ಕರುನಾಡ ವಾಣಿ
ಇದು ನಿಮ್ಮ ಧ್ವನಿ

ರಾಜ್ ಕುಮಾರ್, ವಿಷ್ಣು ದಾದಾ ತಿರಸ್ಕರಿಸಿದ ಚಿತ್ರ ನಿರ್ಮಾಣ ಮಾಡಿ ಗೆದ್ದು ಇತಿಹಾಸ ಸೃಷ್ಟಿಸಿದ ಆ ನಟ ಯಾರು ಗೊತ್ತೇ??

ರಾಜ್ ಕುಮಾರ್, ವಿಷ್ಣು ದಾದಾ ತಿರಸ್ಕರಿಸಿದ ಚಿತ್ರ ನಿರ್ಮಾಣ ಮಾಡಿ ಗೆದ್ದು ಇತಿಹಾಸ ಸೃಷ್ಟಿಸಿದ ಆ ನಟ ಯಾರು ಗೊತ್ತೇ??

1,461

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಆಗಿಹೋದ ಹಲವು ನಾಯಕ ನಟರನ್ನು ನಾವು ಇಂದಿಗೂ ನೆನಪಿಸಿಕೊಳ್ಳುತ್ತೇವೆ. ಅವರು ಅಭಿನಯಿಸಿದ ಸಿನಿಮಾ, ಅಥವಾ ಯಾವುದಾದರೂ ಸಿನಿಮಾದ ಹಾಡಿನ ಮೂಲಕ ಇಂದಿಗೂ ನಮ್ಮ ನಡುವೆ ಜೀವಂತವಾಗಿದ್ದಾರೆ. ಅಂಥವರಲ್ಲಿ ಡಾ. ರಾಜ ಕುಮಾರ್ ಹಾಗೂ ಡಾ. ವಿಷ್ಣುವರ್ಧನ್ ಕೂಡ ಪ್ರಮುಖರು. ಈ ನಟರ ಅಭಿನಯವನ್ನು ಜನರು ಎಷ್ಟು ಇಷ್ಟಪಡುತ್ತಿದ್ದರೆಂದರೆ ಇವರು ನಟಿಸಿದ ಭಾಗಶಃ ಎಲ್ಲಾ ಚಿತ್ರಗಳೂ ಸೂಪರ್ ಹಿಟ್ ಆಗಿದೆ. ಇನ್ನು ಸಾಕಷ್ಟು ನಿರ್ದೇಶಕರು, ನಿರ್ಮಾಪಕರು ಈ ನಟರಿಗೆ ಸರಿ ಹೊಂದುವಂಥ ಕಥೆಯನ್ನು ಸಿದ್ಧಪಡಿಸುತ್ತಿದ್ರು. ಅಥವಾ ಇಂಥ ಕಥೆಗೆ ಇವರೇ ನಾಯಕರಾಗಬೇಕು ಎಂದು ಅವರ ಅವ್ದಿ ಸಿಗುವವರೆಗೂ ಕಾಯ್ತಾ ಇದ್ರು.

ಒಮ್ಮೆ ವರನಟ ಡಾ. ರಾಜಕುಮಾರ್ ಹಾಗೂ ಸಾಹಸ ಸಿಂಗ ಡಾ. ವಿಷ್ಣುವರ್ಧನ್ ಅವರು ಇಬ್ಬರೂ ನಟಿಸುವುದಿಲ್ಲ ಎಂದ ರೋಚಕ ಕಥೆಯೊಂದನ್ನು ನಾವಿಂದು ಹೇಳುತ್ತೇವೆ. ಹೌದು ಸ್ನೇಹಿತರೆ, 1983 ರಲ್ಲಿ ಬಿಡುಗಡೆಗೊಂಡ, ರೆಬಲ್ ಸ್ಟಾರ್ ಅಂಬರೀಶ ಹಾಗೂ ಅಂಬಿಕಾ ಜೋಡಿ ಅಭಿನಯದ ’ಚಕ್ರವ್ಯೂಹ’ ಚಿತ್ರವನ್ನು ನೀವೆಲ್ಲ ನೋಡೆ ಇರುತ್ತೀರಿ. ಈ ಚಿತ್ರದ ನಿರ್ಮಾಣದ ಹಿಂದೆ ಇದೆ ಒಂದು ಕಥೆ.

ಚಕ್ರವ್ಯೂಹ ಸಿನಿಮಾ ಸ್ಕ್ರಿಪ್ಟ್ ಓದಿ ರಾಜ ಕುಮಾರ್ ಹಾಗೂ ವಿಷ್ಣುವರ್ಧನ್ ಅದರಲ್ಲಿ ಅಭಿನಯಿಸಲು ನಿರಾಕರಿಸಿದರಂತೆ. ಆದರೆ ಕೊನೆಗೂ ಈ ಚಿತ್ರವನ್ನು ನಿರ್ಮಾಣ ಮಾಡಿ ಸೂಪರ್ ಹಿಟ್ ಚಿತ್ರವಾಗಿಸಿಸ್ಸು ’ರವಿಮಾಮ’ ರವಿಚಂದ್ರನ್ ಅವರು. ಚಿ. ಉದಯಶಂಕರ್ ಅವರು ಎಮ್. ಪಿ ಸುಂದರ್ ಬಳಿ ಇರುವ ಒಂದು ಸುಂದರವಾದ ಕಥೆಯನ್ನು ಕೇಳು ಎಂದರಂತೆ ಈ ಕಥೆಯನ್ನು ಕೇಳಿ ಮೆಚ್ಚಿದ ರವಿಚಂರನ್ ಅದನ್ನು ನಿರ್ಮಾಣ ಮಾಡಲು ಮುಂದಾದರು. ಆದರೆ ರವಿಚಂದ್ರನ್ ಅವರ ತಂದೆ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ನಂತರ ನಟ ರವಿಚಂದ್ರನ್ ತಂದೆಯನ್ನು ಒಪ್ಪಿಸಿ ಈ ಚಿತ್ರ ಗೆಲ್ಲಿಸುವ ಭರವಸೆ ನೀಡಿ ನಟ ಅಂಬರೀಶ್ ಹಾಗೂ ನಟಿ ಅಂಬಿಕಾ ಅವರ ಅಭಿನಯದಲ್ಲಿ ’ಚಕ್ರವ್ಯೂಹ’ ಸಿನಿಮಾವನ್ನು ನಿರ್ಮಾಣ ಮಾಡಿಯೇ ಬಿಟ್ಟರು. ಈ ಚಿತ್ರ ಉತ್ತಮ ಯಶಸ್ಸನ್ನು ಕಂಡಿತು. ಈ ರೋಚಕ ಕಥೆಯನ್ನು ಸ್ವತಃ ರವಿಚಂದ್ರನ್ ಅವರೇ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು.