೀ ವಾಹಿನಿಯ ಪಾಲಾಗಿದೆ. 120 ಕೋಟಿ ರೂಪಾಯಿ ಮೊತ್ತಕ್ಕೆ ಹಕ್ಕು ನೀಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಕೆಜಿಎಫ್ 2 ನಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಶ್ರೀ ನಿಧಿ ಶೆಟ್ಟಿ ಮುಂದುವರೆದರೆ, ಜೊತೆ ಬಾಲಿವುಡ್ ಕಲಾವಿದರಾದ ಸಂಜಯ್ ದತ್, ರವಿನಾ ಟಂಡನ್ ಮೊದಲಾದವರು ಅಭಿನಯಿಸಿದ್ದಾರೆ. ಕೆಜಿಎಫ್ ಮೊದಲ ಭಾಗಕ್ಕಿಂತ ಕೆಜಿಎಫ್ 2 ಹೆಚ್ಚು ಉತ್ತಮವಾಗಿ ಮೂಡಿಬಂದಿದೆ ಎನ್ನಲಾಗುತ್ತಿದೆ. ಆದರೆ ಬಹು ನಿರೀಕ್ಷೆಯ ಕೆಜಿಎಫ್ 2 ಹೇಗಿದೆ ಅಂತ ಇದನ್ನು ನೋಡಿ ಸಿನಿ ಪ್ರಿಯರು ಅಭಿಪ್ರಾಯ ಹೇಳಬೇಕಷ್ಟೆ. ಹಾಗಾಗಿ 100 ಪ್ರತಿಶತ ಆಸನಗಳು ತುಂಬಲು ಚಿತ್ರಮಂದಿರಗಳಿಗೆ ಅವಕಾಶ ಸಿಕ್ಕ ಕೊಡಲೇ ಕನ್ನಡ ಸೇರಿದಂತೆ ಇತರ ಎಲ್ಲಾ ಭಾಷೆಗಳಲ್ಲಿಯೂ ಒಟ್ಟಿಗೆ ಕೆಜಿಎಫ್ 2 ಚಿತ್ರವನ್ನು ಬಿಡುಗಡೆ ಮಾಡಲಿದೆ ಚಿತ್ರ ತಂಡ.