ಕೊರೊನ, ಆರ್ಥಿಕತೆ, ಬೆಲೆ ಏರಿಕೆ ನಡುವೆ ಮುಂದಿನ ಪ್ರಧಾನಿ ಯಾರಾಗಬೇಕು ಎಂದು ನಡೆದ ಸಮೀಕ್ಷೆಯಲ್ಲಿ ಜನರ ಉತ್ತರವೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ 2019ರಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರ ಹಿಡಿದ ಪ್ರಧಾನಮಂತ್ರಿಯ ಗೆಲುವಿನ ನಾಗಾಲೋಟ ಇನ್ನು ಮುಂದುವರೆಯುತ್ತಲೇ ಇದೆ. ಸದ್ಯ ಮುಂದಿನ ಲೋಕಸಭಾ ಚುನಾವಣೆ ಇರುವುದು 2024 ರಲ್ಲಿ. ಅಂದರೇ ಇನ್ನು ಮೂರು ವರ್ಷ. ಆದರೇ ಈಗಲೇ ಸಮೀಕ್ಷೆ ನಡೆಸುವ ಸಂಸ್ಥೆಯೊಂದು ಮುಂದಿನ ಪ್ರಧಾನಿ ಯಾರಾಗಬೇಕು ಎಂಬ ಸಮೀಕ್ಷೆಯೊಂದನ್ನ ನಡೆಸಿತು. ಭಾರತದ ಜನತೆ ಈ ಭಾರಿ ಸಹ ಅಚ್ಚರಿಯ ಆಯ್ಕೆ ಮಾಡಿದೆ.

ದಿನೇ ದಿನೇ ಏರುತ್ತಿರುವ ಪೆಟ್ರೋಲ್ – ಡಿಸೇಲ್ ಹಾಗೂ ದಿನಬಳಕೆ ವಸ್ತುಗಳಿಂದ ಜನಜೀವನ ಅಸ್ತ್ಯ ವ್ಯಸ್ತವಾಗಿದೆ. ಸಹಜವಾಗಿಯೇ ನರೇಂದ್ರ ಮೋದಿ ಸರ್ಕಾರದ ಮೇಲೆ ಆಡಳಿತ ವಿರೋಧಿ ಇದೆ , ಇದು ಅವರಿಗೆ ತೀವ್ರ ಹಿನ್ನಡೆಯಾಗಲಿದೆ ಎಂದು ಭಾವಿಸಲಾಗಿತ್ತು. ಆದರೇ ಜನ ಸಮೀಕ್ಷೆಯಲ್ಲಿ ನೀಡಿದ ಉತ್ತರ ಇದಕ್ಕೆ ಸಂಪೂರ್ಣ ತದ್ವಿರುದ್ದವಾಗಿದೆ.

ಹೌದು ಪ್ರಸಿದ್ದ ವಾರ್ತಾ ವಾಹಿನಿಯಾದ ಇಂಡಿಯಾ ಟುಡೇ ಸಮೂಹವು ಜನರ ನಾಡಿ ಮಿಡಿತವನ್ನು ಅರಿಯಲು ಮೂಡ್ ಆಫ್ ದ ನೇಷನ್ ಎಂಬ ಸಮೀಕ್ಷೆಯನ್ನು ನಡೆಸಿತ್ತು. ಈ ಸಮೀಕ್ಷೆ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಶೇ 24 ರಷ್ಟು ಜನ ಒಪ್ಪಿದ್ದಾರೆ. ಅಚ್ಚರಿಯೆಂಬಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರನ್ನು ಶೇ 11 ರಷ್ಟು ಜನ ಒಪ್ಪಿದ್ದಾರೆ.

ಇನ್ನು ಕಾಂಗ್ರೇಸ್ ನ ಅಧಿನಾಯಕ ರಾಹುಲ್ ಗಾಂಧಿ ಪರ ಶೇಕಡಾ 10 ರಷ್ಟು ಜನ ಒಲವು ತೋರಿದ್ದರೇ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪರ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರ ಶೇಕಡಾ 8 ರಷ್ಟು ಜನ ಒಲವು ತೋರಿದ್ದಾರೆ. ಇನ್ನು ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಪರ ಶೇಕಡಾ 4 ರಷ್ಟು ಜನ ಒಲವು ತೋರಿದ್ದಾರೆ. ಒಟ್ಟಿನಲ್ಲಿ ಆಡಳಿತ ವಿರೋಧಿ ಅಲೆಯ ನಡುವೆಯೂ ಮೋದಿ ಮತ್ತೊಮ್ಮೆ ಜನನಾಯಕರಾಗಿ ಹೊರಹೊಮ್ಮಿರುವುದು ಅಚ್ಚರಿಯ ಸಂಗತಿಯಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav