ಮತ್ತೊಂದು ಐತಿಹಾಸಿಕ ಯೋಜನೆ ಘೋಷಿಸಿದ ಮೋದಿ, ಈ ಬಾರಿ ಎಷ್ಟು ಲಕ್ಷ ಕೋಟಿ ಗೊತ್ತಾ? ಯೋಜನೆಯ ಉದ್ದೇಶವೇನು ಗೊತ್ತೇ??

ಮತ್ತೊಂದು ಐತಿಹಾಸಿಕ ಯೋಜನೆ ಘೋಷಿಸಿದ ಮೋದಿ, ಈ ಬಾರಿ ಎಷ್ಟು ಲಕ್ಷ ಕೋಟಿ ಗೊತ್ತಾ? ಯೋಜನೆಯ ಉದ್ದೇಶವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ 2014 ರಿಂದಲೂ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೇರವೇರಿಸಿ ಅದ್ಭುತ ಭಾಷಣ ಮಾಡುತ್ತಾ ದೇಶಕ್ಕಾಗಿ ಹಲವಾರು ಘೋಷಣೆಗಳನ್ನು ಮಾಡುತ್ತಾ ಬಂದಿರುವ ಪ್ರಧಾನಿ ನರೇಂದ್ರ ಮೋದಿ, ಇಂದು 75 ನೇ ಸ್ವಾತಂತ್ರೋತ್ಸವದ ದಿನದಂದು ಸಹ ಹೊಸ ಘೋಷಣೆಗಳನ್ನ ತಮ್ಮ ಭಾಷಣದಲ್ಲಿ ಮಾಡಿದ್ದಾರೆ. ಆದರೇ ಇಂದಿನ ಭಾಷಣದಲ್ಲಿ ಅತಿ ಹೆಚ್ಚು ಗಮನಸೆಳೆದ ವಿಷಯ ಅಂದರೇ ಅದು ಗತಿ ಶಕ್ತಿ ಯೋಜನೆ.

ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರದ ವತಿಯಿಂದ 100 ಲಕ್ಷ ಕೋಟಿ ಯೋಜನೆಯ ಗತಿಶಕ್ತಿ ಯೋಜನೆಯನ್ನ ಆರಂಭಿಸುವುದಾಗಿ ಪ್ರಧಾನಿ ಮೋದಿ ಹೇಳಿದರು. ಹಾಗಿದ್ದರೇ ಗತಿ ಶಕ್ತಿ ಯೋಜನೆ ಎಂದರೇ ಏನು, ಅದಕ್ಕೆ 100 ಲಕ್ಷ ಕೋಟಿ ಏಕೆ ಎಂಬಿತ್ಯಾದಿ ನಿಮ್ಮ ಪ್ರಶ್ನೆಗಳಿಗೆ ಉತ್ತರ ಈ ಕೆಳಕಂಡಂತಿದೆ. ಬನ್ನಿ ತಿಳಿಯೋಣ.

ಗತಿಶಕ್ತಿ ಯೋಜನೆ ಎಂದರೇ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆಂದೇ ರೂಪಿಸಿದ ಯೋಜನೆಯಾಗಿದೆ. ಮೂಲಸೌಕರ್ಯ ಅಭಿವೃದ್ಧಿಯಿಂದ ಯುವಜನತೆಗೆ ಬಹುಪಾಲು, ಕೌಶಲ್ಯಾಧಾರಿತ ಉದ್ಯೋಗಗಳು ದೊರೆಯುತ್ತವೆ. ಒಂದು ದೇಶದ ಆರ್ಥಿಕತೆ ನಿರ್ಧಾರವಾಗುವುದು ಆಮದು ಹಾಗೂ ರಫ್ತಿನ ಪ್ರಮಾಣದ ಮೇಲೆ. ಗತಿಶಕ್ತಿಯೋಜನೆ ಸಮಗ್ರವಾಗಿ ಭಾರತದಲ್ಲಿ ಜಾರಿಯಾದರೇ ಭಾರತದ ರಫ್ತು ಹಾಗೂ ಆಮದು ಎಲ್ಲವೂ ಬ್ರಾಂಡ್ ಆಗಿ ರೂಪುಗೊಳ್ಳುತ್ತವೆ‌. ಭಾರತದ ಭವಿಷ್ಯ ಕೆಲವೇ ವರ್ಷಗಳಲ್ಲಿ ಬದಲಾಗಲಿದೆ ಎಂದು ಮೋದಿ ಹೇಳಿದ್ದಾರೆ.

ಮೂಲಸೌಕರ್ಯಗಳು ಹೆಚ್ಚಾದಂತೆ ದೇಶಕ್ಕೆ ಬಂಡವಾಳದ ಮಹಾಪೂರವೇ ಹರಿದು ಬರಲಿದೆ. ಭಾರತದಲ್ಲಿ ಮಾನವ ಸಂಪನ್ಮೂಲ ಹಾಗೂ ಕೌಶಲ್ಯಭರಿತ ಯುವಜನತೆಯಿಂದ ಖಂಡಿತವಾಗಿಯೂ ಭಾರತ ವಿಶ್ವದ ಪ್ರಬಲ ಆರ್ಥಿಕಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಈಗ ನೀಲ ನಕಾಶೆ ಸಿದ್ದವಾಗಿದ್ದು , ಶೀಘ್ರದಲ್ಲೇ ಕೇಂದ್ರ ಸರ್ಕಾರದ ವತಿಯಿಂದ ಸುದ್ದಿಗೋಷ್ಠಿ ಕರೆದು ಗತಿಶಕ್ತಿಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು. ಅದಲ್ಲದೇ ಈ ಭಾರಿ ಹೈಡ್ರೋಜನ್ ಮಿಷನ್ ಹಾಗೂ ಕೇಂದ್ರ ಸೈನಿಕ ಶಾಲೆಗಳಲ್ಲಿ ಮುಂಬರುವ ದಿನಗಳಲ್ಲಿ ಹೆಣ್ಣು ಮಕ್ಕಳಿಗೂ ಸಹ ಪ್ರವೇಶ ನೀಡುವ ಮುಂತಾದ ಜನಪ್ರಿಯ ಯೋಜನೆಗಳನ್ನ ಮೋದಿ ಪ್ರಕಟಿಸಿದ್ದಾರೆ. ನರೇಂದ್ರ ಮೋದಿ ಘೋಷಿಸಿರುವ ಈ ಯೋಜನೆಯ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.