ಟ್ರೆಂಡ್ ಪ್ರಕಾರ ಕನ್ನಡ ನಟಿ ಮಣಿಯರು ಒಂದು ಸಿನೆಮಾಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ??ಯಾರು ಹೆಚ್ಚು ಗೊತ್ತಾ??
ಟ್ರೆಂಡ್ ಪ್ರಕಾರ ಕನ್ನಡ ನಟಿ ಮಣಿಯರು ಒಂದು ಸಿನೆಮಾಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ??ಯಾರು ಹೆಚ್ಚು ಗೊತ್ತಾ??
ನಮಸ್ಕಾರ ಸ್ನೇಹಿತರೇ ನಾವು ಚಿತ್ರರಂಗದ ಬಗ್ಗೆ ಮಾತಾಡುವಾಗ ನಾಯಕ ನಟರ ಸಂಭಾವನೆ ಕುರಿತಂತೆ ಮಾತ್ರ ಮಾತನಾಡುತ್ತೇವೆ. ನಾಯಕ ನಟಿಯರ ಕುರಿತಂತೆ ನಾವು ಮಾತನಾಡುವುದು ಕಡಿಮೆ. ಆದರೆ ನಾವು ಇಂದು ಕೇವಲ ನಾಯಕರಷ್ಟೇ ಮಾತ್ರವಲ್ಲದೆ ನಾಯಕ ನಟಿಯರು ಕೂಡ ಅತ್ಯಂತ ದೊಡ್ಡ ಸಂಭಾವನೆಯನ್ನು ಪಡೆಯುತ್ತಾರೆ ಎಂಬುದನ್ನು ಕೂಡ ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಈಗಿನ ಕಾಲದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಕುರಿತಂತೆ ನಾವು ನಿಮಗೆ ಸಂಪೂರ್ಣ ವಿವರವಾಗಿ ಹೇಳಿದ್ದೇವೆ.
ರಶ್ಮಿಕ ಮಂದಣ್ಣ ಸ್ನೇಹಿತರೆ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಕರ್ನಾಟಕದ ಕೃಷ್ ಆಗಿ ಜನಪ್ರಿಯರಾಗಿದ್ದರು ಕೊಡಗಿನ ಕುವರಿ ರಶ್ಮಿಕ ಮಂದಣ್ಣ. ನಂತರ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಈಗ ಕನ್ನಡ ತಮಿಳು ತೆಲುಗು ಹಿಂದಿ ಚಿತ್ರಗಳಲ್ಲಿ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇವರು ಒಂದು ಚಿತ್ರಕ್ಕೆ 65 ಲಕ್ಷ ರೂಪಾಯಿಯ ಬರೋಬ್ಬರಿ ಸಂಭಾವನೆಯನ್ನು ಪಡೆಯುತ್ತಾರೆ. ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿ ಕೂಡ ಇವರೇ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿಸುವುದನ್ನು ಇವರು ಕಡಿಮೆ ಮಾಡಿದ್ದಾರೆ ಎಂದು ಹೇಳಬಹುದಾಗಿದೆ.
ಡಿಂಪಲ್ ಕ್ವೀನ್ ರಚಿತಾ ರಾಮ್ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಿನಿಮಾಗಳಲ್ಲಿ ಈಗ ನಡೆಸುವ ಸ್ಟಾರ್ ನಟಿ ಎಂದರೆ ಅದು ಖಂಡಿತವಾಗಿಯೂ ಡಿಂಪಲ್ ಕ್ವೀನ್ ರಚಿತಾ ರಾಮ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬುಲ್ ಬುಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಂತಹ ರಚಿತರಾಮ್ ರವರು ಇಂದಿನವರೆಗೂ ಕೂಡ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇವರು ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಗಳ ಆದಂತಹ ದರ್ಶನ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರಿಯಲ್ ಸ್ಟಾರ್ ಉಪೇಂದ್ರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗೋಲ್ಡನ್ ಸ್ಟಾರ್ ಗಣೇಶ್ ಹೀಗೆ ಎಲ್ಲಾ ದೊಡ್ಡ ನಟರೊಂದಿಗೆ ನಟಿಸಿರುವ ಅನುಭವವಿದೆ. ಅಪ್ಪಟ ಕನ್ನಡತಿ ಯಾಗಿ ಇಂದಿನವರೆಗೂ ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ತೆಲುಗು ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿರುವ ರಚಿತರಾಮ್ ರವರು ತಮ್ಮ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ. ಇನ್ನು ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಒಂದು ಸಿನಿಮಾಗೆ 45ರಿಂದ 50 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ.
ಶಾನ್ವಿ ಮೂಲತಹ ಪರಭಾಷೆಯವರು ಆದರೂ ಕೂಡ ಕನ್ನಡ ಕಲಿತು ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಿರುವಂತಹ ನಟಿಯೆಂದರೆ ಅದು ಖಂಡಿತವಾಗಿಯೂ ಶಾನ್ವಿ. ಮುಗ್ಧ ನಟನೆ ಹಾಗೂ ಲವಲವಿಕೆಯ ಮುಖಭಾವದಿಂದ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದರು ಕೂಡ ಕನ್ನಡ ಚಿತ್ರದಲ್ಲಿ ಆಗೀಗ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇವರು ಒಂದು ಚಿತ್ರಕ್ಕೆ 25ರಿಂದ 30 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ.
ಶ್ರದ್ಧಾ ಶ್ರೀನಾಥ್ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ನಿರ್ದೇಶನದ ಯುಟರ್ನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಂತಹ ಶ್ರದ್ಧಾ ಶ್ರೀನಾಥ್ ಅವರು ಕನ್ನಡ ಪ್ರೇಕ್ಷಕರ ನೆಚ್ಚಿನ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇನ್ನು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಶ್ರದ್ಧಾ ಶ್ರೀನಾಥ್ ಅವರ ಹೆಸರು ಸಾಕಷ್ಟು ಪ್ರಸಿದ್ಧಿಯನ್ನು ಹೊಂದಿದೆ. ಇನ್ನು ಶ್ರದ್ಧಾ ಶ್ರೀನಾಥ್ ರವರು ಬರೋಬ್ಬರಿ ಒಂದು ಚಿತ್ರಕ್ಕೆ 20 ಲಕ್ಷಕ್ಕೂ ಹೆಚ್ಚು ಸಂಭಾವನೆಯನ್ನು ಪಡೆಯುತ್ತಾರೆ. ಯಾವುದೇ ಪಾತ್ರವನ್ನು ಸಲೀಸಾಗಿ ನಿರ್ವಹಿಸಬಲ್ಲಂತಹ ಚಾಕಚಕ್ಯತೆ ಶ್ರದ್ಧಾ ಶ್ರೀನಾಥ್ ಅವರಿಗೆ ಇದೆ.
ಆಶಿಕಾ ರಂಗನಾಥ್ ಕನ್ನಡ ಚಿತ್ರರಂಗದ ಮಿಲ್ಕಿ ಬ್ಯೂಟಿ ಎಂದೇ ಖ್ಯಾತರಾಗಿರುವ ಆಶಿಕ ರಂಗನಾಥ್ ಅವರು ಕೂಡ ಇತ್ತೀಚಿನ ದಿನಗಳಲ್ಲಿ ಕನ್ನಡ ಪ್ರೇಕ್ಷಕರ ನೆಚ್ಚಿನ ನಟಿ ಹಾಗೂ ಚಿತ್ರರಂಗದ ಉದಯೋನ್ಮುಖ ಯುವ ನಟಿ. ಇವರು ಈಗಾಗಲೇ ಯಾವುದೇ ದೊಡ್ಡ ಸ್ಟಾರ್ ಜೊತೆಗೆ ನಟಿಸದಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ3 ಚಿತ್ರದ ಪಟಾಕಿ ಪೋರಿಯೋ ಸಾಂಗ್ ಗೆ ಕುಣಿದು ಆಶಿಕ ರಂಗನಾಥ್ ರವರು ಪಡ್ಡೆಹೈಕಳ ಮನಸ್ಸನ್ನು ಗೆದ್ದಿದ್ದರು. ಇನ್ನು ಆಶಿಕಾ ರಂಗನಾಥ್ ಅವರು ಪ್ರತಿ ಚಿತ್ರಕ್ಕೆ 20 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ನೋಡಿದ್ರಲ್ಲ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದ ಟಾಪ್ ಸಂಭಾವನೆ ಪಡೆಯುವ ನಟಿಯರ ಕುರಿತಂತೆ. ಇದರಲ್ಲಿ ನಿಮ್ಮ ನೆಚ್ಚಿನ ನಟಿ ಯಾರೆಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ