ಕೊನೆಗೂ ತನ್ನ ನಿರ್ಧಾರ ಬದಲಿಸದ ದ್ರಾವಿಡ್, ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ, ಏನು ಗೊತ್ತಾ??

ಕೊನೆಗೂ ತನ್ನ ನಿರ್ಧಾರ ಬದಲಿಸದ ದ್ರಾವಿಡ್, ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ, ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೇಟ್ ತಂಡದ ಇತಿಹಾಸದಲ್ಲಿಯೇ ದಿ ವಾಲ್ ಎಂದು ಹೆಸರು ಪಡೆದವರು ರಾಹುಲ್ ದ್ರಾವಿಡ್. ಅದೆಷ್ಟೋ ಪಂದ್ಯಗಳಲ್ಲಿ ಭಾರತ ತಂಡವನ್ನ ಸೋಲಿನಿಂದ ಪಾರು ಮಾಡಿದ್ದಲ್ಲದೇ, ಗೆಲುವಿನ ದಡ ಹತ್ತಿಸಿದವರು. ಅದಲ್ಲದೇ ನಿವೃತ್ತಿಯ ನಂತರ ಭಾರತ ಎ, ಭಾರತ ಅಂಡರ್ 19 ಹಾಗೂ ಎನ್.ಸಿ.ಎ ಮುಖ್ಯಸ್ಥರಾಗಿದ್ದಾರೆ. ಭಾರತ ಕ್ರಿಕೇಟ್ ತಂಡದ ಬೆಂಚ್ ಸ್ಟ್ರೆಂತ್ ಉತ್ತಮಗೊಳಿಸುವಲ್ಲಿ ಇವರ ಸ್ಥಾನ ಅತಿ ಮಹತ್ವದಾಗಿತ್ತು.

ಇತ್ತಿಚೆಗೆ ನಡೆದ ಶ್ರೀಲಂಕಾ ವಿರುದ್ದ ಸರಣಿಯಲ್ಲಿ ಭಾರತ ಕ್ರಿಕೇಟ್ ತಂಡದ ಕೋಚ್ ಸಹ ಆಗಿದ್ದರು. ಭಾರತ ತಂಡ ಶ್ರೀಲಂಕಾ ವಿರುದ್ದ ಸರಣಿ ಗೆಲ್ಲುವಲ್ಲಿ ಹಾಗೂ ಎಲ್ಲಾ ಪ್ರತಿಭೆಗಳಿಗೂ ಅವಕಾಶ ಸಿಗುವಂತೆ ಮಾಡಿದ್ದರು. ಹಾಗಾಗಿ ರವಿಶಾಸ್ತ್ರಿ ನಂತರ ಭಾರತ ತಂಡದ ಮುಖ್ಯ ಕೋಚ್ ಹುದ್ದೆಯನ್ನು ರಾಹುಲ್ ದ್ರಾವಿಡ್ ರವರೇ ನಿರ್ವಹಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಗ್ರಹ ಕೇಳಿ ಬಂದಿತ್ತು. ಆದರೇ ರಾಹುಲ್ ದ್ರಾವಿಡ್ ಈಗ ಅವರ ಅಭಿಮಾನಿಗಳಿಗೆ ಕಹಿ ಎನ್ನುವ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.

ಹೌದು ರಾಹುಲ್ ದ್ರಾವಿಡ್ ಈಗ ಪುನಃ ಎನ್.ಸಿ.ಎ ಮುಖ್ಯಸ್ಥನ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮೂರು ವರ್ಷದ ಹಿಂದೆ ರಾಹುಲ್ ದ್ರಾವಿಡ್ ರನ್ನ ಬಿಸಿಸಿಐ ಈ ಹುದ್ದೆಗೆ ನೇಮಿಸಿತ್ತು. ಅವಧಿ ಮುಗಿಯುತ್ತಿರುವ ಹಿನ್ನಲೆಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ತಾವು ಎನ್.ಸಿ.ಎ ಮುಖ್ಯಸ್ಥ ಹುದ್ದೆಯಲ್ಲಿಯೇ ಮುಂದುವರೆಯುವುದಾಗಿ ರಾಹುಲ್ ದ್ರಾವಿಡ್ ಸೂಚ್ಯವಾಗಿ ತಿಳಿಸಿದ್ದಾರೆ. ಈ ಮೂಲಕ ತಾವು ಇದೇ ನವೆಂಬರ್ ನಲ್ಲಿ ರವಿಶಾಸ್ತ್ರಿಯವರಿಂದ ತೆರವಾಗಲಿರುವ ಭಾರತೀಯ ಕ್ರಿಕೇಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಆಕಾಂಕ್ಷಿಯಲ್ಲ ಎಂಬುದನ್ನ ಹೇಳಿದ್ದಾರೆ. ರವಿಶಾಸ್ತ್ರಿ ನಂತರ ರಾಹುಲ್ ದ್ರಾವಿಡ್ ರನ್ನ ಭಾರತೀಯ ಕ್ರಿಕೇಟ್ ತಂಡದ ಮುಖ್ಯ ಕೋಚ್ ಹುದ್ದೆಯಲ್ಲಿ ನೋಡಬೇಕು ಎಂಬ ಅಭಿಮಾನಿಗಳ ಆಸೆಗೆ ನಿರಾಸೆಯಾಗಿದೆ. ಇನ್ನು ರವಿಶಾಸ್ತ್ರಿ ಸಹ ಮತ್ತೊಂದು ಅವಧಿಗೆ ಮುಂದುವರೆಯಲು ತಮಗೆ ಇಷ್ಟವಿಲ್ಲ ಎಂದು ಹೇಳಿದ್ದಾರಂತೆ. ಹಾಗಾಗಿ ಭಾರತಕ್ಕೆ ನೂತನ ಕೋಚ್ ನೇಮಕವಾಗುವುದು ಬಹುತೇಖ ಖಚಿತವಾಗಿದೆ. ಭಾರತ ತಂಡದ ಮುಂದಿನ ಕೋಚ್ ಯಾರಾಗಬೇಕು ಎಂಬ ನಿಮ್ಮ ಮುಕ್ತ ಅಭಿಪ್ರಾಯವನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.