ಸ್ವಂತ ಅಮ್ಮನನ್ನು ಕ್ಷಮಿಸದ ರೋಹಿಣಿ ಸಿಂಧೂರಿ ಅಂದು ಪೊಲೀಸರು ಫೋನ್ ಮಾಡಿದಾಗ ಹೇಳಿದ್ದೇನು ಗೊತ್ತೆ??

ಸ್ವಂತ ಅಮ್ಮನನ್ನು ಕ್ಷಮಿಸದ ರೋಹಿಣಿ ಸಿಂಧೂರಿ ಅಂದು ಪೊಲೀಸರು ಫೋನ್ ಮಾಡಿದಾಗ ಹೇಳಿದ್ದೇನು ಗೊತ್ತೆ??

ನಮಸ್ಕಾರ ಸ್ನೇಹಿತರೇ ನಮ್ಮ ದೇಶದಲ್ಲಿ ಎಲ್ಲಾ ವ್ಯವಸ್ಥೆಗಳು ನಡೆಯುವುದು ಅಧಿಕಾರಿಗಳ ಮೇಲ್ವಿಚಾರಿಕೆಯಲ್ಲಿ. ಆದರೆ ಕೆಲಸಗಳು ಸರಿಯಾದ ರೂಪದಲ್ಲಿ ನಡೆಯಲು ಅಧಿಕಾರಿಗಳು ದಕ್ಷರಾಗಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ದಕ್ಷ ಅಧಿಕಾರಿಗಳ ಸಂಖ್ಯೆ ನಿಮಗೆ ಗೊತ್ತಿರೋ ಹಾಗೆ ತುಂಬಾ ವಿರಳ. ಒಂದೊ ಮೇಲಧಿಕಾರಿಗಳ ಒತ್ತಡಕ್ಕೆ ಮಣಿದು ಸೋಲುತ್ತಾರೆ ಇಲ್ಲವೇ ಅವರೇ ಹಣದ ಆಸೆಗಾಗಿ ಅಪ್ರಾಮಾಣಿಕ ಕೆಲಸವನ್ನು ಮಾಡಲು ಮುಂದಾಗುತ್ತಾರೆ. ಆದರೆ ಇವೆಲ್ಲರ ಮಧ್ಯೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ತಮ್ಮ ದಕ್ಷತೆಯಿಂದಲೇ ಕನ್ನಡಿಗರ ಮನಗೆದ್ದಂತಹ ಪ್ರಾಮಾಣಿಕ ಅಧಿಕಾರಿ ಎಂದರೆ ಅದು ರೋಹಿಣಿ ಸಿಂಧೂರಿ.

ಹೌದು ಸ್ನೇಹಿತರೆ ಮೊದಲ ಇವರು ತುಮಕೂರಿನಲ್ಲಿ ಕೆಲಸ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ನಂತರ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ದಕ್ಷತೆಯಿಂದ ತನ್ನ ಕಾರ್ಯವನ್ನು ನಿರ್ವಹಿಸಿದ್ದಾರೆ. ಆದರೆ ಇಲ್ಲಿನ ರಾಜಕಾರಣಿಗಳು ಕುತಂತ್ರದಿಂದಾಗಿ ಇವರು ಇಲ್ಲಿಂದ ವರ್ಗಾವಣೆಯಾಗುವಂತಾಯ್ತು. ಆದರೂ ಕೂಡ ಮೈಸೂರಿನ ಜನತೆ ಇವರನ್ನು ಬಿಟ್ಟುಕೊಡಲು ತಯಾರಿರಲಿಲ್ಲ ಅಷ್ಟರಮಟ್ಟಿಗೆ ಒಳ್ಳೆಯ ಕೆಲಸವನ್ನು ತಾನು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಮೈಸೂರು ಜನತೆಗೆ ಮಾಡಿದ್ದಾರೆ. ಇನ್ನು ಇವರು ಎಷ್ಟರಮಟ್ಟಿಗೆ ಕರ್ತವ್ಯ ನಿಷ್ಠರಾಗಿದ್ದಾರೆ ಎಂದರೆ ತಪ್ಪು ಮಾಡಿದ್ದಕ್ಕೆ ತಾಯಿಯನ್ನು ಕೂಡ ಬಿಟ್ಟಿರಲಿಲ್ಲ.

ಹೌದು ಸ್ನೇಹಿತರೆ ಒಮ್ಮೆ 144ರ ಕಾನೂನು ಜಾರಿಯಾಗಿದ್ದರೂ ಕೂಡ ನಟಿ ರೋಜಾ ರವರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ರೋಜಾ ರವರ ಜೊತೆಗೆ ರೋಹಿಣಿ ಸಿಂಧೂರಿ ಅವರ ತಾಯಿಯನ್ನು ಕೂಡ ಬಂಧಿಸಿದ್ದರು. ಆಗ ರೋಹಿಣಿ ಸಿಂಧೂರಿ ಅವರ ತಾಯಿ ತಾನು ಜಿಲ್ಲಾಧಿಕಾರಿಯ ತಾಯಿ ಎಂದು ಹೇಳಿದಾಗ ಅಲ್ಲಿನ ಪೊಲೀಸರು ರೋಹಿಣಿ ಸಿಂಧೂರಿ ಅವರಿಗೆ ಕರೆ ಮಾಡಿದರು. ಆಗ ರೋಹಿಣಿ ಸಿಂಧೂರಿ ಹೇಳಿದ ಮಾತು ಏನು ಗೊತ್ತಾ ಸ್ನೇಹಿತರೆ ಹೌದು ಅವರು ನನ್ನ ತಾಯಿಯೇ ನಾನು ಜಿಲ್ಲಾಧಿಕಾರಿಯೇ. ಆದರೆ ಅವರು ಕಾನೂನು ಬಾಹಿರ ತಪ್ಪನ್ನು ಮಾಡಿದರೆ ಅದಕ್ಕೆ ಸರಿಯಾದಂತಹ ಕ್ರಮವನ್ನು ಜರುಗಿಸಿ ನಂತರ ಬಿಡಿ ಎಂದು ಹೇಳಿದರು. ಇದು ನಾವು ರೋಹಿಣಿ ಸಿಂಧೂರಿ ಅವರು ಎಷ್ಟು ದಕ್ಷ ರಾಗಿದ್ದರು ಎಂದು ಹೇಳುವುದಕ್ಕೆ ಒಳ್ಳೆಯ ನಿದರ್ಶನ ಎಂದು ಹೇಳಬಹುದು.