ಕೊನೆಗೂ ಮತ್ತೆ ಆರಂಭವಾಗಿತಿದೆ ಪ್ರೊ ಕಬ್ಬಡಿ, ಕ್ಯಾಪ್ಟನ್ ಕೈ ಬಿಟ್ಟ ಬೆಂಗಳೂರು ಬುಲ್ಸ್, ಉಳಿದುಕೊಂಡವರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಬ್ಬಡ್ಡಿ ದೇಸಿ ನಾಡಿನ ಆಟ. ಗಂಡು ಮೆಟ್ಟಿದ ಮಕ್ಕಳ ಆಟ. ಇನ್ನೇನು ಈ ಗ್ರಾಮೀಣ ಕ್ರೀಡೆ ನಶಿಸಿಹೋಗಲಿದೆ ಎನ್ನುತ್ತಿದ್ದಾಗಲೇ ಬಂದಿದ್ದು ಪ್ರೋ ಕಬ್ಬಡ್ಡಿ ಲೀಗ್. ಕಬ್ಬಡ್ಡಿ ಆಟಕ್ಕೆ ಕಾರ್ಪೋರೇಟ್ ಶೈಲಿಯ ಟಚ್ ನೀಡಿ, ಪ್ರತಿ ರಾತ್ರಿ ಸಂಪೂರ್ಣ ಭಾರತವೇ ಒಂದು ಕಡೆ ಕೂತು ದೇಸಿ ಕ್ರೀಡೆ ಕಬ್ಬಡ್ಡಿಯನ್ನ ಆಸ್ವಾದಿಸುವ ಹಾಗೆ ಮಾಡಿತ್ತು. ಅದಲ್ಲದೇ ಕಬ್ಬಡ್ಡಿ ಆಟಕ್ಕೆ ಪ್ರೋತ್ಸಾಹ ಹುಟ್ಟುವಂತೆ ಮಾಡಿತು. ಸಾವಿರಾರು ಕಬ್ಬಡ್ಡಿ ಆಟಗಾರಿಗೆ ಟರ್ನಿಂಗ್ ಪಾಯಿಂಟ್ ನೀಡಿ, ಭಾರತ ಕಬ್ಬಡ್ಡಿಯಲ್ಲಿ ವಿಶ್ವ ಚಾಂಪಿಯನ್ ಆಗುವ ಹಾಗೆ ಮಾಡಿತು.

ಕಳೆದ ವರ್ಷ ಕೋರೋನಾ ಕಾರಣ ಸ್ತಭ್ದವಾಗಿದ್ದ ಪ್ರೋ ಕಬ್ಬಡ್ಡಿ ಲೀಗ್ ಈಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಐಪಿಎಲ್ ಮಾದರಿಯಲ್ಲಿ ಆಗಸ್ಟ್ 29 ರಿಂದ ಆಗಸ್ಟ್ 31ರವರೆಗೆ ಆಟಗಾರರ ಹರಾಜು ನಡೆಯಲಿದೆ. ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ 12 ತಂಡಗಳು ತಮ್ಮ ಬಳಿ ಆರು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶವನ್ನು ನೀಡಲಾಗಿತ್ತು. ಆ ರೀತಿಯಾಗಿ ತಂಡಗಳು ತಮ್ಮ ಬಳಿ ಆರು ಸ್ಟಾರ್ ಆಟಗಾರರನ್ನು ಉಳಿಸಿಕೊಂಡು ಉಳಿದವರನ್ನು ತಂಡದಿಂದ ಕೈ ಬಿಟ್ಟಿದೆ. ಈಗ ಉಳಿದ ಆರು ಆಟಗಾರರನ್ನು ತಂಡಗಳು ಹರಾಜಿನಲ್ಲಿ ಖರೀದಿಸಬೇಕಾಗಿದೆ.

ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ಸ್ಟಾರ್ ರೈಡರ್ ಪವನ್ ಶೇರಾವತ್ ಸೇರಿ ಆರು ಆಟಗಾರರನ್ನು ಉಳಿಸಿಕೊಂಡಿದೆ. ಆದರೇ ನಾಯಕ ರೋಹಿತ್ ಕುಮಾರ್ ರನ್ನು ಮಾತ್ರ ತಂಡದಿಂದ ಕೈ ಬಿಟ್ಟಿದೆ. ಇನ್ನು ಮೂರು ಭಾರಿ ಪ್ರೋ ಕಬ್ಬಡ್ಡಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಪಾಟ್ನಾ ಪೈರೆಟ್ಸ್ ತಂಡವು ತನ್ನ ತಂಡದ ಸ್ಟಾರ್ ಆಟಗಾರ ಪ್ರದೀಪ್ ನಾರ್ವಾಲ್ ರವರನ್ನು ಕೈ ಬಿಟ್ಟಿದೆ. ಈ ಭಾರಿ ಹರಾಜಿನಲ್ಲಿ ಪ್ರದೀಪ್ ನಾರ್ವಾಲ್ ರವರಿಗೆ ಭರ್ಜರಿ ಬೇಡಿಕೆ ಬರುವ ಸಂಭವವಿದೆ. ಇನ್ನು ಅಭಿಷೇಕ್ ಬಚ್ಚನ್ ಒಡೆತನದ , ಮೊಟ್ಟ ಮೊದಲ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ಮೂವರು ಆಟಗಾರರರನ್ನಷ್ಟೇ ರಿಟೈನ್ ಮಾಡಿಕೊಂಡಿದೆ. ಪ್ರೋ ಕಬ್ಬಡ್ಡಿ ಚಾಂಪಿಯನ್ ಶಿಪ್ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav