ಹೋಟೆಲ್ ಶೈಲಿಯ ಚಿಕನ್ ಘೀ ರೋಸ್ಟ್ ನ್ನ ಮನೆಯಲ್ಲಿಯೇ ಮಾಡುವುದೇ ಹೇಗೆ ಗೊತ್ತಾ?? ಮತ್ತೆ ಮತ್ತೆ ಕೇಳಿ ಮಾಡಿಸ್ಕೊತಾರೆ

ಹೋಟೆಲ್ ಶೈಲಿಯ ಚಿಕನ್ ಘೀ ರೋಸ್ಟ್ ನ್ನ ಮನೆಯಲ್ಲಿಯೇ ಮಾಡುವುದೇ ಹೇಗೆ ಗೊತ್ತಾ?? ಮತ್ತೆ ಮತ್ತೆ ಕೇಳಿ ಮಾಡಿಸ್ಕೊತಾರೆ

ನಮಸ್ಕಾರ ಸ್ನೇಹಿತರೇ ತುಪ್ಪ ಯಾರಿಗಿಷ್ಟವಿಲ್ಲ ಹೇಳಿ. ಪದಾರ್ಥ ಯಾವುದೇ ಇರಲಿ ಅದಕ್ಕೆ ಚೂರೇ ಚೂರು ತುಪ್ಪ ಬಿದ್ದರೇ ಸಾಕು, ಅದರ ರುಚಿ ಹೇಳತೀರದು. ಇನ್ನು ಅಡಿಗೆಯನ್ನೇ ತುಪ್ಪದಲ್ಲಿ ಮಾಡಿದರೇ ಹೇಗಿರಬೇಡ. ಅದರಲ್ಲೂ ನಾನ್ ವೆಜ್ ಪ್ರಿಯರು ಚಿಕನ್ ನ್ನ ತುಪ್ಪದಲ್ಲಿ ಬೇಯಿಸಿ ತಿಂದರೇ ಅದರ ರುಚಿ ವರ್ಣಿಸಲಾಗದು. ಹೋಟೆಲ್ ನಲ್ಲಿ ಸಿಗುವ, ತುಪ್ಪದಲ್ಲಿ ಮಾಡಿದ ಚಿಕನ್ , ಚಿಕನ್ ಘೀ ರೋಸ್ಟ್ ನ್ನ ಮನೆಯಲ್ಲಿ ಮಾಡುವುದು ಹೇಗೆ ಎಂಬುದನ್ನ ತಿಳಿಯೋಣ ಬನ್ನಿ‌.

ಚಿಕನ್ ಘೀ ರೋಸ್ಟ್ ಮಾಡಲು ಬೇಕಾಗುವ ಸಾಮಗ್ರಿಗಳು – ಚಿಕನ್ – ಅರ್ಧ ಕೆಜಿ, ಕರಿಬೇವು – ಸ್ವಲ್ಪ , ಬೆಳ್ಳುಳ್ಳಿ -ಶುಂಠಿ ಪೇಸ್ಟ್ – 2 ಟೇಬಲ್ ಸ್ಪೂನ್ , ರುಚಿಗೆ ತಕ್ಕಷ್ಟು ಉಪ್ಪು,ಸಕ್ಕರೆ – 1 ಟೇಬಲ್ ಸ್ಪೂನ್,ಖಾರದ ಪುಡಿ– 2 ಟೇಬಲ್ ಸ್ಪೂನ್ ಗರಂ ಮಸಾಲಾ ಪುಡಿ – 1 ಟೇಬಲ್ ಸ್ಪೂನ್ ,ಜೀರಿಗೆ ಪುಡಿ – 2 ಟೇಬಲ್ ಸ್ಪೂನ್ ,ಕೊತ್ತಂಬರಿ ಪುಡಿ -1 ಟೇಬಲ್ ಸ್ಪೂನ್ , ಹುಡಿ ಮೆಣಸಿನ ಪುಡಿ – 1 ಟೇಬಲ್ ಸ್ಪೂನ್ ,ಒಣ ಮೆಣಸು – 2 ,ಹುಣಸೆ ಹುಳಿ– 1 ಟೇಬಲ್ ಸ್ಪೂನ್ ,ಟೊಮೆಟೊ ಪೇಸ್ಟ್ – 1 ಕಪ್ ,ತುಪ್ಪ – ನೂರು ಗ್ರಾಂ ಕೊತ್ತಂಬರಿ ಸೊಪ್ಪು- ಸ್ವಲ್ಪ.

ಮಾಡುವ ವಿಧಾನ – ಮೊದಲು ಒಂದು ಪ್ಯಾನ್ ಅಥವಾ ತವಾದಲ್ಲಿ ನೂರು ಗ್ರಾಂ ತುಪ್ಪ ಹಾಕಿ ಅದಕ್ಕೆ ಕರಿಬೇವು, ಜೀರಿಗೆ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ , ಒಣ ಮೆಣಸು ಹಾಕಿ ಚೆನ್ನಾಗಿ ಮಿಶ್ರಣವನ್ನ ಸಣ್ಣ ಉರಿಯಲ್ಲಿ ಮಾಡಿಟ್ಟುಕೊಳ್ಳಬೇಕು.ನಂತರ ಆ ಮಿಶ್ರಣಕ್ಕೆ ಟೋಮ್ಯಾಟೋ ಪೇಸ್ಟ್ ನ್ನ ಬೆರೆಸಿ ಒಂದೆರೆಡು ನಿಮಿಷಗಳ ಕಾಲ ಬೇಯಿಸಬೇಕು. ನಂತರ ಅದಕ್ಕೆ ಕೊತ್ತಂಬರಿ ಪುಡಿ, ಖಾರದ ಪುಡಿಯನ್ನ ಹಾಕಿ ಮಿಶ್ರಣ ಚೆನ್ನಾಗಿ ಬೆರೆಯುವಂತೆ ಬೇಯಿಸಿಕೊಳ್ಳಬೇಕು.

ನಂತರ ಈ ಮಿಶ್ರಣಕ್ಕೆ ಚಿಕನ್ ಬೆರೆಸಿ, ಆ ಚಿಕನ್ ಮೇಲೆ ಎರಡೆರೆಡು ಚಮಚ ತುಪ್ಪವನ್ನ ಹಾಕಬೇಕು. ನಂತರ ಆ ಮಿಶ್ರಣಕ್ಕೆ ಉಪ್ಪು , ಗರಂ ಮಸಾಲಾ ಪುಡಿ, ಕಾಳು ಮೆಣಸಿನ ಪುಡಿ, ಚಿಕನ್ ಮಸಾಲಾ ಇದ್ದರೇ ಚಿಕನ್ ಮಸಾಲಾ ಹೀಗೆ ಎಲ್ಲವನ್ನು ಹಾಕಿ ಐದಾರು ನಿಮಿಷಗಳ ಚೆನ್ನಾಗಿ ಬೇಯಿಸಬೇಕು. ನಂತರ ಬೆಂದ ಆ ಮಿಶ್ರಣಕ್ಕೆ ಒಂದು ಕಪ್ ಹುಣಸೆ ಹುಳಿ, ಒಂದು ಸ್ಪೂನ್ ಸಕ್ಕರೆ ಹಾಗೂ ಕಟ್ ಮಾಡಿಟ್ಟುಕೊಂಡ ಕೊತ್ತಂಬರಿ ಸೊಪ್ಪನ್ನ ಸೇರಿಸಿ ತವಾ ಮುಚ್ಚಿ ಹತ್ತು ನಿಮಿಷಗಳ ಕಾಲ ಬೇಯಿಸಬೇಕು. ಹತ್ತು ನಿಮಿಷದ ನಂತರ ಘಂ ಎನ್ನುವ ಚಿಕನ್ ಘೀ ರೋಸ್ಟ್ ಸವಿಯಲು ಸಿದ್ದ. ರೋಟಿ, ಚಪಾತಿ ಅಥವಾ ಅನ್ನದ ಜೊತೆ ಚಿಕನ್ ಘೀ ರೋಸ್ಟ್ ನ ಸವೆಯಬಹುದು. ನೀವು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ಹಾಗೂ ನಿಮ್ಮ ಅನುಭವಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.