ರೈತರಿಗಾಗಿ ಹೊಸ ಯೋಜನೆ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ, ಇನ್ನು ಮುಂದೆ ಯಾರು ಬೆಳೆದ ಬೆಳೆ ವ್ಯರ್ಥವೇ ಆಗುವುದಿಲ್ಲವೇ??
ರೈತರಿಗಾಗಿ ಹೊಸ ಯೋಜನೆ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ, ಇನ್ನು ಮುಂದೆ ಯಾರು ಬೆಳೆದ ಬೆಳೆ ವ್ಯರ್ಥವೇ ಆಗುವುದಿಲ್ಲವೇ??
ನಮಸ್ಕಾರ ಸ್ನೇಹಿತರೇ ಜೈ ಜವಾನ್, ಜೈ ಕಿಸಾನ್ ಎಂಬುದು ನಮ್ಮ ದೇಶದ ಘೋಷವಾಕ್ಯ. ರೈತರೇ ನಮ್ಮ ದೇಶದ ಬೆನ್ನೆಲುಬು ಎಂಬುದು ಸಹ ಆಗಾಗ ಕೇಳಿ ಬರುತ್ತಿರುತ್ತದೆ. ಈಗ ದೇಶದ ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ಹೆಸರಿನ ಯೋಜನೆಯಡಿಯಲ್ಲಿ ಪ್ರತಿ ವರ್ಷ ಆರು ಸಾವಿರ ರೂಪಾಯಿಯನ್ನು ನೇರವಾಗಿ ರೈತರ ಅಕೌಂಟ್ ಗೆ ಹಾಕುತ್ತಾ ಬರುತ್ತಿರುವುದನ್ನ ನೀವು ನೋಡಿದ್ದಿರಿ. ಈಗ ರೈತರ ಬೆಳೆಗಳಿಗಾಗಿ ಮೋದಿ ಸರ್ಕಾರ ಹೊಸದೊಂದು ಯೋಜನೆಯನ್ನು ಘೋಷಿಸಿದೆ.
ಆರಂಭದ ದಿನಗಳಲ್ಲಿ ವಿಮಾನಯಾನ ಉತ್ತೇಜನ ಸಲುವಾಗಿ ಕೆಲವು ಜಿಲ್ಲಾ ಕೇಂದ್ರಗಳಿಗೂ ಸಹ ವಿಮಾನ ನಿಲ್ದಾಣಗಳನ್ನು ಘೋಷಿಸಿತ್ತು. ಆ ಮೂಲಕ ಈಗ ಉಡಾನ್ ಯೋಜನೆಯಡಿ ಹಲವಾರು ಜಿಲ್ಲಾ ಕೇಂದ್ರಗಳಿಗೆ ನೀವು ಈಗ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ. ಸದ್ಯ ಆ ಉಡಾನ್ ಯೋಜನೆಯ ಯಶಸ್ಸನ್ನೇ ಇಟ್ಟುಕೊಂಡು ಈಗ ಮೋದಿ ಸರ್ಕಾರ ಕೃಷಿ ಉಡಾನ್ ಎಂಬ ಯೋಜನೆಯೊಂದನ್ನು ಹಮ್ಮಿಕೊಂಡಿದೆ.
ಈ ಯೋಜನೆಯಲ್ಲಿ ರೈತರು ತಾವು ಬೆಳೆದ ಉತ್ಪನ್ನಗಳನ್ನ ಅತ್ಯಂತ ಕಡಿಮೆ ಬೆಲೆಯಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಬಹುದಾಗಿದೆ. ಇದು ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸಿಕೊಡುವುದಲ್ಲದೇ, ಉತ್ತಮ ಧಾರಣೆಯನ್ನು ಸಹ ಪಡೆಯುವಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತೋಟಗಾರಿಕಾ ಇಲಾಖೆಗಳಿಗೆ ಸುತ್ತೋಲೆ ನೀಡಿರುವ ಸರ್ಕಾರ, ದೇಶದ ಎಲ್ಲಾ ವಿಮಾನ ಮಾರ್ಗಗಳನ್ನು ಸಹ ಪ್ರಕಟಿಸಿದೆ.
ಬೆಂಗಳೂರು ನಗರ ಹಾಗೂ ಗ್ರಾಮಾಂತರದ ಸುತ್ತಮುತ್ತ ಫ್ಲೋರಿ ಕಲ್ಚರ್ ನಡಿಯಲ್ಲಿ ಬೆಳೆಯುತ್ತಿರುವ ಹಲವು ತಳಿಯ ವಿಶೇಷ ಹೂವುಗಳು, ತರಕಾರಿಗಳು ಈಗಾಗಲೇ ವಿದೇಶಕ್ಕೆ ರಫ್ತಾಗುತ್ತಿವೆ. ರಫ್ತಿನ ಖರ್ಚು ಕಡಿಮೆ ಆದಷ್ಟು ರೈತರಿಗೆ ಹೆಚ್ಚಿನ ಲಾಭ ಸಿಗಲಿದೆ ಎಂದು ಹೇಳಲಾಗುತ್ತಿದೆ. ದಾವಣಗೆರೆ ಸಹ ಕೃಷಿ ಕೇಂದ್ರಿತ ಜಿಲ್ಲೆಯಾಗಿದ್ದು, ಇಲ್ಲಿ ಬೆಳೆಯುವ ವಿವಿಧ ರೀತಿಯ, ಹೂವು, ತರಕಾರಿ, ಮೆಣಸು, ಬೇಳೆಕಾಳು ಹೀಗೆ ಎಲ್ಲವನ್ನೂ ರಫ್ತು ಮಾಡಲು ಕ್ಲಸ್ಟರ್ ನ್ನು ನಿರ್ಮಿಸಲು ಸಿದ್ದತೆ ನಡೆಸುತ್ತಿದೆ.
ಕೃಷಿ ಉತ್ಪನ್ನಗಳು ಇಷ್ಟು ದಿನದವರೆಗೆ ಹಡಗಿನ ಮೂಲಕ ರಫ್ತಾಗುತ್ತಿದ್ದವು. ಆದರೇ ಅದಕ್ಕೆ ಸಂಸ್ಕರಣೆಯ ಖರ್ಚು ಸಹ ಸೇರಿ ಉತ್ಪನ್ನಗಳು ದುಬಾರಿಯಾಗಿದ್ದವು. ಆದರೇ ಈಗಿನ ಕೃಷಿ ಉಡಾನ್ ಯೋಜನೆಯಡಿಯಲ್ಲಿ ರೈತರ ಉತ್ಪನ್ನಗಳು ನೇರವಾಗಿ ವಿಮಾನದ ಮೂಲಕ ಬೆಂಗಳೂರಿನಿಂದ ಸಿಂಗಾಪುರ ಸೇರಲಿವೆ. ಅದಲ್ಲದೇ ಬ್ಯಾಂಕಾಕ್, ಎಜೆಲ್, ದಿಲ್ಲಿ, ಕೊಚ್ಚಿನ್ ಹೀಗೆ ಎಲ್ಲಾ ಕಡೆಗಳಿಗೂ ಕಡಿಮೆ ಸಮಯದಲ್ಲಿ ಸೇರಲಿವೆ. ಮೋದಿ ಸರ್ಕಾರದ ಈ ಮಹಾತ್ವಾಕಾಂಕ್ಷೆಯ ಯೋಜನೆ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.