ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸತತ ವೈಫಲ್ಯಗಳನ್ನು ಎದುರಿಸುತ್ತಿರುವ ಪಾಂಡ್ಯ ಸ್ಥಾನವನ್ನು ವಿಶ್ವಕಪ್ ನಲ್ಲಿ ತುಂಬಲ್ಲ ಟಾಪ್ ಮೂವರು ಆಟಗಾರರು ಯಾರ್ಯಾರು ಗೊತ್ತೇ??

11

ನಮಸ್ಕಾರ ಸ್ನೇಹಿತರೇ ಇನ್ನೇನು ಟಿ 20 ವಿಶ್ವಕಪ್ ಗೆ ಕೆಲವೇ ದಿನಗಳು ಬಾಕಿ ಇವೆ. ಐಪಿಎಲ್ ನ ಮುಂದುವರಿದ ಚರಣ ಮುಗಿದ ನಂತರ ಟಿ 20 ವಿಶ್ವಕಪ್ ಆರಂಭವಾಗಲಿದೆ. ಈ ಭಾರಿ ಭಾರತ ಮೊದಲ ಪಂದ್ಯದಲ್ಲೇ ತನ್ನ ಸಾಂಪ್ರದಾಯಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.ಶೀಘ್ರದಲ್ಲಿಯೇ ಟಿ 20 ತಂಡಕ್ಕೆ ಸಂಭವನೀಯ 30 ಆಟಗಾರರನ್ನು ಬಿಸಿಸಿಐ ಈ ತಿಂಗಳಾಂತ್ಯದಲ್ಲಿ ಘೋಷಿಸುವ ಸಾಧ್ಯತೆ ಇದೆ. ಆದರೇ ಈ ಭಾರಿ ಭಾರತದ ಆಲ್ ರೌಂಡರ್ ಆಗಿದ್ದ ಹಾರ್ದಿಕ್ ಪಾಂಡ್ಯ ತಂಡದಿಂದ ಕೋಕ್ ಪಡೆಯುವ ಸಾಧ್ಯತೆಗಳು ಹೆಚ್ಚಿವೆ.

ಈ ಹಿಂದೆ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಹಾರ್ದಿಕ್ ನಂತರದ ದಿನಗಳಲ್ಲಿ ಮಂಕಾಗಿದ್ದರು. ಇತ್ತಿಚಿಗೆ ನಡೆದ ಶ್ರೀಲಂಕಾ ವಿರುದ್ದದ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ್ದ ಹಾರ್ದಿಕ್ ಪಾಂಡ್ಯ ಒಂದು ಪಂದ್ಯದಲ್ಲಿ ಶೂನ್ಯ ಸುತ್ತಿದ್ದರು. ಬೌಲಿಂಗ್ ನಲ್ಲೂ ಸಹ ಸಾಕಷ್ಟು ದಂಡನೆಗೆ ಒಳಗಾಗಿದ್ದರು. ಹಾಗಾಗಿ ಹಾರ್ದಿಕ್ ಪಾಂಡ್ಯ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನಗಳಿಸುವ ಸಾಧ್ಯತೆ ಕಡಿಮೆ. ಅವರ ಸ್ಥಾನವನ್ನ ತುಂಬಬಲ್ಲ ಭಾರತದ ಮೂವರು ಆಟಗಾರರು ಈ ಕೆಳಗಿನಂತಿದ್ದಾರೆ. ಬನ್ನಿ ಅವರ ಬಗ್ಗೆ ತಿಳಿಯೋಣ.

ಮೊದಲನೆಯದಾಗಿ ಶಾರ್ದೂಲ್ ಠಾಕೂರ್ – ಮುಂಬೈನ ಆಲ್ ರೌಂಡರ್ ತಮ್ಮ ಸ್ವಿಂಗ್ ಬೌಲಿಂಗ್ ನಿಂದ ಹೆಚ್ಚು ಹೆಸರು ಮಾಡಿದ್ದಾರೆ. ಬ್ಯಾಟಿಂಗ್ ನಲ್ಲಿಯೂ ಸಹ ಬಿಗ್ ಹಿಟ್ ಭಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದ ವಿರುದ್ದ ಉಪಯುಕ್ತ ಅರ್ಧಶತಕ ಗಳಿಸಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದರು.

ಎರೆದಂಡೆಯದಾಗಿ ದೀಪಕ್ ಚಾಹರ್ – ಸ್ವಿಂಗ್ ಕಿಂಗ್ ಎಂದೇ ಹೆಸರು ಮಾಡಿರುವ ದೀಪಕ್ ಚಾಹರ್, ಟಿ 20 ಯಲ್ಲಿ ಪವರ್ ಪ್ಲೇಯಲ್ಲಿ ಹೆಚ್ಚು ವಿಕೇಟ್ ಪಡೆದ ದಾಖಲೆ ಹೊಂದಿದ್ದಾರೆ. ಇತ್ತಿಚೆಗಷ್ಟೇ ಶ್ರೀಲಂಕಾ ವಿರುದ್ದ ಪಂದ್ಯದಲ್ಲಿ ಭರ್ಜರಿ 72 ರನ್ ಭಾರಿಸಿ ಏಕಾಂಗಿಯಾಗಿ ತಂಡವನ್ನು ಗೆಲ್ಲಿಸಿದ್ದರು. ಹಾಗಾಗಿ ಹಾರ್ದಿಕ್ ಪಾಂಡ್ಯ ಸ್ಥಾನವನ್ನು ತುಂಬಬಲ್ಲ ಸಮರ್ಥ ಆಟಗಾರ ಎಂದರೇ ದೀಪಕ್ ಚಾಹರ್ ಎಂದು ಹೇಳಲಾಗುತ್ತಿದೆ.

ಮೂರನೆಯದಾಗಿ ಹರ್ಷಲ್ ಪಟೇಲ್ – ಗುಜರಾತ್ ನ ವೇಗಿ ಹರ್ಷಲ್ ಪಟೇಲ್, ಈ ಭಾರಿ ಆರ್.ಸಿ.ಬಿ ತಂಡದ ಪ್ರಮುಖ ಬೌಲರ್ ಆಗಿದ್ದರು. ಅದರಲ್ಲೂ ಸ್ಲಾಗ್ ಓವರ್ ಗಳಲ್ಲಿ ತಮ್ಮ ನಿಧಾನಗತಿಯ ಬೌಲಿಂಗ್ ನಿಂದ ಹೆಚ್ಚು ವಿಕೇಟ್ ಪಡೆದಿದ್ದರು. ಅದಲ್ಲದೇ ಬ್ಯಾಟಿಂಗ್ ನಲ್ಲಿಯೂ ಸಹ ಬಿಗ್ ಹಿಟ್ ಹೊಡೆಯುವ ಸಾಮರ್ಥ್ಯ ಹರ್ಷಲ್ ಪಟೇಲ್ ಗಿದೆ. ಹಾಗಾಗಿ ಹಾರ್ದಿಕ್ ಪಾಂಡ್ಯ ಸ್ಥಾನವನ್ನು ಹರ್ಷಲ್ ಪಟೇಲ್ ತುಂಬಬಹುದು ಎಂಬ ನೀರಿಕ್ಷೆ ಇದೆ. ನಿಮ್ಮ ಪ್ರಕಾರ ಹಾರ್ದಿಕ್ ಪಾಂಡ್ಯ ಸ್ಥಾನವನ್ನು ಯಾವ ಆಟಗಾರ ತುಂಬಿದರೇ ಒಳಿತು ಎಂಬುದರ ಬಗ್ಗೆ ಮುಕ್ತ ಅಭಿಪ್ರಾಯಗಳನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.