ಟಿ20 ವಿಶ್ವಕಪ್ ಗೆ ಭಾರತ ತಂಡಕ್ಕೆ ಆಯ್ಕೆಯಾಗಲಿರುವ ಮೂವರು ಹೊಸ ಆಟಗಾರರು ಯಾರು ಗೊತ್ತಾ??

ಟಿ20 ವಿಶ್ವಕಪ್ ಗೆ ಭಾರತ ತಂಡಕ್ಕೆ ಆಯ್ಕೆಯಾಗಲಿರುವ ಮೂವರು ಹೊಸ ಆಟಗಾರರು ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಶ್ರೀಲಂಕಾ ವಿರುದ್ದದ ಟಿ20 ಸರಣಿ ಮುಕ್ತಾಯವಾದ ಬೆನ್ನಲ್ಲೇ ವಿರಾಟ್ ಕೊಹ್ಲಿ ನೇತೃತ್ವದ ತಂಡ ಆಗಸ್ಟ್ 4 ರಿಂದ ಇಂಗ್ಲೆಂಡ್ ವಿರುದ್ದ ಐದು ಟೆಸ್ಟ್ ಪಂದ್ಯಗಳನ್ನ ಆಡಲಿದೆ. ಅದು ಮುಗಿದ ನಂತರ ಸೆಪ್ಟೆಂಬರ್ 19 ರಿಂದ ಐಪಿಎಲ್ ನ ಮುಂದುವರಿದ ಚರಣ ಯು.ಎ.ಇ ಯಲ್ಲಿ ಆರಂಭವಾಗಲಿದೆ. ಅದರ ನಂತರ ಅಕ್ಟೋಬರ್ ನವೆಂಬರ್ ನಲ್ಲಿ ಟಿ 20 ವಿಶ್ವಕಪ್ ನಡೆಯಲಿದೆ. ಯು.ಎ.ಇ, ಅಬುದಾಭಿ,ದುಬೈ ಮತ್ತು ಶಾರ್ಜಾಗಳಲ್ಲಿ ಈ ಭಾರಿ ಟಿ20 ವಿಶ್ವಕಪ್ ನಡೆಯಲಿದೆ.

ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಹಾಗೂ ಅಫಘಾನಿಸ್ತಾನ ತಂಡಗಳು ಒಂದು ಗುಂಪಿನಲ್ಲಿದ್ದರೇ, ಮತ್ತೊಂದು ಗುಂಪಿನಲ್ಲಿ ಬಲಿಷ್ಠ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್ , ವೆಸ್ಟ್ ಇಂಡಿಸ್ ತಂಡಗಳು ಇವೆ. ಅರ್ಹತಾ ಸುತ್ತಿನಲ್ಲಿ ಗೆಲ್ಲುವ ತಲಾ ಎರಡು ತಂಡಗಳು ನಂತರ ಈ ಎರಡು ಗುಂಪುಗಳಿಗೆ ಸೇರಿಕೊಳ್ಳುತ್ತವೆ.ಲೀಗ್ ಹಂತದಲ್ಲಿಯೇ ಹೈವೋಲ್ಟೇಜ್ ಪಂದ್ಯವಾದ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಸದ್ಯ ಎಲ್ಲಾ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಪಂದ್ಯವಾಗಿದೆ. ಸದ್ಯ ಶ್ರೀಲಂಕಾದಲ್ಲಿ ನಡೆದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಈ ಮೂವರು ಆಟಗಾರರು ಕೊನೆಯ ಕ್ಷಣದಲ್ಲಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ನೀರಿಕ್ಷೆ ಇದೆ. ಬನ್ನಿ ಆ ಆಟಗಾರರು ಯಾರು ಎಂಬುದನ್ನು ತಿಳಿದುಕೊಳ್ಳೋಣ.

ಸೂರ್ಯ ಕುಮಾರ್ ಯಾದವ್ – ಹಲವಾರು ವರ್ಷಗಳಿಂದ ಐಪಿಎಲ್ ನಲ್ಲಿ ಉತ್ತಮ ಬ್ಯಾಟಿಂಗ್ ನಿಂದ ಗಮನಸೆಳೆದಿದ್ದ ಸೂರ್ಯ ಕುಮಾರ್ ಯಾದವ್ ಗೆ ಕೊನೆಗೂ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಸೂರ್ಯ ಕುಮಾರ್ ಯಾದವ್, ಶ್ರೀಲಂಕಾ ಸರಣಿಯಲ್ಲಿ ಉತ್ತಮ ರನ್ ಗಳಿಸಿದ್ದರು. ಹಾಗಾಗಿ ಸೂರ್ಯ ಕುಮಾರ್ ಯಾದವ್ ಗೆ ಮಧ್ಯಮ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಗುವುದು ಬಹುತೇಖ ಖಚಿತ ಎಂದು ಹೇಳಲಾಗುತ್ತಿದೆ.

ಪೃಥ್ವಿ ಶಾ – ಕಳಪೆ ಫಾರ್ಮ್ ನಿಂದ ತಂಡದಿಂದಲೇ ಹೊರಬಿದ್ದಿದ್ದ ಪೃಥ್ವಿ ಶಾ ಈಗ.ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಏಕದಿನ ಪಂದ್ಯಗಳಲ್ಲೂ ಟಿ20 ಸ್ಟ್ರೈಕ್ ರೇಟ್ ನಿಂದ ಆಡಿದ್ದ ಶಾ , ಶ್ರೀಲಂಕಾ ಬೌಲರ್ ಗಳಿಗೆ ನಡುಕ ಹುಟ್ಟಿಸಿದ್ದರು. ಹಾಗಾಗಿ ಪೃಥ್ವಿ ಶಾ ಮುಂಬರುವ ಟಿ20 ವಿಶ್ವಕಪ್ ನಲ್ಲಿ ಬ್ಯಾಕ್ ಅಪ್ ಆರಂಭಿಕರಾಗಿ ಆಯ್ಕೆಗೊಳ್ಳುವ ಸಾಧ್ಯತೆ ಬಹಳಷ್ಟಿದೆ.

ರಾಹುಲ್ ಚಾಹರ್ – ಯುವ ಲೆಗ್ ಸ್ಪಿನ್ನರ್ ರಾಹುಲ್ ಚಾಹರ್ ಸಹ ಶ್ರೀಲಂಕಾ ಪ್ರವಾಸದಲ್ಲಿ ತಮ್ಮ ಗೂಗ್ಲಿಗಳ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರು. ಸಿಕ್ಕ ಅವಕಾಶದಲ್ಲಿಯೇ ಮೂರು ವಿಕೇಟ್ ಕಬಳಿಸುವ ಮೂಲಕ ತಾವೊಬ್ಬ ವಿಕೇಟ್ ಟೇಕಿಂಗ್ ಬೌಲರ್ ಎಂದು ಸಾಬೀತು ಪಡಿಸಿದ್ದಾರೆ. ಹಾಗಾಗಿ ರಾಹುಲ್ ಚಾಹರ್ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಕ್ ಅಪ್ ಲೆಗ್ ಸ್ಪಿನ್ನರ್ ಆಗಿ ಆಯ್ಕೆಗೊಳ್ಳುವ ಸಾಧ್ಯತೆಯೇ ಹೆಚ್ಚು ಎಂದು ಹೇಳಲಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.