ಫ್ಲಾಫ್ ಶೋ ನೀಡುತ್ತಿರುವ ಅಜಿಂಕ್ಯಾ ರಹಾನೆ ಸ್ಥಾನವನ್ನ ತುಂಬಬಲ್ಲ ಮೂವರು ಆಟಗಾರರು ಯಾರು ಗೊತ್ತೇ??

ಫ್ಲಾಫ್ ಶೋ ನೀಡುತ್ತಿರುವ ಅಜಿಂಕ್ಯಾ ರಹಾನೆ ಸ್ಥಾನವನ್ನ ತುಂಬಬಲ್ಲ ಮೂವರು ಆಟಗಾರರು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಜಿಂಕ್ಯಾ ರಹಾನೆ, ಭಾರತ ತಂಡದ ಟೆಸ್ಟ್ ಕ್ರಿಕೇಟ್ ನ ಹಾಲಿ ಉಪನಾಯಕ. ಆಸ್ಟ್ರೇಲಿಯಾದ ನೆಲದಲ್ಲಿಯೇ ಆಸ್ಟ್ರೇಲಿಯಾವನ್ನ ಮಣಿಸಿದ ತಂಡದ ನಾಯಕರಾಗಿದ್ದವರು. ಪ್ರತಿಭಾನ್ವಿತ ಬ್ಯಾಟ್ಸಮನ್ ಆಗಿದ್ದ ಅಜಿಂಕ್ಯಾ ಬ್ಯಾಟ್ ನಿಂದ ಈಗ ರನ್ನುಗಳ ಬರ ಆರಂಭವಾಗಿದೆ. ಆಸ್ಟ್ರೇಲಿಯಾ ನೆಲದಲ್ಲಿ ಒಂದು ಶತಕ, ನಂತರ ಇಂಗ್ಲೆಂಡ್ ನ ಭಾರತ ಪ್ರವಾಸದಲ್ಲಿ ದಾಖಲಾದ ಒಂದು ಅರ್ಧ ಶತಕ, ಇವೆರೆಡನ್ನ ಹೊರತು ಪಡಿಸಿದರೇ, ಆಡಿರುವ ಹನ್ನೆರೆಡು ಇನ್ನಿಂಗ್ಸ್ ಗಳಲ್ಲಿ ಅಜಿಂಕ್ಯಾ ರಹಾನೆ ಎರಡಂಕಿ ದಾಟಿದ್ದು ಬಹುತೇಖ ಕಡಿಮೆ.

ಈಗಾಗಲೇ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನಗಿಟ್ಟಿಸಲು ಯುವ ಆಟಗಾರರು ತೀವ್ರ ಪ್ರಯತ್ನ ನಡೆಸುತ್ತಿರುವ ಕಾರಣ ಮುಂಬರುವ ಪಂದ್ಯಗಳಿಂದ ಅಜಿಂಕ್ಯಾ ರಹಾನೆ ತಂಡದಿಂದ ಹೊರಹೋಗುವುದು ಹಾಗೂ ಉಪನಾಯಕನ ಪಟ್ಟ ಕಳೆದುಕೊಳ್ಳುವುದು ಬಹುತೇಖ ಖಚಿತ ಎಂದು ಹೇ‌ಳಲಾಗುತ್ತಿದೆ. ಒಂದು ವೇಳೆ ಅಜಿಂಕ್ಯಾ ಸ್ಥಾನ ತಪ್ಪಿದ್ದರೇ, ಆ ಸ್ಥಾನ ತುಂಬವನ್ನು ಭಾರತದ ಮೂವರು ಆಟಗಾರರು ತುಂಬಬಹುದು ಎಂದು ಹೇಳಲಾಗುತ್ತಿದೆ. ಬನ್ನಿ ಆ ಮೂವರು ಆಟಗಾರರು ಯಾರು ಎಂದು ತಿಳಿಯೋಣ.

ರೋಹಿತ್ ಶರ್ಮಾ – ಸದ್ಯ ಭಾರತ ತಂಡದ ಏಕದಿನ ಹಾಗೂ ಟಿ20 ತಂಡದ ಉಪನಾಯಕನಾಗಿರುವ ರೋಹಿತ್ ಶರ್ಮಾರನ್ನ ಟೆಸ್ಟ್ ತಂಡದ ಉಪನಾಯಕನನ್ನಾಗಿ ನೇಮಿಸಲು ತಂಡದ ಮ್ಯಾನೇಜ್ ಮೆಂಟ್ ಚಿಂತಿಸುತ್ತಿದೆ. ಕೇವಲ ಭಾರತವಲ್ಲದೇ, ವಿದೇಶಿ ನೆಲದಲ್ಲಿಯೂ ಮಿಂಚುತ್ತಿರುವ ಹಿಟ್ ಮ್ಯಾನ್ ಟೆಸ್ಟ್ ತಂಡದ ಉಪನಾಯಕರಾದರೂ ಆಗಬಹುದು.

ಕೆ.ಎಲ್.ರಾಹುಲ್ – ಭವಿಷ್ಯದ ಭಾರತ ತಂಡದ ನಾಯಕ ಎಂದೇ ಬಿಂಬಿತವಾಗಿದ್ದ ಆಟಗಾರ. ನ್ಯೂಜಿಲೆಂಡ್ ಪ್ರವಾಸದಲ್ಲಿ ಕೆಲ ಸಮಯ ತಂಡವನ್ನ ಮುನ್ನಡೆಸಿದ್ದರು. ಟೆಸ್ಟ್, ಏಕದಿನ, ಟಿ20 ಹೀಗೆ ಮೂರು ಪ್ರಕಾರಗಳಲ್ಲಿ ಯಾವುದೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಇಳಿದರೂ ರನ್ನುಗಳ ಸುರಿಮಳೆ ಸುರಿಸುವ ಆಟಗಾರ. ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ಮುನ್ನಡೆಸಿದ ಅನುಭವ ಸಹ ಇದೆ. ಹಾಗಾಗಿ ರಾಹುಲ್ ರನ್ನ ಉಪನಾಯಕನನ್ನಾಗಿ ಆರಿಸುವ ಸಾಧ್ಯತೆ ಇದೆ.

ರಿಷಭ್ ಪಂತ್ – ಯಂಗ್ ಎಂಡ್ ಎನರ್ಜಿಟೆಕ್ ಆಟಗಾರ ಪಂತ್, ಇನ್ನು 24 ಹರೆಯದ ಪಂತ್ ಸದ್ಯ ಭಾರತ ತಂಡದ ಭರವಸೆ ಆಟಗಾರರಾಗಿದ್ದಾರೆ. ಭಾರತ ತಂಡದ ಭವಿಷ್ಯದ ದೃಷ್ಠಿಯಿಂದ ಯುವ ಕ್ರಿಕೇಟಿಗನನ್ನ ಬೆಳೆಸುವ ದೃಷ್ಠಿಯಿಂದ ರಿಷಭ್ ಪಂತ್ ರನ್ನು ಉಪನಾಯಕನ ಹುದ್ದೆಗೆ ಆಯ್ಕೆ ಮಾಡಿದರೂ ಮಾಡಬಹುದು. ರಿಷಭ್ ಪಂತ್ ಭವಿಷ್ಯದ ಭಾರತ ತಂಡದ ನಾಯಕನಾದರೂ ಆಗಬಹುದು. ಈ ಮೂವರಲ್ಲಿ ಭಾರತ ತಂಡದ ಉಪನಾಯಕ ಯಾರಾಗಬೇಕು ಎಂಬ ನಿಮ್ಮ ಮುಕ್ತ ಅಭಿಪ್ರಾಯವನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.