ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಜಾತಿ ಮೀಸಲಾತಿಯ ಕುರಿತು ಮಾತನಾಡಿ ಜಾತಿ ಮೀಸಲಾತಿ ತೆಗೆದು ಈ ರೀತಿ ಮಾಡಿ ಎಂದ ಮುಖ್ಯಮಂತ್ರಿ ಚಂದ್ರು, ಏನಂತೆ ಗೊತ್ತೇ??

3

ನಮಸ್ಕಾರ ಸ್ನೇಹಿತರೇ ಮೀಸಲಾತಿ ಎನ್ನುವುದು ದೇಶದಾದ್ಯಂತ ಸದಾ ಚರ್ಚೆಯಲ್ಲಿಯೇ ಇರುವ ವಿಷಯ. ಯಾರಿಗೆ ಮೀಸಲಾತಿ ನಿಡಬೇಉ ನೀಡಬಾರದು ಎಂದು ಎಲ್ಲಾ ವರ್ಗದ ಜನರಲ್ಲಿಯೂ ಗೊಂದಲಗಳು ಇದ್ದೇ ಇದೆ ಇನ್ನು ಇದಕ್ಕೆ ತಕ್ಕ ಹಾಗೆ ಸರ್ಕಾರದ ನಿಯಮಗಳೂ ಕೂಡ ಕೆಲವು ಗೊಂದಲಗಳನ್ನು ಸೃಷ್ಟಿಸಿವೆ. ಹಾಗೆಯೇ ಕೆಲವರು ಜಾತಿ ಮೀಸಲಾತಿಯಿಂದ ಪ್ರತಿಭೆ ಅಥವಾ ಸಾಮರ್ಥ್ಯದ ವ್ಯರ್ಥವಾಗುತ್ತಿದೆ ಎಂಬ ವಾದಗಳೂ ನಮ್ಮಲ್ಲಿವೆ. ಇದಕ್ಕೆ ಪೂರಕವಾಗಿ ನಟ ಮುಖ್ಯಮಂತ್ರಿ ಚಂದ್ರು ಕೂಡ ಹೇಳಿಕೆಯೊಂದನ್ನು ನೀಡಿದ್ದಾರೆ.

ಅತೀ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಗೌರವಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ತುಮಕೂರಿನಲ್ಲಿ ಮಾತನಾಡಿ ’ಸರ್ಕಾರ ಜಾತಿ ಆಧಾರದ ಮೇಲೆ ಮೀಸಲಾತಿಯನ್ನು ನೀಡಬಾರದು. ಆಯಾ ಜಾತಿಯಲ್ಲಿ ನಿಜವಾದ ಬಡವರನ್ನು ಹುಡುಕಿ ಅವರಿಗೆ ಮೀಸಲಾತಿ ನೀಡಬೇಕು. ಅವರ ಆರ್ಥಿಕತೆಯ ಆಧಾರದ ಮೇಲೆ ಮೀಸಲಾತಿಯನ್ನು ಗೊತ್ತುಪಡಿಸಬೇಕು. ಆರ್ಥಿಕ, ಸಾಮಾಜಿಕ ಗಣತಿಯ ವರದಿ ಮಂಡನೆ ಮಾಡಿ ಆ ಮೂಲಕ ನಿಜವಾಗಿ ಅಗತ್ಯ ಇರುವವರಿಗೆ ಮೀಸಲಾತಿ ಸೇರಬೇಕು’ ಎಂದು ನುಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕನಾಥ್ ಕೂಡ ಮಾತನಾಡಿ, ‘ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಲ್ಲಿ ಎಲ್ಲಾ ಕಡೆ ಸಭೇ ನಡೆಸುತ್ತಿದ್ದೇವೆ. ತುಮಕೂರಿನಲ್ಲಿ ಇದು ಎರಡನೇ ಸಭೆ. ಆರ್ಥಿಕ ಸದೃಢತೆ ಇರುವ ಸಮುದಾಯ 2ಎ ಗೆ ಬರಬಾರದು ಎಂಬುದು ನಮ್ಮ ಒತ್ತಾಯ. 2 ಎಯಲ್ಲಿ ಈ ಬಲಿಷ್ಠ ಸಮುದಾಯಗಳು ಸೇರುವುದರಿಂದ 102 ಜಾತಿ ಮತ್ತು ಪ್ರವರ್ಗ 1 ರಲ್ಲಿ 95 ಜಾತಿಗಳಿಗೆ ಮೋಸ ಆಗುತ್ತದೆ. ಅನೇಕ ಅತಿ ಹಿಂದುಳಿದ ಸಮುದಾಯಗಳಿಗೆ ಇನ್ನೂ ಶೇ. 1ನಷ್ಟು ಕೂಡ ಮೀಸಲಾತಿ ಸಿಕ್ಕಿಲ್ಲ. ಹಾಗಾಗಿ ಈ ಸಮುದಾಯಗಳಿಗೆ ಮೋಸವಾಗಿದೆ’ ಎಂದರು.

ಮಾತು ಮುಂದುವರೆಸಿದ ದ್ವಾರಕನಾಥ್ ಅವರು ಶಾಸನ ಸಭೆ ಮತ್ತು ಲೋಕ‌ಸಭೆಯಲ್ಲಿ ಕೇವಲ ಎಸ್ಸಿ ಎಸ್ಟಿಗೆ ಮಾತ್ರ ಮೀಸಲಾತಿ ಕೊಡಲಾಗಿದೆ. ಎಲ್ಲಾ ಹಿಂದುಳಿದ ವರ್ಗಗಳಿಗೂ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಕೂಡ ಮೀಸಲಾತಿ ನೀಡಬೇಕು ಎಂದೂ ಕೂಡ ಈ ಮೂಲಕ ಒತ್ತಾಯಿಸುತ್ತೇವೆ. ಹಾಗೆಯೇ ಬಲಿಷ್ಠ ಪಂಚಮ ಸಾಲಿಗರಿಗೆ 2ಎ ಯಲ್ಲಿ ಮೀಸಲಾತಿ ಕೊಡಬಾರದು ಎಂಬುದು ನಮ್ಮ ಆಗ್ರಹ. 2015 ರಲ್ಲೇ ಜಾತಿ ಗಣತಿ ವರದಿಯಾಗಿದ್ದರೂ ಕೂಡ ಅಂದಿನ ಕಾಂಗ್ರೆಸ್ ಸರ್ಕಾರವಾಗಲಿ ಅಥವಾ ಇಂದು ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವಾಗಲಿ ಈ ವರದಿಯನ್ನು ಬಹಿರಂಗ ಪಡಿಸಿಲ್ಲ. ಈ ವರದಿಯನ್ನು ಶೀರ್ಘವೇ ತಿಳಿಸುವಂತೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.